21.4 C
Karnataka
Tuesday, March 17, 2026
spot_img

ಡಾ.ಡಿ.ಜಿ.ಶೆಟ್ಟಿ ಏಜ್ಯುಕೇಷನಲ್ ಸೊಸೈಟಿಯ ರಜತಮಹೋತ್ಸವ : ನೂತನ ಭವನ, ಅಡಿಟೋರಿಯಂ ಉದ್ಘಾಟನೆ

ಡಾ.ಡಿ.ಜಿ.ಶೆಟ್ಟಿ ಏಜ್ಯುಕೇಷನಲ್ ಸೊಸೈಟಿಯ ಆರ್.ಎಸ್.ಶೆಟ್ಟಿ ಕಾಲೇಜ ಆಫ್ ಕಾಮರ್ಸ್, ರುಕ್ಮೀಣಿ ಶೆಟ್ಟಿ ಮೆಮೊರಿಯಲ್ ಸುಧಾಕರ ಶೆಟ್ಟಿ ಬಿಸಿಎ ಕಾಲೇಜು ಹಾಗೂ ಟಿ.ಎಮ್.ಶೆಟ್ಟಿ ಮೆಮೊರಿಯಲ್ ಇಂಡಿಪೆAಡೆAಟ್ ಪಿಯು ಕಾಲೇಜು, ಜ್ಞಾನ ದೇಗುಲ, ಕೆ.ಎಮ್.ಎಫ್ ಹತ್ತಿರ, ಧಾರವಾಡದಲ್ಲಿ ಡಾ.ಡಿ.ಜಿ.ಶೆಟ್ಟಿ ಏಜ್ಯುಕೇಷನಲ್ ಸೊಸೈಟಿಯು ೨೫ ವರ್ಷಗಳನ್ನು ಪೂರೈಸಿ ಬೆಳ್ಳಿಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದು, ಈ ಪ್ರಯುಕ್ತ “ರಜತಮಹೋತ್ಸವ ಕಾರ್ಯಕ್ರಮ” ವನ್ನು ದಿ.೨೫.೦೩.೨೦೨೬ ರ ಬುಧವಾರ ಮುಂಜಾನೆ ೦೯.೩೦ ಗಂಟೆಗೆ ಕಾಲೇಜು ಆವರಣದಲ್ಲಿ ಹಮ್ಮಿಕೊಳ್ಳಲಾಗಿದೆ. ಸಮಾರಂಭದ ಉದ್ಘಾಟಕರಾಗಿ ಡಾ.ಚಿ.ಎಸ್.ವಿ.ಎಸ್ ಪ್ರಸಾದ ಮ್ಯಾನೇಜಿಂಗ್ ಡೈರೆಕ್ಟರ್, ಸ್ವರ್ಣ ಗ್ರೂಪ್ ಆಫ್ ಕಂಪನಿಸ್ ಹುಬ್ಬಳ್ಳಿ ಇವರು ಆಗಮಿಸಲಿದ್ದಾರೆ. ಈ ಸಂದರ್ಭದಲ್ಲಿ ಹೊಸದಾಗಿ ನಿರ್ಮಿಸಲಾದ ಬಾರ್ಕೂರು ಸುಧಾಕರ ಶೆಟ್ಟಿ ರಜತ ಮಹೋತ್ಸವ ಭವನವನ್ನು ಎಸ್.ಬಿ.ಶೆಟ್ಟಿ, ಅಧ್ಯಕ್ಷರು,ಇಂಡಿಯನ್ ಬಂಟ್ಸ್ ಚೆಂಬರ್ ಆಫ್ ಕಾಮರ್ಸ್ & ಇಂಡಸ್ಟ್ರೀಜ್, ಮುಂಬಯಿ ಹಾಗೂ ಚೇರಮನ್ & ಮ್ಯಾನೇಜಿಂಗ್ ಡೈರೆಕ್ಟರ್, ಕೆನರಾ ಟೂರ್ಸ್ & ಟ್ರಾವೇಲ್ಸ್ ಪ್ರೈ. .ಲಿ. ಮುಂಬಯಿ ಇವರು ಉದ್ಘಾಟಿಸಲಿದ್ದಾರೆ.
ಅದೇ ರೀತಿ ದಿ.ಅಡ್ವೋಕೇಟ್ ಜಿ.ರಾಜಶೇಖರ ಬರ‍್ತಿ ಮಿನಿ ಅಡಿಟೋರಿಯಂನ್ನು ಸಿಎಸ್ ಚೆನ್ನೂರು ದ್ವಾರಕನಾಥ ಪ್ರಾಕ್ಟಿಸಿಂಗ್ ಕಂಪನಿ ಸೆಕ್ರೆಟರಿ ಹಾಗೂ ವೈಸ್ ಪ್ರೇಸಿಡೆಂಟ್, ದಿ.ಇನ್ಸಿಟ್ಯೂಟ್ಸ್ ಆಫ್ ಕಂಪನಿ ಸೆಕ್ರೆಟರಿಸ್ ನವದೆಹಲಿ ಮತ್ತು ಸಭಾಂಗಣದ ಉದ್ಘಾಟನೆಯನ್ನು ಶ್ರೀ. ಉಪ್ಪೂರು ಶೇಖರ ಶೆಟ್ಟಿ ಅಡ್ವೋಕೆಟ್ & ನೊಟರಿ ಭಾರತ ಸರ್ಕಾರ ಮುಂಬಯಿ ಹಾಗೂ ಮಾಜಿ ಅಧ್ಯಕ್ಷರು, ಬಾಂಬೆ ಬಂಟ್ಸ್ ಅಸೊಸಿಯೇಷನ್, ಮುಂಬಯಿ ಇವರು ಉದ್ಘಾಟಿಸಿಲಿದ್ದು, ನೂತನ ತರಗತಿಗಳನ್ನು ಡಾ.ಅಜಿತ ಪ್ರಸಾದ, ಕಾರ್ಯದರ್ಶಿಗಳು, ಜನತಾ ಶಿಕ್ಷಣ ಸಮಿತಿ, ಧಾರವಾಡ ಇವರು ಉದ್ಛಾಟಿಸಲಿದ್ದಾರೆ.
