24.9 C
Karnataka
Wednesday, February 5, 2025
spot_img

ವಿಶ್ವದ ಅತಿದೊಡ್ಡ ಚುನಾವಣೆಯ ಕುರಿತು ಭಾರತ ಚುನಾವಣಾ ಆಯೋಗದ ವತಿಯಿಂದ ದತ್ತಾಂಶ ಪ್ರಕಟಣೆ

2024 ರ ಲೋಕಸಭಾ ಚುನಾವಣೆಯ ಕುರಿತು ವಿಶೇಷ ಲೇಖನ

2024 ರ ಲೋಕಸಭಾ ಚುನಾವಣೆ ಮತ್ತು ಜೊತೆಯಲ್ಲಿ ನೆಡೆದ 4 ರಾಜ್ಯಗಳ ವಿಧಾನಸಭಾ ಚುನಾವಣೆಗಳ ಸಂಕ್ಷಿಪ್ತ ಡೇಟಾವನ್ನು ಆಯೋಗದಿಂದ ಬಿಡುಗಡೆ

ವಿಶ್ವಾದ್ಯಂತ ಶಿಕ್ಷಣ ತಜ್ಞರು, ಸಂಶೋಧಕರು, ಚುನಾವಣಾ ವೀಕ್ಷಕರು ಸೇರಿದಂತೆ ಮತದಾರರಿಗೆ ಅನುಕೂಲವಾಗಬಲ್ಲ ದತ್ತಾಂಶಗಳು:

ಬೆಂಗಳೂರು, ಡಿಸೆಂಬರ್ 31 (ಕರ್ನಾಟಕ ವಾರ್ತೆ) :

ಭಾರತದ ಚುನಾವಣಾ ಆಯೋಗವು 2024 ರ ಲೋಕಸಭಾ ಚುನಾವಣೆಗೆ ಸಂಬಂಧಿಸಿದಂತೆ 42 ಅಂಕಿಅಂಶಗಳ ವರದಿಗಳು ಮತ್ತು ಆಂಧ್ರಪ್ರದೇಶ, ಅರುಣಾಚಲ ಪ್ರದೇಶ, ಒಡಿಶಾ ಮತ್ತು ಸಿಕ್ಕಿಂ ನಾಲ್ಕು ರಾಜ್ಯಗಳಲ್ಲಿ ಏಕಕಾಲದಲ್ಲಿ ನಡೆದ ವಿಧಾನಸಭಾ ಚುನಾವಣೆಗಳಿಗೆ 14 ಅಂಕಿಅಂಶಗಳ ವರದಿಗಳ ಸಮಗ್ರ ದತ್ತಾಂಶಗಳನ್ನು ಬಿಡುಗಡೆ ಮಾಡಿದೆ.

ಆಯೋಗದ ಈ ಸ್ವಯಂ ಪ್ರೇರಿತ ಕಾರ್ಯವು ಭಾರತದ ಚುನಾವಣಾ ವ್ಯವಸ್ಥೆಯ ಆಧಾರವಾಗಿರುವ ಸಾರ್ವಜನಿಕ ನಂಬಿಕೆಯನ್ನು ಹೆಚ್ಚಿಸುವ ಉದ್ದೇಶವನ್ನು ಹೊಂದಿರುತ್ತದೆ. ವ್ಯಾಪಕವಾದ ಸವಿವರವಾದ ದತ್ತಾಂಶ ಬಿಡುಗಡೆಯು, ಶೈಕ್ಷಣಿಕ, ಸಂಶೋಧನೆ ಮತ್ತು ಸಾರ್ವಜನಿಕರು ಸೇರಿದಂತೆ ಎಲ್ಲಾ ಪಾಲುದಾರರಿಗೆ ಚುನಾವಣೆಗೆ ಸಂಬಂಧಿಸಿದ ದತ್ತಾಂಶದ ಪ್ರತಿ ವಿವರಗಳನ್ನು ಬಹಿರಂಗಪಡಿಸುವಿಕೆಯ ಮೂಲಕ ಹೆಚ್ಚಿನ ಪಾರದರ್ಶಕತೆ ಕಾಪಾಡಿಕೊಳ್ಳುವುದು ಆಯೋಗದ ನೀತಿಯ ಮುಂದುವರಿಕೆಯಾಗಿದೆ.

