ದಿನಾಂಕ 30/09/2023 ಶನಿವಾರ ದಂದು
Sjmvs ಕಲಾ ಹಾಗೂ ವಾಣಿಜ್ಯ ಮಹಿಳಾ ಮಹಾವಿದ್ಯಾಲಯ ಹುಬ್ಬಳ್ಳಿ ಯ ಸಂಗೀತ ವಿಭಾಗ ಆಯೋಜಿಸಿದ “ಸ್ವರಾಂಜಲಿ “ತಿಂಗಳ ಸಂಗೀತ ಕಾರ್ಯಕ್ರಮದಲ್ಲಿ ಅಂತರ್ ರಾಷ್ಟೀಯ ಖ್ಯಾತಿಯ ಸಿತಾ ರ ವಾದಕ ಶ್ರೀ ಮೊಹಸಿನ್ ಖಾನ್ ಋತು ರಾಗ ವಾದ ಮಿಯಾಕೀಮಲ್ಹಾ ರ ರಾಗದಲ್ಲಿ ಆಲಾಪ್, ಜೋಡ್, ಬಢತ್ ಮಾಡಿ, ಮಸೀತ್ ಖಾನಿ ಗತ್, ರ ಜಾ ಖಾನಿ ಗತ್ ನುಡಿಸಿ,ಗುರು ಪುಟ್ಟರಾಜ ಗವಾಯಿ ವಿರ ಚಿ ತ ಗುರುವಿಗೆ ತನುವನ್ನು ಲಿಂಗಕ್ಕೆ ಮನವನ್ನು ಎಂಬ ವಚನ ಹಾಗೂ ಮಿಶ್ರ ಖಮಾಜ್ ರಾಗ ದಲ್ಲಿ ಧುನ್ ನುಡಿಸಿ ಕಲಾ ರಸಿಕರನ್ನು ಗಂಧರ್ವ ಲೋಕಕ್ಕೆ ಕರೆದೋಯ್ದರು.ಇವರೊಂದಿಗೆ ಶ್ರೀ ಚಾರುದತ್ ಮಹಾರಾಜ ಬೀದರ್ ಅತ್ಯಂತ ಸಮರ್ಥ ವಾಗಿ ತಬಲ ಸಹಕಾರ ವನ್ನು ನೀಡಿ ದರು.
ಮುಖ್ಯ ಅತಿಥಿ ಗಳಾಗಿ ಆಗಮಿಸಿದ ಪಂಡಿತ್ ಶ್ರೀನಿವಾಸ್ ಜೋಶಿ ಯವರು ಮಹಾವಿದ್ಯಾಲಯ ವು ಪ್ರತಿತಿಂಗಳು ಸಂಗೀತ ಕಾರ್ಯಕ್ರಮ ವನ್ನು ಆಯೋಜಿಸುತ್ತಿರುವುದು ಬಹಳ ಖುಷಿ ತಂದಿದೆ ಎಂದು ಹೇಳಿ ದರು. ಮಹಾವಿದ್ಯಾಲಯ ದ ಪ್ರಾಚಾರ್ಯ ರಾದ ಡಾ. ಸಿಸಿ ಲಿಯಾ ಡಿ’ಕ್ರೂಜ್ ಅಧ್ಯಕ್ಷತೆ ವಹಿಸಿದ್ದರು.ಡಾ. ಶಿವಲೀಲಾ ವೈಜಿನಾಥ್ ಎಲ್ಲರನ್ನು ಸ್ವಾಗತಿಸಿ, ಪ್ರಾಸ್ತಾವಿಕ ನುಡಿಗಳನ್ನಾಡಿದರು. ಸುಜಾತಾ
ಬಾರ್ಕೆರ್,ಮಿತಾಜಿತುರಿ ಅತಿಥಿ ಗಳನ್ನು ಮತ್ತು ಕಲಾವಿದರನ್ನು ಪರಿಚಯಿಸಿದರು.ಐಶ್ವರ್ಯ ದೇಸಾಯಿ ವಂದಿಸಿದರು. ಸ್ನೇಹ ಗುಡ್ಡಳ್ಳಿ ನಿರೂಪಿಸಿದರು. Sjmv ಸಂಘ ದ ಆಡಳಿತ ಮಂಡಳಿ ಯ ನಿರ್ದೇಶಕರಾದ ಶ್ರೀ ಶಶಿಸಾಲಿ, ಶ್ರೀ ಮುರಗೇಶ್ ಯಕಲಾಸಪುರ, ಶ್ರೀ ಮಲ್ಲಿಕಾರ್ಜುನ ಕಳಸ ರಾ ಯ ಹಾಗೂ ಅನೇಕ ಕಲಾ ರಸಿಕರು ಕಾರ್ಯಕ್ರಮ ದಲ್ಲಿ ಉಪಸ್ಥಿತರಿದ್ದರು.