ಬೆಂಗಳೂರು, ನವೆಂಬರ್ 06 (ಕರ್ನಾಟಕ ವಾರ್ತೆ) :
ಬೆಂಗಳೂರು ನಗರ ವಿಶ್ವವಿದ್ಯಾನಿಲಯಕ್ಕೆ ಸಂಯೋಜನೆಗೊಂಡು, ಸ್ನಾತಕೋತ್ತರ ಅಧ್ಯಯನ ವಿಭಾಗಗಳನ್ನು ಹೊಂದಿರುವ ಮಹಾವಿದ್ಯಾಲಯಗಳಿಂದ ಸಂಶೋಧನೆ/ಪಿ.ಹೆಚ್.ಡಿ. ಕಾರ್ಯಕ್ರಮಗಳನ್ನು ಪ್ರಾರಂಭಿಸಲು ಮಾನ್ಯತೆಗಾಗಿ ನಿಗದಿತ ನಮೂನೆಂiÀiಲ್ಲಿ ಅರ್ಜಿಗಳನ್ನು ಅಹ್ವಾನಿಸಲಾಗಿದೆ.
ಸಂಯೋಜಿತ ಮಹಾವಿದ್ಯಾಲಯಗಳು, ಕೇಂದ್ರ ಮತ್ತು ಕರ್ನಾಟಕ ರಾಜ್ಯ ಸರ್ಕಾರಗಳು ಸ್ಥಾಪಿಸಿರುವ ಪ್ರತಿಷ್ಠಿತ ಸಂಸ್ಥೆಗಳು, ಪ್ರಯೋಗಾಲಯಗಳು, ಸಂಶೋಧನಾ ಕೇಂದ್ರಗಳು ಕಲಾ, ವಿಜ್ಞಾನ, ಸಮಾಜ ವಿಜ್ಞಾನ, ವಾಣಿಜ್ಯ, ಮ್ಯಾನೇಜ್‍ಮೆಂಟ್, ಶಿಕ್ಷಣ ನಿಕಾಯಗಳ ಸಂಬಂಧಿತ ವಿಷಯಗಳ ಸಂಶೋಧನಾ ಕೇಂದ್ರಗಳ ಮಾನ್ಯತೆಗಾಗಿ ಅರ್ಜಿ ಸಲ್ಲಿಸಬಹುದಾಗಿದೆ. ನಾಲ್ಕು ವರ್ಷ ಪೂರೈಸಿದ ಅಸ್ತಿತ್ವದಲ್ಲಿರುವ ಸಂಶೋಧನಾ ಕೇಂದ್ರಗಳು ನವೀಕರಣಕ್ಕಾಗಿ ಅರ್ಜಿ ಸಲ್ಲಿಸಬಹುದು.
ಮಹಾವಿದ್ಯಾಲಯ, ಕೇಂದ್ರ ಮತ್ತು ಕರ್ನಾಟಕ ರಾಜ್ಯ ಸರ್ಕಾರಗಳು ಸ್ಥಾಪಿಸಿರುವ ಪ್ರತಿಷ್ಠಿತ ಸಂಸ್ಥೆಗಳು, ಪ್ರಯೋಗಾಲಯಗಳು ಹೊಂದಿರಬೇಕಾದ ಅರ್ಹತೆ, ನಿಗದಿತ ಅರ್ಜಿ ನಮೂನೆ, ಶುಲ್ಕದ ವಿವರ, ಅರ್ಜಿ ಸಲ್ಲಿಸುವ ಕೊನೆಯ ದಿನಾಂಕ ಇತ್ಯಾದಿಗಳನ್ನು ಒಳಗೊಂಡ ಅಧಿಸೂಚನೆಯನ್ನು ವಿಶ್ವವಿದ್ಯಾನಿಲಯದ ಅಧಿಕೃತ ಜಾಲತಾಣ www.bcu.ac.in ದಲ್ಲಿ ಪ್ರಕಟಿಸಲಾಗಿದೆ.
ಅರ್ಜಿ ಸಲ್ಲಿಸಲು ನವೆಂಬರ್ 20 ಕೊನೆಯ ದಿನಾಂಕವಾಗಿದ್ದು, ರೂ. 5000/- ದಂಡ ಶುಲ್ಕದೊಂದಿಗೆ ನವೆಂಬರ್ 29 ಕೊನೆಯ ದಿನಾಂಕವಾಗಿದೆ. ಈಗಾಗಲೇ ಸ್ನಾತಕೊತ್ತರ ವಿಭಾಗಗಳನ್ನು ಹೊಂದಿರುವ ಎಲ್ಲ ಮಹಾವಿದ್ಯಾಲಯಗಳಿಗೆ ಇಮೇಲ್ ಮುಖಾಂತರ ಕಳುಹಿಸಲಾಗಿದ್ದು, ನಿರ್ದಿಷ್ಟ ಅರ್ಹತೆಗಳನ್ನು ಹೊಂದಿರುವ ಆಸಕ್ತ ಮಹಾವಿದ್ಯಾಲಯಗಳ ಪ್ರಾಂಶುಪಾಲರು, ನಿಗದಿತ ನಮೂನೆಯಲ್ಲಿ ಅಗತ್ಯ ದಾಖಲೆ ಹಾಗೂ ಶುಲ್ಕವನ್ನು ಸಂದಾಯಿಸಿ ಅರ್ಜಿಗಳನ್ನು ಸಲ್ಲಿಸಬಹುದಾಗಿದೆ.