25.4 C
Karnataka
Sunday, March 22, 2026
spot_img

ಒಣ ಗಾಂಜಾ ವಶ

ಬೆಂಗಳೂರು ಆಗಸ್ಟ್ 21 (ಕರ್ನಾಟಕ ವಾರ್ತೆ):

 ಬೆಂಗಳೂರು ನಗರ ಜಿಲ್ಲೆಯ-5 ಅಬಕಾರಿ ಉಪ ಆಯುಕ್ತರಾದ ವೀರಣ್ಣ ಬಾಗೇವಾಡಿ ಇವರ ಮಾರ್ಗದರ್ಶನದಲ್ಲಿ ಉಪವಿಭಾಗ -10ರ ಅಬಕಾರಿ ಉಪ ಅಧೀಕ್ಷಕರಾದ ದೇವರಾಜ್ ಇವರ ನೇತೃತ್ವದಲ್ಲಿ ಅಬಕಾರಿ ನಿರೀಕ್ಷಕರಾದ ಅಬುಬಕರ್ ಮುಜಾವರ  ಮತ್ತು ಸಿಬ್ಬಂದಿಗಳು ವಲಯ ಸಂಖ್ಯೆ- 30 ಇವರು ಮಹದೇವಪುರ ವ್ಯಾಪ್ತಿಯ ದೂರವಾಣಿ ನಗರದ ಬಿ.ಎಂ.ಟಿ.ಸಿ ಕಾರ್ಯಾಗಾರದ ಹತ್ತಿರ ಇಂದು  ಅಬಕಾರಿ ದಾಳಿ ನಡೆಸಿ, ಮಾರಾಟಕ್ಕಾಗಿ ಅಕ್ರಮವಾಗಿ ಸಾಗಿಸುತ್ತಿದ್ದ ಒಟ್ಟು 2.300 ಕೆ.ಜಿ. ಒಣ ಗಾಂಜಾ ವಶಪಡಿಸಿಕೊಂಡು ಒಬ್ಬ ಆರೋಪಿ ಉತ್ತರ ಪ್ರದೇಶದ ತೇಜು ಸಿಂಗ್ ಕೋಂ ಜಯದೇವ ಸಿಂಗ್ ಎಂಬುವನನ್ನು ಬಂಧಿಸಿ, ಎನ್.ಡಿ.ಪಿ.ಎಸ್ ಕಾಯ್ದೆ -1985 ರಡಿ ಮೊಕದ್ದಮೆ ದಾಖಲಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಬೆಂಗಳೂರು ನಗರ ಜಿಲ್ಲೆಯ-05 ಅಬಕಾರಿ ಉಪ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

spot_img
spot_img
spot_img
spot_img
spot_img
spot_img

Related Articles

- Advertisement -spot_img

Latest Articles

error: Content is protected !!