22.2 C
Karnataka
Friday, February 7, 2025
spot_img

ರಾಜ್ಯಮಟ್ಟದ ಬಾಪೂಜಿ ಪ್ರಬಂಧ ಸ್ಪರ್ಧೆ ಫಲಿತಾಂಶ

ಬೆಂಗಳೂರು, ನವೆಂಬರ್ 18 (ಕರ್ನಾಟಕ ವಾರ್ತೆ) :

ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯು ಪ್ರೌಢಶಾಲೆ, ಪದವಿಪೂರ್ವ ಕಾಲೇಜುಗಳು,ಪದವಿ/ಸ್ನಾತಕೋತ್ತರ ವಿಭಾಗಗಳ ವಿದ್ಯಾರ್ಥಿಗಳಿಗೆ ಮಹಾತ್ಮ ಗಾಂಧೀಜಿಯವರ 154 ನೇ ಜಯಂತಿ ಅಂಗವಾಗಿ ಆಯೋಜಿಸಿದ್ದ ರಾಜ್ಯಮಟ್ಟದ ಬಾಪೂಜಿ ಪ್ರಬಂಧ ಸ್ಪರ್ಧೆಯ ಫಲಿತಾಂಶ ಪ್ರಕಟವಾಗಿದೆ.

ಜಿಲ್ಲಾ ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿಗಳ ಪ್ರಬಂಧಗಳನ್ನು ರಾಜ್ಯ ಮಟ್ಟದ ಸ್ಪರ್ಧೆಗೆ ಪರಿಗಣಿಸಲಾಗಿತ್ತು. ಮೂರು ವಿಭಾಗಗಳಲ್ಲಿ ಪ್ರತ್ಯೇಕವಾಗಿ ಪ್ರಥಮ ಸ್ಥಾನ-31,000, ದ್ವಿತೀಯ-21000 ಹಾಗೂ ತೃತೀಯ-11000 ರೂ.ಗಳ ನಗದು ಪುರಸ್ಕಾರ ನೀಡಲಾಗುತ್ತಿದೆ.

ವಿಜೇತರ ವಿವರ
ಪ್ರೌಢಶಾಲೆ ವಿಭಾಗ:
ಪ್ರಥಮ-ಅನಿರುದ್ಧ ಮನೋಜ್, ಸಂತ ಅನ್ನಮ್ಮ ಪ್ರೌಢಶಾಲೆ, ವಿರಾಜಪೇಟೆ,ಕೊಡಗು ಜಿಲ್ಲೆ,

ದ್ವಿತೀಯ-ಹರ್ಷಿತ ಎನ್, ಸರ್ಕಾರಿ ಪ್ರೌಢಶಾಲೆ, ತುಂಗಣಿ, ಕನಕಪುರ ತಾ.ರಾಮನಗರ ಜಿಲ್ಲೆ

ತೃತೀಯ : ತೋಹಿದ್ ಅಹ್ಮದ್ ಲಾಡಜಿ, ಗೈಡ್ ಆಂಗ್ಲ ಮಾಧ್ಯಮ ಶಾಲೆ, ತಿಳವಳ್ಳಿ, ಹಾನಗಲ್ ತಾಲ್ಲೂಕು, ಹಾವೇರಿ ಜಿಲ್ಲೆ.

ಪದವಿಪೂರ್ವ ವಿಭಾಗ

ಪ್ರಥಮ-ಹೃತ್ಪೂರ್ವಕ್ ಕೆ.ಎಸ್. ಸಂತ ಮೈಕೇಲ್ ಕಾಲೇಜು, ಮಡಿಕೇರಿ ಕೊಡಗು ಜಿಲ್ಲೆ,

ದ್ವಿತೀಯ-ಉದಯಕುಮಾರ್ ಎಂ.ಎಸ್. ಸರ್ಕಾರಿ ಪ.ಪೂ.ಕಾಲೇಜು ಮಂಡ್ಯ

ತೃತೀಯ-ಮೀನ ಎಂ,ಶ್ರೀಕೊಂಗಾಡಿಯಪ್ಪ ಪಿ.ಯು.ಕಾಲೇಜು ದೊಡ್ಡಬಳ್ಳಾಪುರ ಬೆಂಗಳೂರು ಗ್ರಾಮಾಂತರ ಜಿಲ್ಲೆ

ಪದವಿ/ಸ್ನಾತಕೋತ್ತರ ವಿಭಾಗ

ಪ್ರಥಮ-ದರ್ಶಿನಿ ಡಿ, ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಶಿವಮೊಗ್ಗ

ದ್ವಿತೀಯ-ಕಾವ್ಯಾ ಚಿಪ್ಪಲಕಟ್ಟಿ, ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಬಾಗಲಕೋಟ

ತೃತೀಯ-ಕುಸುಮಾಬಾಯಿ ಆರ್, ಜೆಎಸ್‍ಎಸ್ ಕಲಾ ಕಾಲೇಜು, ಮೈಸೂರು

ಗಾಂಧೀಜಿಯವರ ಸಾಮಾಜಿಕ, ಆರ್ಥಿಕ, ಸ್ವರಾಜ್ ಚಿಂತನೆಗಳು, ಸತ್ಯ, ಅಹಿಂಸೆ ತತ್ವಗಳು, ಜಾತ್ಯಾತೀತ ನಿಲುವುಗಳು, ಸೌಹಾರ್ದತೆ, ಸ್ವಾವಲಂಬನೆಯ ಬದುಕು, ಅಸ್ಪೃಶ್ಯತೆ ನಿವಾರಣೆಗಾಗಿ ನಡೆಸಿದ ಪ್ರಯೋಗಗಳು ಮತ್ತಿತರ ವಿಷಯಗಳ ಕುರಿತು ಪ್ರಬಂಧ ಸ್ಪರ್ಧೆ ಆಯೋಜಿಸಲಾಗಿತ್ತು.

ವಿಜೇತರಿಗೆ ನಗದು ಹಾಗೂ ಪ್ರಶಸ್ತಿ ಪತ್ರಗಳನ್ನು ವಿತರಿಸಲಾಗುವುದು ಎಂದು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಆಯುಕ್ತರಾದ ಹೇಮಂತ್ ಎಂ.ನಿಂಬಾಳ್ಕರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Don’t miss your news!

We don’t spam! Read our privacy policy for more info.

Don’t miss your news!

We don’t spam! Read our privacy policy for more info.

Don’t miss your news!

We don’t spam! Read our privacy policy for more info.

Don’t miss your news!

We don’t spam! Read our privacy policy for more info.

Related Articles

Stay Connected

0FansLike
3,912FollowersFollow
0SubscribersSubscribe
- Advertisement -spot_img

Latest Articles

error: Content is protected !!