ಬೆಂಗಳೂರು, ಅಕ್ಟೋಬರ್ 26 (ಕರ್ನಾಟಕ ವಾರ್ತೆ):
ವಿಶ್ವೇಶ್ವರಯ್ಯ ಇಂಜಿನಿಯರಿಂಗ್ ಕಾಲೇಜು ವಿಶ್ವವಿದ್ಯಾಲಯವು (ಯುವಿಸಿಇ) 2023-24ನೇ ಸಾಲಿನ ಬಿ.ಟೆಕ್ ವಿದ್ಯಾರ್ಥಿಗಳಿಗೆ Constitution of India ಎಂಬ ವಿಷಯವನ್ನು ಬೋಧಿಸಲು ಅತಿಥಿ ಉಪನ್ಯಾಸಕರ ನೇಮಕಾತಿಯನ್ನು ಅಕ್ಟೋಬರ್ 28 ರಂದು ಮಧ್ಯಾಹ್ನ 3.00 ಗಂಟೆಗೆ, ಯುವಿಸಿಇ ಬೋರ್ಡ್ ರೂಂ, ಕೆ.ಆರ್ ವೃತ್ತ, ಬೆಂಗಳೂರು 01, ಇಲ್ಲಿ ನೇರ ಸಂದರ್ಶನವನ್ನು ಏರ್ಪಡಿಸಿದೆ.
ಕಾನೂನು ಪದವಿ ಪಡೆದಿರುವ ಆಸಕ್ತಿಯುಳ್ಳ ಅರ್ಹ ಅಭ್ಯರ್ಥಿಗಳು ತಮ್ಮ ಸೂಕ್ತ ದಾಖಲೆಗಳೊಂದಿಗೆ ಸಂದರ್ಶನದಲ್ಲಿ ಭಾಗಿಯಾಗಬಹುದು ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ.