18.8 C
Karnataka
Wednesday, February 5, 2025
spot_img

ಪರೀಕ್ಷಾ ದೃಷ್ಟಿಯಿಂದ ಲೆಕ್ಕಶಾಸ್ತ್ರ ವಿಷಯದ ಕುರಿತು ವಿಮರ್ಶೆ

ಹುಬ್ಬಳ್ಳಿ – 1. ಡಾ.ಡಿ.ಜಿ.ಶೆಟ್ಟಿ ಏಜ್ಯುಕೇಷನಲ್ ಸೊಸೈಟಿಯ ಪದವಿ ಹಾಗೂ ಪದವಿ ಪೂರ್ವ ಮಹಾವಿದ್ಯಾಲಯ ಕೆ.ಎಮ್.ಎಫ್ ಹತ್ತಿರ ಧಾರವಾಡದಲ್ಲಿ ಪರೀಕ್ಷಾ ದೃಷ್ಟಿಯಿಂದ ಲೆಕ್ಕಶಾಸ್ತ್ರ ವಿಷಯಕ್ಕೆ ಸಂಬಂಧಿಸಿದಂತೆ ಪರೀಕ್ಷಾ ದೃಷ್ಟಿಯಿಂದ ಲೆಕ್ಕಶಾಸ್ತ್ರ ವಿಷಯದ ಕುರಿತು ವಿಮರ್ಶೆ Review of Accountancy  from Examination Point ಎಂಬ ವಿಷಯದ ಒಂದು ದಿನದ ಕಾರ್ಯಗಾರವನ್ನು ಆಯೋಜಿಸಲಾಗಿತ್ತು. ಕಾರ್ಯಕ್ರಮಕ್ಕೆ ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ್ದ ಈರಣ್ಣ ಮಡಿವಾಳರ ಹಾಗೂ ಶ್ರೀನಿವಾಸ ಎನ್.ಗುಡಿ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಬದಲಾಗಿರುವ ಪರೀಕ್ಷಾ ಪದ್ದತಿಯ ಕುರಿತು ವಿವರಿಸಿದರು. ಪರೀಕ್ಷೆಯ ಕುರಿತು ವಿದ್ಯಾರ್ಥಿಗಳಿಗಿರುವ ಭಯವನ್ನು ನಿವಾರಿಸಿ ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸವನ್ನು ಮೂಡಿಸಿ ಸಮರ್ಥವಾಗಿ ಪರೀಕ್ಷೆಯನ್ನು ಎದುರಿಸುವಂತೆ ಪ್ರೇರೆಪಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ.ಡಿ.ಜಿ.ಶೆಟ್ಟಿಯವರು ವಹಿಸಿ ಮಾತನಾಡಿ ವಿದ್ಯಾರ್ಥಿಗಳು ಈ ಕಾರ್ಯಾಗಾರದ ಸದುಪಯೋಗ ಪಡೆದುಕೊಂಡು ಮುಂಬರುವ ಪರೀಕ್ಷೆಗಳನ್ನು ನಿರ್ಭಿತರಾಗಿ ಎದುರಿಸುವಂತೆ ಹುರಿದುಂಬಿಸಿದರು. ಕಾರ್ಯಕ್ರಮವನ್ನು ಡಾ.ಎಸ್.ಎಮ್ ಸಾಲಿಮಠರವರು ನಿರೂಪಿಸಿದರು, ರಶ್ಮಿ ಶೆಟ್ಟಿ ಸ್ವಾಗತಿಸಿ, ಗಂಗವ್ವ ಯಲಿಗಾರ ವಂದಿಸಿದರು.

Don’t miss your news!

We don’t spam! Read our privacy policy for more info.

Don’t miss your news!

We don’t spam! Read our privacy policy for more info.

Don’t miss your news!

We don’t spam! Read our privacy policy for more info.

Don’t miss your news!

We don’t spam! Read our privacy policy for more info.

Related Articles

Stay Connected

0FansLike
3,912FollowersFollow
0SubscribersSubscribe
- Advertisement -spot_img

Latest Articles

error: Content is protected !!