ಬೆಂಗಳೂರು, ಡಿಸೆಂಬರ್ 31 (ಕರ್ನಾಟಕ ವಾರ್ತೆ):
ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿಯಿಂದ ಮಕ್ಕಳಿಗೆ ಹಾಗೂ ಆಸಕ್ತ ಪುರುಷ-ಮಹಿಳೆಯರಿಗೆ ಕೊಡವ ಆಟ್-ಪಾಟ್ ಪಡಿಪು ಶಿಬಿರ ನಡೆಸಲು ನಿರ್ಧರಿಸಿದೆ. ಇದರನ್ವಯ ಉಮ್ಮತಾಟ್, ಉರ್‍ಟಿಕೊಟ್ಟ್ ಆಟ್, ಬೊಳಕಾಟ್, ಕೋಲಾಟ್, ಕತ್ತಿಯಾಟ್, ಚೌರಿಯಾಟ್ ಹಾಗೂ ಬಾಳೊಪಾಟ್, ದುಡಿಕೊಟ್ಟ್ ನಂತಹÀ ಕೊಡವ ಸಂಸ್ಕøತಿಯ ಆಟ್-ಪಾಟ್ ತರಬೇತಿಯನ್ನು ಕನಿಷ್ಟ 15 ದಿನಗಳವರೆಗೆ ಸಾಮೂಹಿಕವಾಗಿ ನೀಡಲಾಗುವುದು. ಕೊಡವರ ಕುಪ್ಯ-ಚೇಲೆ, ಮಂಡೆ ವಸ್ತ್ರ, ಕೊಡವತಿ ಪೊಡಿಯ ಉಡುವ ಕ್ರಮವನ್ನು ಕಲಿಸಲಾಗುವುದು. ಕೊಡವರ ಕೋರೆಕೆಟ್ಟ್, ಪಾನಿಕೆಟ್ಟ್‍ಗಳ ತರಬೇತಿ ನೀಡಲಾಗುವುದು. ಇದರೊಂದಿಗೆ ‘ದುಡಿ ಪೊಲ್‍ಪ’ ತರಬೇತಿಯನ್ನು ನೀಡಲು ಉದ್ದೇಶಿಸಲಾಗಿದೆ.
ತರಬೇತಿ ಬಯಸುವ ವಿದ್ಯಾಸಂಸ್ಥೆಗಳು, ಸಂಘ-ಸಂಸ್ಥೆಗಳ ಹೆಸರು, ವಿಳಾಸದೊಂದಿಗೆ ಅಕಾಡೆಮಿ ಕಚೇರಿಯಲ್ಲಿ ಹೆಸರು ನೋಂದಾಯಿಸಿಕೊಳ್ಳುವುದು. ಹೆಚ್ಚಿನ ಮಾಹಿತಿಗಾಗಿ ಕಚೇರಿ ಮೊಬೈಲ್ ಸಂಖ್ಯೆ-8762942976 ನ್ನು ಸಂಪರ್ಕಿಸಬಹುದು.
ಆದ್ದರಿಂದ ಈ ಎಲ್ಲಾ ಕಲೆಗಳಲ್ಲಿ ಅರಿವು-ಅನುಭವ ಇರುವ ತಜ್ಞರು, ತರಬೇತುದಾರರು ತಮ್ಮ ಸ್ವ ವಿವರಗಳೊಂದಿಗೆ ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿಯ ರಿಜಿಸ್ಟ್ರಾರ್‍ಗೆ ಬರೆಯುವುದು.
ತರಬೇತುದಾರರಿಗೆ ಅಕಾಡೆಮಿ ವತಿಯಿಂದ ಸೂಕ್ತ ಸಂಭಾವನೆ ನೀಡಲಾಗುವುದು. ತರಬೇತಿ ಪಡೆಯುವ ವೇಳೆ ಶಿಬಿರಾರ್ಥಿಗಳಿಗೆ ಲಘು ಫಲಹಾರವನ್ನು ಒದಗಿಸಲಾಗುವುದು ಎಂದು ಅಧ್ಯಕ್ಷರಾದ ಅಜ್ಜಿನಿಕಂಡ ಸಿ. ಮಹೇಶ್ ನಾಚಯ್ಯನವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.