ಈ ದತ್ತಾಂಶ ವಿವರಗಳು ವಿವಿಧ ರೀತಿಯ ಮಾಹಿತಿಗಳನ್ನು ಒಳಗೊಂಡಿವೆ, ಉದಾಹರಣೆಗೆ ಲೋಕಸಭಾ ಕ್ಷೇತ್ರ / ವಿಧಾನಸಭಾ ಕ್ಷೇತ್ರ / ರಾಜ್ಯವಾರು ಮತದಾರರ ವಿವರಗಳು, ಮತದಾನ ಕೇಂದ್ರಗಳ ಸಂಖ್ಯೆ, ರಾಜ್ಯ / ಲೋಕಸಭಾ ಕ್ಷೇತ್ರವಾರು ಮತದಾರರ ಮತದಾನ, ಪಕ್ಷವಾರು ಮತ ಹಂಚಿಕೆ, ಲಿಂಗ ಆಧಾರಿತ ಮತದಾನದ ನಡವಳಿಕೆ, ರಾಜ್ಯವಾರು ಮಹಿಳಾ ಮತದಾರರ ಭಾಗವಹಿಸುವಿಕೆ, ಪ್ರಾದೇಶಿಕ ವ್ಯತ್ಯಾಸಗಳು, ಕ್ಷೇತ್ರವಾರು ದತ್ತಾಂಶ ಸಾರಾಂಶ ವರದಿ, ರಾಷ್ಟ್ರೀಯ / ರಾಜ್ಯ ಪಕ್ಷಗಳು / ಆರ್ಯುಪಿಪಿಗಳ ಕಾರ್ಯಕ್ಷಮತೆ, ವಿಜೇತ ಅಭ್ಯರ್ಥಿಗಳ ವಿಶ್ಲೇಷಣೆ, ಕ್ಷೇತ್ರವಾರು ಸೇರಿದಂತೆ ವಿವರವಾದ ಫಲಿತಾಂಶಗಳು ಮತ್ತು ಇನ್ನೂ ಅನೇಕ ಆಳವಾದ ಒಳನೋಟಗಳು ಮತ್ತು ವಿಶ್ಲೇಷಣೆಗಳನ್ನು ನಡೆಸಲು ಸಿದ್ಧಪಡಿಸಲಾದ ಈ ದತ್ತಾಂಶವನ್ನು ಸಂಶೋಧಕರು, ನೀತಿ ನಿರೂಪಕರು ಮತ್ತು ಪತ್ರಕರ್ತರು ಈಗ ಬಳಸಿಕೊಳ್ಳಬಹುದಾಗಿದೆ.

2024 ರ ಸಾರ್ವತ್ರಿಕ ಲೋಕಸಭಾ ಚುನಾವಣೆ ದತ್ತಾಂಶಗಳ ಸವಿವರವಾದ ವರದಿ ಮತ್ತು ಅಂಕಿ-ಅಂಶಗಳನ್ನು ಭಾರತ ಚುನಾವಣಾ ಆಯೋಗದ ಲಿಂಕ್ Menu>> MEDIA & PUBLICATION>> Election Results & Statistics < https://www.eci.gov.in/statistical-reports  ಮೂಲಕ ಪಡೆದುಕೊಳ್ಳಬಹುದಾಗಿದೆ.

ದೇಶದ 542 ಲೋಕಸಭಾ ಕ್ಷೇತ್ರಗಳಿಗೆ ಸಂಬಂಧಿಸಿದಂತೆ ಒಟ್ಟು 42 ಅಂಕಿಅಂಶಗಳ ವರದಿಗಳ ಸಮಗ್ರ ದತ್ತಾಂ± ಮಾಹಿತಿ :(ಅಂಕಿಅಂಶಗಳ ವರದಿಗಳು ಸಂಖ್ಯೆ 2(ಎ) ಮತ್ತು 35 ರಿಂದ 37(ಎ) ವರೆಗಿನ ಮಾಹಿತಿ ಸೂರತ್ ಲೋಕಸಭಾ ಕ್ಷೇತ್ರವನ್ನು ಸಹ ಒಳಗೊಂಡಿದೆ)

