ಹುಬ್ಬಳ್ಳಿ-18 : ಯುವಯೋಧ ಪ್ರತಿಷ್ಠಾನ ಮತ್ತು ಕನಕದಾಸ ಶಿಕ್ಷಣ ಸಮಿತಿ ಹುಬ್ಬಳ್ಳಿ ವತಿಯಿಂದ ಡಾ. ದಂಡಿನ್ ಸಭಾಂಗಣದಲ್ಲಿ ಶನಿವಾರ ಅಜೀತಕುಮಾರ ಜೀ ಅವರ ಪ್ರೇರಣೆಯಿಂದ “ಸೂರ್ಯನಮಸ್ಕಾರ ಸ್ಪರ್ಧೆ’’ ಏರ್ಪಡಿಸಲಾಗಿತ್ತು. ಕಾರ್ಯಕ್ರಮದ ಉದ್ಘಾಟನೆಯನ್ನು ಹುಬ್ಬಳ್ಳಿ ಸೆಂಟ್ರಲ್ ಕ್ಷೇತ್ರದ ಶಾಸಕರಾದ ಮಹೇಶ ಟೆಂಗಿನಕಾಯಿ ನೆರವೇರಿಸಿದರು.
ಕೆ.ಎಸ್‌ಎಸ್ ಸಂಸ್ಥೆಯ ಕಾರ್ಯದರ್ಶಿಗಳಾದ ರವೀಂದ್ರನಾಥ ಬಿ ದಂಡಿನ, ಉಪಾದ್ಯಕ್ಷರಾದ ಶಾಂತಣ್ಣ ಕಡಿವಾಲ, ಯೋಗ ಗುರುಗಳಾದ ಭಾವರಲಾಲ್ ಆರ್ಯ, ವಿನಾಯಕ ತಲಗೇರಿ, ದತ್ತಾತ್ರೇಯ ಭಟ್, ಪಂಚಲಿಂಗಪ್ಪ ಕವಲೂರು, ಮುತ್ತಪ್ಪ ಮಡಿವಾಳರ, ಮುತ್ತಪ್ಪ ನಲವಡಿ, ಪ್ರಾಚಾರ್ಯರಾದ ಸಂದೀಪ ಬೂದಿಹಾಳ, ಕೇಶವ ಬಾದನಟ್ಟಿ ಶಶಿಧರ್ ಅಕ್ಕಿ ಹಾಗೂ ಬೇರೆ ಬೇರೆ ಭಾಗಗಳಿಂದ ಬಂದ ಸೂರ್ಯ ನಮಸ್ಕಾರ ಸ್ಪರ್ಧಿಗಳು ಉಪಸ್ಥಿತರಿದ್ದರು.
ಸ್ಫರ್ಧೆಯಲ್ಲಿ ಪ್ರಥಮ ಬಹುಮಾನವನ್ನು ನಿರೀಕ್ಷಿತ ಡೊಳ್ಳಿನ ಪಡೆದರು. ದ್ವಿತೀಯ ಬಹುಮಾನವನ್ನು ಅಭಿಷೇಕ ಪಲ್ಲೇದ ಪಡೆದರು. ತೃತೀಯ ಬಹುಮಾನವನ್ನು ಭಾಗ್ಯಶ್ರೀ ಬಳಗಾನೂರಮಠ ಪಡೆದರು. ಸಮಾಧಾನಕರ ಜಯಂತ ಪೂಜಾರ ಪಡೆದರು. ನಿರ್ಣಾಯಕರಾಗಿ ಸ್ವಪ್ನಾ ಕರಬಶೆಟ್ಟರ ಹಾಗೂ ಮುತ್ತಣ್ಣ ಮಡಿವಾಳರ ಭಾಗವಹಿಸಿದ್ದರು.
ಯುವಯೋಧ ಪ್ರತಿಷ್ಠಾನದ ಸಂಸ್ಥಾಪನಾ ಅಧ್ಯಕ್ಷರಾದ ಮುತ್ತಪ್ಪ ನಲವಡಿ ಕಾರ್ಯಕ್ರಮ ಸಂಯೋಜಿಸಿದರು.