37.4 C
Karnataka
Monday, April 13, 2026
spot_img

ಹುಬ್ಬಳ್ಳಿ : ಸ್ವಾಮಿ ವಿವೇಕಾನಂದರ ಜಯಂತ್ಯೋತ್ಸವ

ಹುಬ್ಬಳ್ಳಿ – 2 . ಯುವ ಜನತೆಗೆ ಎಂದೆಂದಿಗೂ ಸ್ವಾಮಿ ವಿವೇಕಾನಂದರೇ ಆದರ್ಶ ಅವರು ಕಂಡ ಭವ್ಯ ಭಾರತವನ್ನು ಸಾಕಾರಗೊಳಿಸಲು ಯುವಜನತೆ ಅವರ ಜೀವನ ಸಂದೇಶಗಳನ್ನು ಅಧ್ಯಯನ ಮಾಡುವುದರ ಜೊತೆಗೆ ಆಚರಣೆಗೆ ತರುವ ಮೂಲಕ ಒಂದು ಆದರ್ಶ ದೇಶವನ್ನಾಗಿ ನಿರ್ಮಾಣ ಮಾಡಲು ಯುವಜನತೆ ಕೈಜೋಡಿಸಬೇಕೆಂದು ಅಂಕಣಕಾರ – ಚಿಂತಕ ಕಿರಣ ಪಾಟೀಲ ಕರೆಕೊಟ್ಟರು. ರಾಮಕೃಷ್ಣ ವಿವೇಕಾನಂದ ಆಶ್ರಮ ಕಲ್ಯಾಣ ನಗರ ಹುಬ್ಬಳ್ಳಿಯಲ್ಲಿ 162ನೇ ಶ್ರೀ ಸ್ವಾಮಿ ವಿವೇಕಾನಂದರ ಜಯಂತ್ಯೋತ್ಸವದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡುತ್ತ ತ್ಯಾಗ ಮತ್ತು ಸೇವೆ ಈ ಅವಳಿ ಆದರ್ಶಗಳನ್ನು ನೀಡುವುದರ ಜೊತೆಗೆ ಭಾರತದ ಉನ್ನತಿಗಾಗಿ ತಮ್ಮ ಇಡೀ ಜೀವನವನ್ನೇ ಮುಡುಪಾಗಿಟ್ಟಂತಹ ಸ್ವಾಮಿ ವಿವೇಕಾನಂದರ ಜಯಂತಿಯ ಈ ಶುಭ ಸಂದರ್ಭದಲ್ಲಿ ನಾವೆಲ್ಲ ಅವರ ಆಶಯದಂತೆ ಭಾರತವನ್ನು ವಿಶ್ವಗುರುವನ್ನಾಗಿಸಲು ನಿರಂತರ ಪ್ರಯತ್ನವನ್ನ ಮಾಡೋಣ ಎಂದು ಹೇಳಿದರು. ಪ್ರಯುಕ್ತ ಶ್ರೀ ವಿವೇಕಾನಂದ ಹೋಮವನ್ನು ಪರಮ ಪೂಜ್ಯ ಶ್ರೀ ಸ್ವಾಮಿ ಬುದ್ಧಿಯೋಗಾನಂದಜೀ ಮಹಾರಾಜ್ ಅವರ ದಿವ್ಯ ಸಾನಿಧ್ಯದಲ್ಲಿ ಪರಮ ಪೂಜ್ಯ ಶ್ರೀ ಸ್ವಾಮಿ ಪ್ರೇಮರೂಪಾನಂದಜೀ ಮಹಾರಾಜ್ ನಡೆಸಿಕೊಟ್ಟರು. ಈ ಸಂದರ್ಭದಲ್ಲಿ ಪರಮ ಪೂಜ್ಯ ಶ್ರೀ ಸ್ವಾಮಿ ಗುರುದೇವಚರಣಾನಂದಜೀ ಮಹಾರಾಜ್, ಡಾ. ನಾಗಲಿಂಗ ಮುರಗಿ, ಸಂಗಣ್ಣ ಬೆಳಗಾವಿ ಉಪಸ್ಥಿತರಿದ್ದರು.

spot_img
spot_img
spot_img
spot_img
spot_img
spot_img

Related Articles

- Advertisement -spot_img

Latest Articles

error: Content is protected !!