1. 2024 ರ ಲೋಕಸಭಾ ಸಾರ್ವತ್ರಿಕ ಚುನಾವಣೆಯ ವೇಳಾಪಟ್ಟಿ, 1 (ಎ). ಇತರೆ ಸಂಕ್ಷೇಪಣಗಳು ಮತ್ತು  ವಿವರಣೆಗಳು, 2. ಚುನಾವಣೆಗಳ ಮುಖ್ಯಾಂಶಗಳು, 2 (ಎ). ಸೂರತ್ ಲೋಕಸಭಾ ಕ್ಷೇತ್ರಕ್ಕೆ ಸಂಬಂಧಿಸಿದ ದತ್ತಾಂಶ ಸಾರಾಂಶ, 3. ಭಾಗವಹಿಸಿದ ರಾಜಕೀಯ ಪಕ್ಷಗಳ ಪಟ್ಟಿ, 4. ಗೆದ್ದ ಅಭ್ಯರ್ಥಿಗಳ ವಿವರ, 5. ವಿಧಾನಸಭಾ ಕ್ಷೇತ್ರಗಳ ಸಂಖ್ಯೆ ಮತ್ತು ವಿಧಗಳು, 6. ರಾಜ್ಯವಾರು ಅಭ್ಯರ್ಥಿಗಳ ಮಾಹಿತಿಯ ಸಾರಾಂಶ, 7. ಕ್ಷೇತ್ರ (ಪಿಸಿ)ವಾರು ಸಾರಾಂಶ, 8. ಪ್ರತಿ ಕ್ಷೇತ್ರವಾರು ಅಭ್ಯರ್ಥಿಗಳ ಸಂಖ್ಯೆ, 9. ರಾಜ್ಯವಾರು ಮತದಾರರ ಸಂಖ್ಯೆ, 10. ಮತದಾರರ ಮಾಹಿತಿ, 11. ರಾಜ್ಯವಾರು ವಿದೇಶಿ ಮತದಾರರ ವಿವರ, 12. ರಾಜ್ಯವಾರು ಮತದಾರರು ಮತದಾನ, 13. ಲೋಕಸಭಾ ಕ್ಷೇತ್ರವಾರು  ಮತದಾನದ ವಿವರ, 14. ಲೋಕಸಭಾ ಕ್ಷೇತ್ರವಾರು ಚಲಾಯಿಸಿದ ಮತಗಳ ವಿತರಣೆ, 15. ವಿಧಾನಸಭಾ ಕ್ಷೇತ್ರವಾರು ಮತದಾರರ ಮಾಹಿತಿ, 16. ಮರು-ಮತದಾನದ ವಿವರಗಳು, 17. ರಾಜ್ಯವಾರು ಗೆದ್ದ/ಪಕ್ಷವಾರು ಗಳಿಸಿದ ಒಟ್ಟು ಮತಗಳ ಮಾಹಿತಿ, 18. ಪಕ್ಷವಾರು ಗೆದ್ದ ಸ್ಥಾನಗಳು / ಪ್ರತಿ ರಾಜ್ಯದಲ್ಲಿ ಚಲಾವಣೆಯಾದ ಮತಗಳು, 19. ರಾಜಕೀಯ ಪಕ್ಷಗಳವಾರು ಠೇವಣಿ ಕಳೆದುಕೊಂಡವರ ಮಾಹಿತಿ, 20. ರಾಷ್ಟ್ರೀಯ ಪಕ್ಷಗಳ ಕಾರ್ಯಕ್ಷಮತೆ, 21. ರಾಜ್ಯ ಪಕ್ಷಗಳ ಕಾರ್ಯಕ್ಷಮತೆ, 22. ನೋಂದಾಯಿತ (ಗುರುತಿಸದ) ಪಕ್ಷಗಳ ಕಾರ್ಯಕ್ಷಮತೆ, 22(ಎ) ಸ್ವತಂತ್ರ ಅಭ್ಯರ್ಥಿಗಳ ಸಾಧನೆ, 23. ಮತದಾನದಲ್ಲಿ ಮಹಿಳಾ ಮತದಾರರ ಭಾಗವಹಿಸುವಿಕೆ. 