ಈ ಸಂದರ್ಭದಲ್ಲಿ ರಜತ ಮಹೋತ್ಸವ ಸ್ಮರಣ ಸಂಚಿಕೆಯನ್ನು ಪ್ರೋ. ಡಾ. ಜಯರಾಮ ಶೆಟ್ಟಿ ಎಸ್.
ಡೈರೆಕ್ಟರ್ & ಚೇರಮನ್ ಜೆ.ಎಸ್. ಪ್ರಿ-ಯುನಿವರ್ಸಿಟಿ & ಡಿಗ್ರಿ ಕಾಲೇಜ್ ಬೆಂಗಳೂರು ಇವರು ಬಿಡುಗಡೆ ಮಾಡಲಿದ್ದಾರೆ.
ಈ ಕಾರ್ಯಕ್ರಮದಲ್ಲಿ ವಿದ್ಯಾವಿಕಾಸ ಪ್ರಶಸ್ತಿ ಪ್ರಶಸ್ತಿಯನ್ನು ಸಿಎ ಎಸ್.ಬಿ.ಶೆಟ್ಟಿಪ್ರಾಕ್ಟಿಸಿಂಗ್ ಚಾರ್ಟರ್ಡ ಅಕೌಂಟಟ್, ಹುಬ್ಬಳ್ಳಿ ಹಾಗೂ ಡಾ.ಎಸ್.ಎನ್.ಭಟ್‌ನಿವೃತ್ತ ಪ್ರಾಧ್ಯಾಪಕರು, ಜೆ.ಎಸ್.ಎಸ್. ಕಾಲೇಜು ಧಾರವಾಡ ಇವರಿಗೆ ಮತ್ತು ವಿದ್ಯಾಪೋಷಕ ಪ್ರಶಸ್ತಿಯನ್ನು ಬಿ.ಸುಧಾಕರ,ನಿವೃತ್ತ, ಬ್ಯಾಂಕ್ ಮ್ಯಾನೇಜರ್ ಹಾಗೂ ಡೈರೆಕ್ಟರ್, ಸುಂದರ ರಾಮ ಶೆಟ್ಟಿ ನಗರ ಕ್ರೆಡಿಟ್ ಸೌಹಾರ್ದ ಸಹಕಾರಿ ಲಿ. ಮತ್ತು ಸಮಾಜ ಸೇವಕರು, ಬೆಂಗಳೂರು ಇವರಿಗೆ ಹಾಗೂ ಪ್ರಸನ್ನ ಶಂಕರ ಶೆಟ್ಟಿ, ಮ್ಯಾನೇಜಿಂಗ್ ಟ್ರಸ್ಟಿ, ಕೆ.ಶಂಕರ್ ಶೆಟ್ಟಿ ಚಾರಿಟೇಬಲ್ ಟ್ರಸ್ಟ್ ಹುಬ್ಬಳ್ಳಿ ಇವರಿಗೆ ಮತ್ತು ವೈದ್ಯಶ್ರೀ ಪ್ರಶಸ್ತಿಯನ್ನು ಡಾ. ರಘುನಾಥ ಎಸ್.ಕೆ ಸಿನಿಯರ್ ವೈಸ್ ಪ್ರೆಸಿಡೆಂಟ್ & ಟ್ರಸ್ಟಿ ಗ್ಲೋಬಲ್ ಪ್ರೋಸ್ಟೇಟ್ ಕ್ಯಾನ್ಸರ್ ಫೌಂಡೇಶನ್,ಬೆಂಗಳೂರು ಇವರಿಗೆ ಹಾಗೂ ಡಾ. ಅರವಿಂದ ಎಮ್. ಶೆಟ್ಟಿ ಮೆಡಿಕಲ್ ಆಫೀಸರ್ ಐ.ಐ.ಟಿ, ಧಾರವಾಡ ಇವರಿಗೆ ಮತ್ತು ಡಾ. (ಶ್ರೀಮತಿ) ಶಕುಂತಲಾ ಅರವಿಂದ ಶೆಟ್ಟಿ ಖ್ಯಾತ ಸ್ತ್ರೀ ರೋಗ ತಜ್ಞೆ, ಧಾರವಾಡ ಇವರಿಗೆ ಪ್ರದಾನ ಮಾಡಲಾಗುವುದು ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಥೆಯ ಅಧ್ಯಕ್ಷರಾದ ಡಾ.ಡಿ.ಜಿ ಶೆಟ್ಟಿ ಯವರು ವಹಿಸಲಿದ್ದಾರೆ.

spot_img
spot_img
spot_img
spot_img
spot_img

Related Articles

- Advertisement -spot_img

Latest Articles

error: Content is protected !!