ಧಾರವಾಡ ಜ.27: ವಾರಣಾಶಿಯ ಕಾಶಿ ಮಹಾಪೀಠದ 1008 ಜಗದ್ಗುರು ಡಾ.ಚಂದ್ರಶೇಖರ ಶಿವಾಚಾರ್ಯ ಭಗವತ್ಪಾದರ ದಿವ್ಯಸಾನಿಧ್ಯದಲ್ಲಿ ಹುಬ್ಬಳ್ಳಿ ತಾಲೂಕಿನ ಸುತಗಟ್ಟಿಯ ಪಂಚಾಕ್ಷರಿನಗರದಲ್ಲಿರುವ ಕಾಶಿ ಖಾಸಾ ಶಾಖಾಮಠದ ಪಟ್ಟಾಧ್ಯಕ್ಷರಾದ ಷ.ಬ್ರ.ರಾಜಶೇಖರ ಶಿವಾಚಾರ್ಯ ಸ್ವಾಮಿಗಳವರ 12ನೇ ವರ್ಷದ ಪಟ್ಟಾಧಿಕಾರ ವರ್ಧಂತಿ ಮಹೋತ್ಸವ ಹಾಗೂ ಸಿದ್ಧಾಂತ ಶಿಖಾಮಣಿ ಪ್ರವಚನವನ್ನು ಜನವರಿ 29 ರಿಂದ ಫೆಬ್ರವರಿ 3 ರ ವರೆಗೆ ಸುತಗಟ್ಟಿಯ ಪಂಚಾಕ್ಷರಿನಗರದ ಶ್ರೀ ಜಗದ್ಗುರು ಪಂಚಾಚಾರ್ಯ ಶಿವಯೋಗ ಪುಣ್ಯಾಶ್ರಮ ಟ್ರಸ್ಟ್ ಆವರಣದಲ್ಲಿ ಆಯೋಜಿಸಲಾಗಿದೆ.
ಈ ಕುರಿತು ಪ್ರಕಟಣೆ ನೀಡಿರುವ ಸುತಗಟ್ಟಿಯ ಶ್ರೀ ಜಗದ್ಗುರು ಪಂಚಾಚಾರ್ಯ ಶಿವಯೋಗ ಪುಣ್ಯಾಶ್ರಮ ಟ್ರಸ್ಟ್, ಪ್ರತಿ ದಿನ ಸಂಜೆ 6 ರಿಂದ 7 ಗಂಟೆಯವರೆಗೆ ಸಿದ್ಧಾಂತ ಶಿಖಾಮಣಿ ಪ್ರವಚನ ಜರುಗಲಿದೆ. ಫೆಬ್ರವರಿ 1 ರಿಂದ 3 ರವರೆಗೆ ಮಠದ ಆವರಣದಲ್ಲಿ ಉಚಿತ ಕಣ್ಣಿನ ತಪಾಷಣೆ ಶಿಬಿರವನ್ನು ಆಯೊಜಿಸಲಾಗಿದೆ ಮತ್ತು ಫೆಬ್ರವರಿ 2 ರ ಬೆಳಿಗ್ಗೆ 7 ಗಂಟೆಗೆ ಜಂಗಮ ವಟುಗಳಿಗೆ ಅಯ್ಯಾಚಾರ ದೀಕ್ಷೆ ಹಾಗೂ ಭಕ್ತರಿಗೆ ಶಿವದೀಕ್ಷೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದೆ.
ಜನವರಿ 29, 2024 ರಂದು ಸಂಜೆ 6 ಗಂಟೆಗೆ ಆಯೋಜಿಸಿರುವ ಕಾರ್ಯಕ್ರಮದಲ್ಲಿ ಸುಳ್ಳ ಪಂಚಗ್ರಹ ಹಿರೇಮಠದ ಶಿವಸಿದ್ಧರಾಮೇಶ್ವರ ಶಿವಾಚಾರ್ಯರು ದಿವ್ಯ ಸಾನಿಧ್ಯ ವಹಿಸುವರು. ಗೋಕುಲದ ಶ್ರೀ ಘನಲಿಂಗ ದೇವರು ಅವರು ಕಾರ್ಯಕ್ರಮದಲ್ಲಿ ಧರ್ಮ ಸಂದೇಶ ನೀಡುವರು. ಕಾಶಿ ಶ್ರೀ ಮಠದ ಗುರುಕುಲದ ವಿದ್ಯಾರ್ಥಿಗಳಿಂದ ಕಾರ್ಯಕ್ರಮದಲ್ಲಿ ವೇದಘೋಷ ನಡೆಯಲ್ಲಿದೆ.