24. ಚುನಾವಣೆಯಲ್ಲಿ ಮಹಿಳಾ ಅಭ್ಯರ್ಥಿಗಳ ಭಾಗವಹಿಸುವಿಕೆ, 25. ಮಹಿಳಾ ಅಭ್ಯರ್ಥಿಗಳ ವೈಯಕ್ತಿಕ ಸಾಧನೆ, 26. ರಾಷ್ಟ್ರೀಯ ಪಕ್ಷಗಳಲ್ಲಿ ಮಹಿಳಾ ಅಭ್ಯರ್ಥಿಗಳ ಭಾಗವಹಿಸುವಿಕೆ, 27. ರಾಜ್ಯ ಮಟ್ಟದ ಪಕ್ಷಗಳಲ್ಲಿ ಮಹಿಳೆಯರ ಭಾಗವಹಿಸುವಿಕೆ, 28. ಮಾನ್ಯತೆ ಹೊಂದಿದ (ಗುರುತಿಸಲಾಗದ) ಪಕ್ಷಗಳಲ್ಲಿ ಮಹಿಳೆಯರ ಭಾಗವಹಿಸುವಿಕೆ, 29. ಸ್ವತಂತ್ರ ಅಭ್ಯರ್ಥಿಗಳಾಗಿ ಮಹಿಳೆಯರ ಭಾಗವಹಿಸುವಿಕೆ, 30. ವಿಜೇತ ಅಭ್ಯರ್ಥಿಗಳು ಒಟ್ಟು ಮತಗಳ ವಿಶ್ಲೇಷಣೆ, 31. ಗೆದ್ದ ಅಭ್ಯರ್ಥಿಗಳು ಒಟ್ಟು ಮತಗಳ / ಮತದಾರರ ವಿಶ್ಲೇಷಣೆ, 32. ಕ್ಷೇತ್ರವಾರು ದತ್ತಾಂಶ ಸಾರಾಂಶ ವರದಿ, 33. ಕ್ಷೇತ್ರವಾರು ವಿವರವಾದ ಫಲಿತಾಂಶ, 34. ಲೋಕಸಭಾ ಕ್ಷೇತ್ರಗಳ ವಿಧಾನಸಭಾ ಕ್ಷೇತ್ರವಾರು ವಿವರಗಳು, 35. ರಾಷ್ಟ್ರ ಮಟ್ಟದಲ್ಲಿ ಮತದಾರರು ಮತ್ತು ಅಭ್ಯರ್ಥಿಗಳು ವಿವರ (ಸೂರತ್ ಲೋ.ಸ.ಕ್ಷೇ ಸೇರಿದಂತೆ), 36. ರಾಜ್ಯ ಮಟ್ಟದ ಮತದಾರರ ಮಾಹಿತಿ (ಸೂರತ್ ಲೋ.ಸ.ಕ್ಷೇ ಸೇರಿದಂತೆ), 36 (ಎ) ರಾಜ್ಯ ಮಟ್ಟದ ಅಭ್ಯರ್ಥಿಗಳ ಮಾಹಿತಿ (ಸೂರತ್ ಲೋ.ಸ.ಕ್ಷೇ ಸೇರಿದಂತೆ), 37. ಲೋಕಸಭಾ ಕ್ಷೇತ್ರಗಳ ಮಟ್ಟದ ಮತದಾರರ ಮಾಹಿತಿ (ಸೂರತ್ ಲೋ.ಸ.ಕ್ಷೇ ಸೇರಿದಂತೆ), 37.(ಎ) ಲೋಕಸಭಾ ಕ್ಷೇತ್ರಗಳ ಮಟ್ಟದಲ್ಲಿ ಅಭ್ಯರ್ಥಿ ಮಾಹಿತಿ (ಸೂರತ್ ಲೋ.ಸ.ಕ್ಷೇ ಸೇರಿದಂತೆ), ಹಿಂದಿನ ಚುನಾವಣೆಗಳಿಗೆ ಸಂಬಂಧಿಸಿದಂತೆ ಇದೇ ರೀತಿಯ ವಿವರವಾದ ದತ್ತಾಂಶಗಳು ಈಗಾಗಲೇ ಆಯೋಗದ ವೆಬ್‍ಸೈಟ್‍ನಲ್ಲಿ ಲಭ್ಯವಿರುವುದರಿಂದ, ಈ ವರದಿಗಳು ಚುನಾವಣಾ ಮತ್ತು ರಾಜಕೀಯ ಕುರಿತು ದೀರ್ಘಾವಧಿಯ ದೃಷ್ಟಿಕೋನ ಮತ್ತು ಬದಲಾವಣೆಗಳನ್ನು ಹಾಗೂ ವಿಶ್ಲೇಷಣೆಗೆ ಸಹಕಾರಿಯಾಗುತ್ತದೆ.

