30.2 C
Karnataka
Sunday, March 22, 2026
spot_img

ನ.10 ರಂದು ವಿವಿಧ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ

ಹುಬ್ಬಳ್ಳಿ (ಕರ್ನಾಟಕ ವಾರ್ತೆ) ನ.9: ಹೆಸ್ಕಾಂನ ಕುಂದಗೋಳ ಉಪ-ವಿಭಾಗದ ವ್ಯಾಪ್ತಿಗೆ ಬರುವ ಕುಂದಗೋಳ ಮತ್ತು ಸಂಶಿ ಶಾಖೆಗಳ ವ್ಯಾಪ್ತಿಯಲ್ಲಿ ಬರುವ 33 ಕೆ.ವಿ.ಎ ವಿದ್ಯುತ್ ವಿತರಣಾ ಕೇಂದ್ರದಿಂದ ಹೊರಡುವ 11 ಕೆ.ವಿ.ಎ ಮಾರ್ಗಗಳು ಹಾಗೂ 220 ಕೆ.ವ್ಹಿ. ಸ್ವೀಕರಣಾ ಕೇಂದ್ರ ಹುಬ್ಬಳ್ಳಿದಿಂದ ಹೊರಡುವ 33 ಕೆ.ವ್ಹಿ.ಎ ಮಾರ್ಗಗಳ ಮೂರನೇಯ ತ್ರೈಮಾಸಿಕ ತುರ್ತು ನಿರ್ವಹಣಾ ಕಾರ್ಯಗಳನ್ನು ನವೆಂಬರ್ 10 ರಂದು ಬೆಳಿಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ವಿವಿಧ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ. ಗ್ರಾಹಕರು ಹೆಸ್ಕಾಂನೊಂದಿಗೆ ಸಹಕರಿಸುವಂತೆ ಹೆಸ್ಕಾಂ ಪ್ರಕಟಣೆ ತಿಳಿಸಿದೆ.
ಕುಂದಗೋಳ ಪಟ್ಟಣದ ಕುಡಿಯುವ ನೀರಿನ ಪ್ರದೇಶ, ಕುಂದಗೋಳ ಪಟ್ಟಣ, ಯರಗುಪ್ಪಿ, ಮುಳ್ಳೊಳ್ಳಿ, ಚಿಕ್ಕನೆರ್ತಿ, ಹಿರೇನರ್ತಿ, ಬಸಾಪೂರ, ಬೆನಕನಹಳ್ಳಿ, ಚಾಕಲಬ್ಬಿ, ಕೊಂಕನಕೊರಹಟ್ಟಿ, ಅಲ್ಲಾಪೂರ, ಕಡಪಟ್ಟಿ, ಗುಡೇನಕಟ್ಟಿ, ಯರಿನಾರಾಯಣಪೂರ, ರೊಟ್ಟಿಗವಾಡ, ಎ.ಪಿ.ಎಂ.ಸಿ. ಯಾರ್ಡ, ಆಗ್ನಿಶಾಮಕದಳ ಮಸಾರಿಪ್ಲಾಟ್ ಕುಂದಗೋಳ, ದೇವನೂರು, ಬಿಳೇಬಾಳ, ಹಂಚಿನಾಳ, ಕುಬಿಹಾಳ, ಯಲಿವಾಳ, ಇನಾಮಕೊಪ್ಪ, ಬೆಟದೂರು, ಹೊಸಳ್ಳಿ, ಭರದ್ವಾಡ, ಕೊಡ್ಲಿವಾಡ, ಯರೇಬುದಿಹಾಳ, ಪಶುಪತಿಹಾಳ, ಹಿರೇಗುಂಜಳ, ಚಿಕ್ಕಗುಂಜಳ, ಭಾಗವಾಡ, ಚಿಕ್ಕಹರಕುಣಿ, ಹಿರೇಹರಕುಣಿ, ಭುತರ್ಲಘಟ್ಟ, ಭುಕೊಪ್ಪ, ನೆಲಗುಡ್ಡ, ಇಂಗಳಗಿ, ಹಿರೇಬುದಿಹಾಳ, ಮತ್ತಿಗಟ್ಟಿ, ಹನುಮನಹಳ್ಳಿ, ರಾಮಾಪುರ, ಸಂಶಿ, ಶಿರೂರ, ಕಮಡೊಳ್ಳಿ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ.

spot_img
spot_img
spot_img
spot_img
spot_img
spot_img

Related Articles

- Advertisement -spot_img

Latest Articles

error: Content is protected !!