ನವನಗರದ ವೀರಶೈವ ಸಮಾಜ ಸಂಘಟನಾ ಸಮಿತಿ ಹಾಗೂ ಪಂಚಾಕ್ಷರಿನಗರ ಅಭಿವೃದ್ಧಿ ಸಂಘ ಮತ್ತು ಸುತ-ಮುತ್ತಲಿನ ದೇವಸ್ಥಾನ ಸೇವಾ ಸಂಘ-ಸಂಸ್ಥೆಗಳ ಪದಾಧಿಕಾರಿಗಳು ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದು, ರಾಮನಗೌಡ ಪಾಟೀಲ, ಗಂಗಿದಾಳ ದೇವಸ್ಥಾನ ಸಮಿತಿಯ ಮಲ್ಲಿಕಾರ್ಜುನ, ಸತ್ತೂರಿನ ಚನಬಸಪ್ಪ ಕರಡೇಣ್ಣನವರ ಹಾಗೂ ಸತ್ತೂರಿನ ರಾಜಲಕ್ಷ್ಮಿ ದೇವಸ್ಥಾನ ಸಮಿತಿಯ ಆರ್. ಎ. ಕೊಣ್ಣೂರ ಅವರು ಕಾರ್ಯಕ್ರಮದಲ್ಲಿ ಗುರುರಕ್ಷೆ ಪಡೆಯಲಿದ್ದಾರೆ.
ಜನವರಿ 30, 2024 ರಂದು ಸಂಜೆ 6 ಗಂಟೆಗೆ ಆಯೋಜಿಸಿರುವ ಕಾರ್ಯಕ್ರಮದಲ್ಲಿ ಮಹಾರಾಷ್ಟ್ರದ ನಾಗಣಸೂರಿನ ಹಿರೇಮಠದ ಶ್ರೀಕಂಠ ಶಿವಾಚಾರ್ಯರು ಹಾಗೂ ಮೈಂದರ್ಗಿಯ ನೀಲಕಂಠ ಶಿವಾಚಾರ್ಯರು ದಿವ್ಯ ಸಾನಿಧ್ಯ ವಹಿಸಲಿದ್ದು, ಮಾಜಿ ಲೋಕಸಭಾ ಸದಸ್ಯ ಮಂಜುನಾಥ ಕುನ್ನೂರ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕøತ ಡಾ. ಎಸ್.ಆರ್.ರಾಮನಗೌಡ್ರ, ಬಸವರಾಜ ಕೌಜಲಗಿ, ಕಲಘಟಗಿಯ ತಂಬೂರಿನ ವೀರಯ್ಯ ಹಿರೇಮಠ, ವರೂರಿನ ಸದಾಶಿವಯ್ಯ ಹಿರೇಮಠ, ಕೆ.ಸಿ.ಸಿ.ಬ್ಯಾಂಕನ ಉಪಾಧ್ಯಕ್ಷ ಎನ್.ಎಮ್.ಮರಿಗೌಡ್ರ ಹಾಗೂ ರಾಜಕೀಯ ಧುರೀಣ ಚನ್ನಪ್ಪ ಕಮಡೊಳ್ಳಿ ಅವರು ಕಾರ್ಯಕ್ರಮದಲ್ಲಿ ಗುರುರಕ್ಷೆ ಪಡೆಯಲಿದ್ದಾರೆ.
ಜನವರಿ 31, 2024 ರಂದು ಸಂಜೆ 6 ಗಂಟೆಗೆ ಆಯೋಜಿಸಿರುವ ಕಾರ್ಯಕ್ರಮದಲ್ಲಿ ಬಳ್ಳಾರಿಯ ಕಲ್ಯಾಣಮಠದ ಕಲ್ಯಾಣ ಸ್ವಾಮಿಗಳು ಹಾಗೂ ಮಣಿಕಟ್ಟಿ ಹಿರೇಮಠದ ವಿಶ್ವಾರಾಧ್ಯ ಶಿವಾಚಾರ್ಯರು ದಿವ್ಯ ಸಾನಿಧ್ಯ ವಹಿಸಲಿದ್ದು, ಹುಬ್ಬಳ್ಳಿಯ ಸದ್ಬೋದನಾ ಸಂಸ್ಥೆ ಅಧ್ಯಕ್ಷ ಪ್ರಕಾಶ ಬೆಂಡಿಗೇರಿ, ನ್ಯಾಯವಾಧಿಗಳಾದ ಪ್ರಕಾಶ ಅಂದಾನಿಮಠ, ರವಿ ಗೌಳಿ ಹಾಗೂ ವರೂರಿನ ಗುರು ಹಿರೇಮಠ, ಎಸ್. ವಿ. ಅಂಗಡಿ, ಜಿ. ಬಿ. ಹೊಸಮನಿ, ಜಗದೀಶ ಕೆ.ಇಂಡಿ, ಗಜಾನನ ಜಡಿ, ಹುಬ್ಬಳ್ಳಿಯ ವಿಶ್ವನಾಥ ಮಂದಿರ ಅರ್ಚಕ ಬಸಯ್ಯ ಶಾಸ್ತ್ರಿ ಹಾಗೂ ಬೆಟದೂರಿನ ನಡೂರಮಠದ ಶಿವಮೂರ್ತಯ್ಯ ಸ್ವಾಮಿ ಅವರು ಕಾರ್ಯಕ್ರಮದಲ್ಲಿ ಗುರುರಕ್ಷೆ ಪಡೆಯಲಿದ್ದಾರೆ.