ಲೋಕಸಭಾ ಸಾರ್ವತ್ರಿಕ ಚುನಾವಣೆ 2024 ಕ್ಕೆ ಸಂಬಂಧಿಸಿದ 42 ವರದಿಗಳ ಕೆಲವು ಮುಖ್ಯಾಂಶಗಳ ಪಟ್ಟಿ – ಮತದಾರರ ವಿವರ:

ಒಟ್ಟು ನೋಂದಾಯಿತ ಮತದಾರರು: ಲೋಕಸಭೆ ಚುನಾವಣೆ: 2019 ರಲ್ಲಿ 91,19,50,734 ಕ್ಕೆ ಹೋಲಿಸಿದರೆ 2024 ರಲ್ಲಿ 97,97,51,847 ನೋಂದಾಯಿತ ಮತದಾರರಿದ್ದಾರೆ. 2019 ಕ್ಕಿಂತ 2024 ರಲ್ಲಿ ಒಟ್ಟು ಮತದಾರರಲ್ಲಿ 7.43% ಹೆಚ್ಚಳವಾಗಿರುವುದು ಕಂಡುಬರುತ್ತದೆ. 2024 ರಲ್ಲಿ 64.64 ಕೋಟಿ ಮತಗಳು ಚಲಾವಣೆಯಾಗಿವೆ, 2019 ರಲ್ಲಿ 61.4 ಕೋಟಿ ಮತಗಳು ಚಲಾವಣೆಯಾಗಿದ್ದವು.
ಇವಿಎಂ + ಅಂಚೆ ಮತಗಳು: 64,64,20,869, ಇವಿಎಂ ಮತಗಳು: 64,21,39,275, ಪುರುಷರು: 32,93,61,948, ಮಹಿಳೆಯರು: 31,27,64,269, ತೃತೀಯ ಲಿಂಗ: 13,058, ಅಂಚೆ ಮತಪತ್ರಗಳು: 42,81,594,  ಅತಿ ಹೆಚ್ಚು ಮತದಾನ ಮಾಡಿರುವ ಲೋಕಸಭಾ ಕ್ಷೇತ್ರ: 92.3% ಧುಬ್ರಿ (ಅಸ್ಸಾಂ), ಅತಿ ಕಡಿಮೆ ಮತದಾನ ಮಾಡಿರುವ ಲೋಕಸಭಾ ಕ್ಷೇತ್ರ: 38.7% ಶ್ರೀನಗರ (ಜಮ್ಮು ಮತ್ತು ಕಾಶ್ಮೀರ), 2019 ರಲ್ಲಿ ಕೇವಲ 14.4% ರμÁ್ಟಗಿತ್ತು. ದೇಶದಲ್ಲಿ 50% ಕ್ಕಿಂತ ಕಡಿಮೆ ಮತದಾನ ಮಾಡಿರುವ ಲೋಕಸಭಾ ಕ್ಷೇತ್ರ ಸಂಖ್ಯೆ: 11,  2024 ರಲ್ಲಿ ನೋಟಾಗೆ 63,71,839 (0.99%) ಮತಗಳು ಬಿದ್ದಿದ್ದು, 2019 ರಲ್ಲಿ ಇದು 1.06% ರಷ್ಟಿತ್ತು. ಲಿಂಗಪರಿವರ್ತಿತ ಮತದಾರರು (ತೃತೀಯ ಲಿಂಗಿಗಳು) 27.09% ಮತದಾನ ಮಾಡಿದ್ದಾರೆ.

ಮತದಾನ ಕೇಂದ್ರಗಳು:

