ಬೆಂಗಳೂರು, ನವೆಂಬರ್ 8 (ಕರ್ನಾಟಕ ವಾರ್ತೆ):
ಕರ್ನಾಟಕ ಔಷಧ ಪರೀಕ್ಷಾ ಪ್ರಯೋಗಾಲಯದ ಸರ್ಕಾರಿ ವಿಶ್ಲೇಷಕರು ಪಾರ್ಮೆಥಿನ್ ಲೋಷನ್ (ಫರ್ಮೆಜೆಸ್ಟ್-ಆಂಟಿಕ್ ಸ್ಕೇಬಿಸ್ ಲೋಷನ್), ಕ್ಲೋಸ್ಟ್-ಐಬಿ (ಕ್ಲೋಸೆಂಟಲ್ ಮತ್ತು ಐವಿರಮೆಕ್ಟಿನ್ ಓರಲ್ ಲಿಕ್ವಿಡ್ ವೆಟ್), ಮಿಸೆಂಟಲ್-ಹೆಬ್ (ಟಿಲ್ಮಿಸರ್‍ಟನ್ ಮತ್ತು ಐಡ್ರೋಕ್ಲೋರೈಡ್‍ಥೈಝಡ್ ಟ್ಯಾಬ್ಲೆಟ್ಸ್ ಐಪಿ), ಆಸ್ಪಿರಿನ್ ಗ್ಯಾಸ್ಟ್ರೋ-ರಿಜಿಸೈಂಟ್ ಟ್ಯಾಬ್ಲೆಟ್ಸ್ ಐಪಿ (150 ಎಂಜಿ), ಟೆಲ್ಮಿಸ್ಟ್‍ನ್ ಮತ್ತು ಐಡ್ರೋಕ್ಲೋರೊಥೈಝಡ್ ಟ್ಯಾಬ್ಲೆಟ್ಸ್ ಐಪಿ (ಟೆಲ್ಮ್‍ಸ್ಟ್ 40 ಹೆಚ್ ಟ್ಯಾಬ್ಲೆಟ್ಸ್), ಟ್ಯೂಮಿಮೆಂಟ್-ಜಿ2(ಮೆಟ್‍ಫಾರ್‍ಮಿನ್ ಐಡ್ರೋಕ್ಲೋರೈಡ್ ಮತ್ತು ಗ್ಲಿಮಿಪಿನೈಡ್ ಟ್ಯಾಬ್ಲೆಟ್ಸ್ ), ಗ್ಲಿಮಿಪಿನೈಡ್ ಟ್ಯಾಬ್ಲೆಟ್ಸ್ ಐಪಿ2 ಎಂಜಿ, ಸೋಡಿಯಂ ವಾಲ್ಟ್ರೋಟ್ ಟ್ಯಾಬ್ಲೆಟ್ಸ್ 500 ಎಂಜಿ (ವಾಲ್ಟೋವಿಲ್ 500), ಟಿಲ್ಮಿಸರ್‍ಟನ್ ಮತ್ತು ಐಡ್ರೋಕ್ಲೋರೈಡ್‍ಥೈಝಡ್ ಟ್ಯಾಬ್ಲೆಟ್ಸ್ ಐಪಿ (ಟೆಲ್ಟೂನ್-ಹೆಚ್) ಮತ್ತು ಅಕ್ಸಿಟೋಸಿನ್ ಇಂಜಕ್ಸನ್ ಐಪಿ (ಗೈನೋಟೊಸಿನ್ 5 ಐಯು) ಔಷಧಿಗಳನ್ನು/ಕಾಂತಿವರ್ಧಕಗಳನ್ನು ಗುಣಮಟ್ಟವಲ್ಲದ ಔಷಧಿಗಳೆಂದು ತಿಳಿಸಿದೆ. ಈ ಔಷಧಿಗಳನ್ನು/ಕಾಂತಿವರ್ಧಕಗಳನ್ನು ಔಷಧ ವ್ಯಾಪಾರಿಗಳು, ಸಗಟು ಔಷಧ ಮಾರಾಟಗಾರರು, ವೈದ್ಯರು, ಆಸ್ಪತ್ರೆ ಮತ್ತು ನರ್ಸಿಂಗ್ ಹೋಂನವರು ದಾಸ್ತಾನು ಮಾಡುವುದಾಗಲಿ, ಮಾರಾಟ ಮಾಡುವುದಾಗಲಿ ಅಥವಾ ಉಪಯೋಗಿಸುವುದಾಗಲಿ ಮಾಡಬಾರದು. ಯಾರಾದರೂ ಈ ಔಷಧಿಗಳನ್ನು/ಕಾಂತಿವರ್ಧಕಗಳನ್ನು ದಾಸ್ತಾನನ್ನು ಹೊಂದಿದ್ದಲ್ಲಿ ಕೂಡಲೇ ಸಂಬಂಧಪಟ್ಟ ಕ್ಷೇತ್ರದ ಔಷಧ ಪರಿವೀಕ್ಷಕರು ಅಥವಾ ಔಷಧ ನಿಯಂತ್ರಕರ ಗಮನಕ್ಕೆ ತರುವುದು. ಸಾರ್ವಜನಿಕರು ಈ ಔಷಧಗಳನ್ನು/ಕಾಂತಿವರ್ಧಕಗಳನ್ನು ಉಪಯೋಗಿಸಬಾರದೆಂದು ಕರ್ನಾಟಕ ರಾಜ್ಯದ ಔಷಧ ನಿಯಂತ್ರಕರಾದ ಭಾಗೋಜಿ ಟಿ ಖಾನಾಪೂರೆ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.