ಹುಬ್ಬಳ್ಳಿ: ನಗರದ ಕನಕದಾಸ ಶಿಕ್ಷಣ ಮಹಾವಿದ್ಯಾಲಯದಲ್ಲಿ ಶುಕ್ರವಾರ ಸಮೂಹ ಮಹಾವಿದ್ಯಾಲಯಗಳ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ೭೫ನೇ ಗಣರಾಜ್ಯೋತ್ಸವ ಸಮಾರಂಭದಲ್ಲಿ ಧ್ವಜಾರೋಹಣವನ್ನು ಸಂಸ್ಥೆಯ ಉಪಾಧ್ಯಕ್ಷ ಶಾಂತಣ್ಣ ಕಡಿವಾಲ ನೆರವೇರಿಸಿದರು.
ಈ ಸಂದರ್ಭದಲ್ಲಿ ಪ್ರಸಿದ್ಧ ನ್ಯಾಯಾಧೀಶರಾದ ಸಂಜೀವ ಬಡಸ್ಕರ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಕವಿವಿ ಸಿಂಡಿಕೇಟ್ ಸದಸ್ಯರು ಮತ್ತು ವಿಜಯನಗರ ಪಿ.ಯು ಕಾಲೇಜಿನ ಪ್ರಾಚಾರ್ಯರಾದ ಸಂದೀಪ ಬೂದಿಹಾಳ, ಬಿ.ಇಡಿ ಪ್ರಾಚಾರ್ಯರಾದ ಶ್ರೀಮತಿ ಡಾ. ಎನ್.ಡಿ ಶೇಖ, ಪದವಿ ಪ್ರಾಚಾರ್ಯರಾದ ಪ್ರೊ. ಬಿ.ಜಿ ಮಡ್ಲಿ, ಎಂ.ಇಡಿ ಸಂಯೋಜಕರಾದ ಡಾ. ಎಚ್.ವಿ ಬೆಳಗಲಿ, ಎಂ.ಕಾಮ್ ಸಂಯೋಜಕರಾದ ಶ್ರೀಮತಿ ಜಯದೇವಿ ಚರಂತಿಮಠ. ಎಂ.ಎ ಪತ್ರಿಕೋದ್ಯಮ ವಿಭಾಗದ ಸಂಯೋಜಕರಾದ ಪ್ರೊ. ಬೀರೇಶ್ ತಿರಕಪ್ಪನವರ, ದೈಹಿಕ ನಿರ್ದೇಶಕರಾದ ಎಚ್.ಆರ್ ಕುರಿ, ಎನ್‌ಸಿಸಿ ಲೆಪ್ಟಿನೆಂಟ್ ಆಫಿಸರ್ ಡಾ. ಗಿರೀಶ್ ಚಿಲ್ಲಣ್ಣನವರ, ಬಸವರಾಜ ದಳವಾಯಿ, ನಜೀರಹ್ಮದ್ ಕೋಲಕಾರ, ಸೇರಿದಂತೆ ಬೋಧಕ ಬೋಧಕೇತರ ಸಿಬ್ಬಂಧಿ ಹಾಗೂ ಎನ್‌ಸಿ.ಸಿ ಮತ್ತು ಎನ್‌ಎಸ್‌ಎಸ್ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಉಪನ್ಯಾಸಕರಾದ ಕೆ.ಬಿ ಕುರಿ ಡಾ. ಪಿ.ಎಸ್ ಹೆಗಡಿ, ಡಾ. ಜೆ.ಸಿ ಹಿರೇಮಠ ಉಪಸ್ಥಿತರಿದ್ದರು.