2019 ರಲ್ಲಿ 10,37,848 ಕ್ಕೆ ಹೋಲಿಸಿದರೆ 2024 ರಲ್ಲಿ 10,52,664 ಮತಗಟ್ಟೆಗಳು. 40 ಮತಗಟ್ಟೆಗಳಲ್ಲಿ ಮಾತ್ರ ಮರುಮತದಾನ ಮಾಡಲಾಗಿದೆ. (2019 ರಲ್ಲಿ 540 ಕ್ಕೆ ಹೋಲಿಸಿದರೆ ಮರುಮತದಾನ ವಾದ ಒಟ್ಟು ಮತಗಟ್ಟೆಗಳು ಕೇವಲ 0.0038%). ಒಂದು ಮತಗಟ್ಟೆಗೆ ಮತದಾರರ ಸರಾಸರಿ ಸಂಖ್ಯೆ: 931, ಅತಿ ಹೆಚ್ಚು ಮತಗಟ್ಟೆ ಹೊಂದಿರುವ ರಾಜ್ಯ: ಉತ್ತರ ಪ್ರದೇಶ (1,62,069), ಕಡಿಮೆ ಸಂಖ್ಯೆಯ ಮತಗಟ್ಟೆ ಹೊಂದಿರುವ ರಾಜ್ಯ/ ಯುಟಿ: ಲಕ್ಷದ್ವೀಪ (55 ಪಿಎಸ್). 1000 ಗಿಂತ ಕಡಿಮೆ ಮತಗಟ್ಟೆ ಇರುವ ಸಂಸದೀಯ ಕ್ಷೇತ್ರಗಳ (ಪಿಸಿಎಸ್) ಸಂಖ್ಯೆ: 11.,  3000 ಗಿಂತ ಹೆಚ್ಚಿನ ಮತಗಟ್ಟೆ ಇರುವ ಸಂಸದೀಯ ಕ್ಷೇತ್ರಗಳ (ಪಿಸಿಎಸ್) ಸಂಖ್ಯೆ: 3, 2019 ಕ್ಕೆ ಹೋಲಿಸಿದರೆ 2024 ರಲ್ಲಿ ಅತಿ ಹೆಚ್ಚು ಹೊಸ ಮತದಾನ ಕೇಂದ್ರಗಳನ್ನು ಹೊಂದಿರುವ ರಾಜ್ಯ: ಬಿಹಾರ (4739 ಮತಗಟ್ಟೆಗಳು), ನಂತರ ಪಶ್ಚಿಮ ಬಂಗಾಳ (1731 ಮತಗಟ್ಟೆಗಳು).

ನಾಮನಿರ್ದೇಶನಗಳು:

2019 ರಲ್ಲಿ 11692 ಕ್ಕೆ ಹೋಲಿಸಿದರೆ 2024 ರಲ್ಲಿ 12,459 ನಾಮಪತ್ರಗಳು ಸಲ್ಲಿಕೆಯಾಗಿವೆ. ದೇಶದಲ್ಲಿಯೇ ಅತಿ ಹೆಚ್ಚು ನಾಮಪತ್ರಗಳನ್ನು ಹೊಂದಿರುವ ಲೋಕಸಭಾ ಕ್ಷೇತ್ರ: 114 ಪಿಸಿ- ಮಲ್ಕಾಜ್‍ಗಿರಿ (ತೆಲಂಗಾಣ), ಕಡಿಮೆ ಸಂಖ್ಯೆಯ ನಾಮಪತ್ರಗಳನ್ನು ಹೊಂದಿರುವ Pಅ (ಸೂರತ್ ಹೊರತುಪಡಿಸಿ): 3 ಪಿಸಿ ದಿಬ್ರುಗಢ್ (ಅಸ್ಸಾಂ),  2024 ರ ಚುನಾವಣೆಗಳಲ್ಲಿ, 8,360 ನಾಮಪತ್ರಗಳನ್ನು ತಿರಸ್ಕರಿಸಿದ ನಂತರ ಮತ್ತು ದೇಶಾದ್ಯಂತ ಸಲ್ಲಿಸಿದ ಒಟ್ಟು 12,459 ನಾಮಪತ್ರಗಳಿಂದ ಹಿಂತೆಗೆದುಕೊಂಡ ನಂತರ ಸ್ಪರ್ಧಿಸುವ ಅಂತಿಮ ಅಭ್ಯರ್ಥಿಗಳಾಗಿ ಅರ್ಹತೆ ಪಡೆದರು. 2019ರ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಅಭ್ಯರ್ಥಿಗಳ ಸಂಖ್ಯೆ 8054.

ಮಹಿಳಾ ಶಕ್ತಿ:

ನೋಂದಾಯಿತ ಮತದಾರರು – 2024 ರ ಒಟ್ಟು ಮತದಾರರು 97,97,51,847, ಇದರಲ್ಲಿ 47,63,11,240 ಮಹಿಳಾ ಮತದಾರರಿದ್ದರು. 2019 ರಲ್ಲಿ 48.09% ಒಟ್ಟು ಮಹಿಳಾ ಮತದಾರರು 43,85,37,911 ಗೆ ಹೋಲಿಸಿದರೆ 2024 ರಲ್ಲಿ 48.62% ಮಹಿಳಾ ಮತದಾರರು. 2024 ರಲ್ಲಿ ಅತಿ ಹೆಚ್ಚು ಮಹಿಳಾ ಮತದಾರರ ಪಾಲನ್ನು ಹೊಂದಿರುವ ರಾಜ್ಯ: ಪುದುಚೇರಿ (53.03%) ನಂತರ ಕೇರಳ (51.56%). 2024 ರಲ್ಲಿ, ಪ್ರತಿ 1000 ಪುರುಷ ಮತದಾರರಿಗೆ ಮಹಿಳಾ ಮತದಾರರ ಸಂಖ್ಯೆ ಹೊಸ ಗರಿಷ್ಠ ಅಂದರೆ 946. 2019 ರಲ್ಲಿ ಪ್ರತಿ ಸಾವಿರ ಪುರುಷರಿಗೆ 926 ಮಹಿಳಾ ಮತದಾರರಿದ್ದರು.

• ಮತದಾನ:

65.55% ಪುರುಷ ಮತದಾರರಿಗೆ ಹೋಲಿಸಿದರೆ 65.78% ಮಹಿಳಾ ಮತದಾರರು 2024 ರಲ್ಲಿ (ಸೂರತ್ ಹೊರತುಪಡಿಸಿ) ಮತ ಚಲಾಯಿಸಿದ್ದಾರೆ. 2019 ರಂತೆಯೇ 2024 ರಲ್ಲಿ ಮಹಿಳೆಯರ ಸಂಖ್ಯೆಯು ಪುರುಷರಿಗಿಂತ ಹೆಚ್ಚಾಗಿದೆ; ಸಾರ್ವತ್ರಿಕ ಲೋಕಸಭಾ ಚುನಾವಣೆಯ ಇತಿಹಾಸದಲ್ಲಿ ಇದು ಎರಡನೇ ಬಾರಿ. ಮಹಿಳಾ ಮತದಾರರಲ್ಲಿ ಅತಿ ಹೆಚ್ಚು ಗಿಖಿಖ ಹೊಂದಿರುವ ಸಂಸದೀಯ ಕ್ಷೇತ್ರ: 92.17% ಮಹಿಳಾ ಮತದಾನದೊಂದಿಗೆ ಧುಬ್ರಿ (ಅಸ್ಸಾಂ), 87.57% ರೊಂದಿಗೆ ತಮ್ಲುಕ್ (ಪಶ್ಚಿಮ ಬಂಗಾಳ) ನಂತರದ ಸ್ಥಾನದಲ್ಲಿದೆ.

• ಮಹಿಳಾ ಅಭ್ಯರ್ಥಿಗಳು:

2019 ರಲ್ಲಿ 726 ಮಹಿಳಾ ಸ್ಪರ್ಧಿ ಅಭ್ಯರ್ಥಿಗಳಿಗೆ ಹೋಲಿಸಿದರೆ, 2024 ರಲ್ಲಿ ಮಹಿಳಾ ಸ್ಪರ್ಧಿ ಅಭ್ಯರ್ಥಿಗಳ ಸಂಖ್ಯೆ 800 ಆಗಿತ್ತು. ಅತಿ ಹೆಚ್ಚು ಮಹಿಳಾ ಅಭ್ಯರ್ಥಿಗಳನ್ನು ಹೊಂದಿರುವ ರಾಜ್ಯ: ಮಹಾರಾಷ್ಟ್ರ [111] ನಂತರ ಉತ್ತರ ಪ್ರದೇಶ [80] ಮತ್ತು ತಮಿಳುನಾಡು[77]. ಎಲ್ಲಾ ಒಟ್ಟು 543 ಲೋಕಸಭಾ ಕ್ಷೇತ್ರಗಳಿಗೆ ಹೋಲಿಸಿದಲ್ಲಿ 152 ಲೋಕಸಭಾ ಕ್ಷೇತ್ರಗಳಲ್ಲಿ ಯಾವುದೇ ಮಹಿಳಾ ಅಭ್ಯರ್ಥಿಗಳು ಸ್ಪರ್ಧಿಸಿರುವುದಿಲ್ಲ.