ಫೆಬ್ರವರಿ 1, 2024 ರಂದು ಸಂಜೆ 6 ಗಂಟೆಗೆ ಆಯೋಜಿಸಿರುವ ಕಾರ್ಯಕ್ರಮದಲ್ಲಿ ವಾರಣಾಶಿಯ ಕಾಶಿ ಮಹಾಪೀಠದ ಶ್ರೀ ಶ್ರೀ ಶ್ರೀ 1008 ಜಗದ್ಗುರು ಡಾ. ಚಂದ್ರಶೇಖರ ಶಿವಾಚಾರ್ಯ ಭಗವತ್ಪಾದರು ದಿವ್ಯ ಸಾನಿಧ್ಯ ವಹಿಸಲಿದ್ದು, ಕೇರೂರಿನ ಡಾ. ಶಿವಕುಮಾರ ಶಿವಾಚಾರ್ಯರು ಹಾಗೂ ಗುಳೇದಗುಡ್ಡ ಅಮರೇಶ್ವರ ಮಠದ ಡಾ. ನೀಲಕಂಠ ಶಿವಾಚಾರ್ಯರು ಕಾರ್ಯಕ್ರಮದಲ್ಲಿ ಧರ್ಮಸಂದೇಶ ನೀಡುವರು.
ಮಾಜಿ ಸಚಿವ ಅಪ್ಪಾಸಾಹೇಬ ಪಟ್ಟಣಶೆಟ್ಟಿ, ಹಿರಿಯ ನಾಯಕ ಎಮ್. ಆರ್. ಪಾಟೀಲ, ಸಿದ್ಧಾರಾಮ ವಾಲಿ, ಸಣ್ಣಪ್ಪ ಯಲ್ಲಪ್ಪ ತಳವಾರ, ಬಂಗಾರೇಶ ಹಿರೇಮಠ, ರಾಜಶೇಖರ ಮೆಣಸಿನಕಾಯಿ, ಬ್ಯಾಂಕ್ ಚೆರಮನ್ ವಿಜಯ ಕುಲಕರ್ಣಿ, ಮೈಸಲಗಿ ಗ್ರಾ.ಪಂ. ಅಧ್ಯಕ್ಷ ಸುನೀಲ ಖೇಡ, ಅಕ್ಕಲಕೋಟದ ಡಾ. ವಿಶ್ವನಾಥ (ಶೇಬರ) ಹಿರೇಮಠ, ಉಣಕಲ್ ಸಿದ್ದಪ್ಪಜ್ಜನ ಗದ್ದುಗೆ ಟ್ರಸ್ಟ್ ಕಮೀಟಿ ಅಧ್ಯಕ್ಷ ಶಿವ ಎಮ್. ಪಾಟೀಲ ಅವರು ಕಾರ್ಯಕ್ರಮದಲ್ಲಿ ಗುರುರಕ್ಷೆ ಪಡೆಯಲಿದ್ದಾರೆ.
