30.4 C
Karnataka
Thursday, March 19, 2026
spot_img

ಯುದ್ಧ ವಿರೋಧಿ ಕವಿಗೋಷ್ಠಿಗೆ ಆಹ್ವಾನ

ಹುಬ್ಬಳ್ಳಿ: ಪ್ರಸ್ತುತ ಇಸ್ರೇಲ್-ಇರಾನ್ ಮಧ್ಯೆ ನಡೆದಿರುವ ಅಮೆರಿಕ ಪ್ರಾಯೋಜಿತ ಯುದ್ಧದ ಭೀಕರ ಪರಿಣಾಮಗಳು ಜಗತ್ತಿನ ಎಲ್ಲ ದೇಶಗಳ ನಾಗರಿಕರಿಗೆ ತಟ್ಟಲಾರಂಭಿಸಿದ್ದು, ಈ ಸಂಘರ್ಷ ಸ್ಥಿತಿಯ ಕುರಿತು ಇಲ್ಲಿನ ಮೇ ಸಾಹಿತ್ಯ ಮೇಳ ಬಳಗವು ಇದೇ ದಿ. 23, ಸೋಮವಾರ ಸಂಜೆ 5 ಗಂಟೆಗೆ ‘ಯುದ್ಧ ವಿರೋಧಿ ಕವಿಗೋಷ್ಠಿ’ಯನ್ನು ಗೋಕುಲ ರಸ್ತೆಯಲ್ಲಿ ಇರುವ ರೈತ ಹೋರಾಟಗಾರ ಸಿದ್ದು ತೇಜಿ ಅವರ ನಿವಾಸದಲ್ಲಿ ಆಯೋಜಿಸಲಾಗಿದೆ. ಯುದ್ಧ ಬೇಡ-ಶಾಂತಿ ನೆಲೆಸಲಿ ಎಂಬ ಆಶಯದ ಕವಿತೆ ರಚಿಸಿರುವ ಕವಿಗಳು ಈ ಕವಿಗೋಷ್ಠಿಯಲ್ಲಿ ಪಾಲ್ಗೊಳ್ಳಬಹುದು.  ವಾಟ್ಸ್ಯಾಪ್ ನಂ. 9845779387 ಮೂಲಕ ನೋಂದಣಿ ಮಾಡಿಕೊಳ್ಳಲು ದಿನಾಂಕ 20, ಶುಕ್ರವಾರ ಕೊನೆಯ ದಿನವಾಗಿದೆ. ನೋಂದಣಿ ಮಾಡಿಕೊಂಡ ಕವಿಗಳಿಗೆ ಮಾತ್ರ ಕವಿಗೋಷ್ಠಿಯಲ್ಲಿ ಕವಿತೆ ವಾಚಿಸಲು ಅವಕಾಶವಿದೆ ಎಂದು ಸಂಚಾಲಕರು ತಿಳಿಸಿದ್ದಾರೆ.

spot_img
spot_img
spot_img
spot_img
spot_img
spot_img

Related Articles

- Advertisement -spot_img

Latest Articles

error: Content is protected !!