ಫೆಬ್ರವರಿ 2, 2024 ರಂದು ಸಂಜೆ 6 ಗಂಟೆಗೆ ಆಯೋಜಿಸಿರುವ ಕಾರ್ಯಕ್ರಮದಲ್ಲಿ ಕೊಣ್ಣೂರಿನ ಸಿದ್ಧಲಿಂಗ ಶಿವಾಚಾರ್ಯರು ದಿವ್ಯಸಾನಿಧ್ಯ ವಹಿಸಲಿದ್ದು, ಶಾಸಕ ಅರವಿಂದ ಬೆಲ್ಲದ, ಹುಬ್ಬಳಿ-ಧಾರವಾಡ ಮಹಾನಗರ ಪಾಲಿಕೆಯ ಸದಸ್ಯರಾದ ಸುನಿತಾ ಮಾಳವದಕರ, ಮಂಜುನಾಥ ಬುರ್ಲಿ, ವಿಜಯಕುಮಾರ ಅಪ್ಪಾಜಿ ಹಾಗೂ ಗಾಮನಗಟ್ಟಿಯ ಮಾಜಿ ಸದಸ್ಯ ಕರಿಯಪ್ಪ ಬಿಸಗಲ್ಲಿ ಅವರು ಕಾರ್ಯಕ್ರಮದಲ್ಲಿ ಗುರುರಕ್ಷೆ ಪಡೆಯಲಿದ್ದಾರೆ.
ಫೆಬ್ರವರಿ 3, 2024 ರಂದು ಸಂಜೆ 6 ಗಂಟೆಗೆ ಆಯೋಜಿಸಿರುವ ಕಾರ್ಯಕ್ರಮದಲ್ಲಿ ನರೇಗಲ್ಲನ ಹಿರೇಮಠದ ಮಲ್ಲಿಕಾರ್ಜುನ ಶಿವಾಚಾರ್ಯರು ಹಾಗೂ ಕನಕಗಿರಿಯ ಸುವರ್ಣಗಿರಿ ಸಂಸ್ಥಾನ ವಿರಕ್ತಮಠದ ಚನ್ನಮಲ್ಲ ಸ್ವಾಮಿಗಳು ದಿವ್ಯಸಾನಿಧ್ಯ ವಹಿಸಲಿದ್ದು, ಕೇಂದ್ರ ಕಲ್ಲಿದ್ದಲು, ಗಣಿ ಹಾಗೂ ಸಂಸದೀಯ ವ್ಯವಹಾರ ಸಚಿವ ಪ್ರಲ್ಹಾದ ಜೋಶಿ, ಹೈಕೋರ್ಟ ನ್ಯಾಯವಾದಿ ಶರಣಬಸವ ಅಂಗಡಿ, ಹುಬ್ಬಳಿ-ಧಾರವಾಡ ಮಹಾನಗರ ಪಾಲಿಕೆಯ ಸದಸ್ಯ ಚಂದ್ರಶೇಖರ ಮನಗುಂಡಿ, ನೀಲವ್ವ ಯಲ್ಲಪ್ಪ ಅರವದ, ನಾಗಶೆಟ್ಟಿಕೊಪ್ಪ ಹನುಮಾನ ಮಂದಿರದ ಅಧ್ಯಕ್ಷ ಪೀರಾಜಿ ಕಂಟೇಕರ, ಧಾರವಾಡದ ವೀರಶೈವ ಜಂಗಮ ಸಂಸ್ಥೆಯ ಡಾ.ಎಸ್.ಎಮ್.ಹಿರೇಮಠ, ಬೆಂಗೇರಿಯ ಗಾಯತ್ರಿ ದೇವಸ್ಥಾನ ಟ್ರಸ್ಟಿನ ಕಾರ್ಯದರ್ಶಿ ನರೇಂದ್ರ ಏಕಂದರೆ, ಉಣಕಲ್ಲಿನ ಬಸಣ್ಣ ಹೆಬ್ಬಳ್ಳಿ ಹಾಗೂ ಅರ್ಚಕ ಬಸಯ್ಯ ಹಿರೇಮಠ ಅವರು ಕಾರ್ಯಕ್ರಮದಲ್ಲಿ ಗುರುರಕ್ಷೆ ಪಡೆಯಲಿದ್ದಾರೆ. ಹಾಗೂ ಕಾರ್ಯಕ್ರಮವನ್ನು ವೇ.ಮೂ. ವೀರಯ್ಯ ಹಿರೇಮಠ ನಿರೂಪಿಸಲಿದ್ದಾರೆ ಎಂದು ಸುತಗಟ್ಟಿಯ ಶ್ರೀ ಜಗದ್ಗುರು ಪಂಚಾಚಾರ್ಯ ಶಿವಯೋಗ ಪುಣ್ಯಾಶ್ರಮ ಟ್ರಸ್ಟ್ ಪ್ರಕಟಣೆಯಲ್ಲಿ ತಿಳಿಸಿದೆ.
![](https://news.ananddesigns.in/wp-content/uploads/2024/01/Rajshekar-Shivacharyru-suthgatti-navangar-2-1024x1024.jpeg)