ಎಲ್ಲರನ್ನೂ ಒಳಗೊಳ್ಳುವ ಚುನಾವಣೆಗಳು:

2019 ರಲ್ಲಿ 39,075 ಕ್ಕೆ ಹೋಲಿಸಿದರೆ 2024 ರಲ್ಲಿ 48,272 ತೃತೀಯ ಲಿಂಗ ಮತದಾರರನ್ನು ನೋಂದಾಯಿಸಲಾಗಿದೆ. ಐದು ವರ್ಷಗಳ ಅವಧಿಯಲ್ಲಿ 23.5% ರಷ್ಟು ಹೆಚ್ಚಳವಾಗಿದೆ. ಅತಿ ಹೆಚ್ಚು ನೋಂದಾಯಿತ ತೃತೀಯ ಲಿಂಗ ಮತದಾರರನ್ನು ಹೊಂದಿರುವ ರಾಜ್ಯ: ತಮಿಳುನಾಡು (8,467). 2019 ರಲ್ಲಿ 61,67,482 ಗೆ ಹೋಲಿಸಿದರೆ 2024 ರಲ್ಲಿ 90,28,696 ನೋಂದಾಯಿತ ದಿವ್ಯಾಂಗ ಮತದಾರರಿದ್ದಾರೆ. 2019 ರಲ್ಲಿ 14.64% ಕ್ಕೆ ಹೋಲಿಸಿದರೆ 2024 ರ ಲೋಕಸಭಾ ಚುನಾವಣೆಯಲ್ಲಿ 27.09% ತೃತೀಯ ಲಿಂಗ ಮತದಾರರು ಮತ ಚಲಾಯಿಸಿದ್ದಾರೆ-ಬಹುತೇಕ ದ್ವಿಗುಣವಾಗಿದೆ. 2019 ರಲ್ಲಿ 99,844 ನೋಂದಾಯಿತ ಸಾಗರೋತ್ತರ ಮತದಾರರಿಗೆ ಹೋಲಿಸಿದರೆ 2024 ರಲ್ಲಿ 1,19,374 ನೋಂದಾಯಿತ ಸಾಗರೋತ್ತರ ಮತದಾರರು [ಪುರುಷ: 1,06,411; ಮಹಿಳೆ: 12,950; ಮೂರನೇ ಲಿಂಗ: 13]

ಫಲಿತಾಂಶಗಳು:

2024 ರ ಸಾರ್ವತ್ರಿಕ ಲೋಕಸಭಾ ಚುನಾವಣೆಯಲ್ಲಿ ದೇಶದಲ್ಲಿ ಒಟ್ಟು 6 ರಾಷ್ಟ್ರೀಯ ಪಕ್ಷಗಳು ಭಾಗವಹಿಸಿದ್ದವು- ಈ 6 ಪಕ್ಷಗಳ ಒಟ್ಟು ಮತ ಹಂಚಿಕೆಯು ಒಟ್ಟು ಮಾನ್ಯ ಮತಗಳ 63.35% ಆಗಿತ್ತು. 2019 ರಲ್ಲಿ 6923 ಅಭ್ಯರ್ಥಿಗಳಿಗೆ ಹೋಲಿಸಿದರೆ 2024 ರ ಚುನಾವಣೆಯಲ್ಲಿ 7190 ಅಭ್ಯರ್ಥಿಗಳು ಠೇವಣಿಗಳನ್ನು ಕಳೆದುಕೊಂಡಿರುತ್ತಾರೆ. ಒಂದು ಲೋಕಸಭಾ ಕ್ಷೇತ್ರ -ಸೂರತ್ (ಗುಜರಾತ್) ಅವಿರೋಧವಾಗಿತ್ತು. ಒಟ್ಟು 3921 ಸ್ವತಂತ್ರ ಅಭ್ಯರ್ಥಿಗಳು ಸ್ಪರ್ಧಿಸಿದ್ದು 7 ಮಂದಿ ಮಾತ್ರ ಆಯ್ಕೆಯಾಗಿದ್ದಾರೆ. ಅದರಲ್ಲಿ 3905 ಸ್ವತಂತ್ರ ಅಭ್ಯರ್ಥಿಗಳು ಠೇವಣಿ ಕಳೆದುಕೊಂಡಿದ್ದಾರೆ. ಸ್ವತಂತ್ರ ಅಭ್ಯರ್ಥಿಗಳು ಪಡೆದ ಮತ ಹಂಚಿಕೆ ಒಟ್ಟು ಮಾನ್ಯ ಮತಗಳಲ್ಲಿ 2.79% ಆಗಿತ್ತು. 279 ಸ್ವತಂತ್ರ ಮಹಿಳಾ ಅಭ್ಯರ್ಥಿಗಳಿದ್ದರು.
ಪ್ರತಿ ದತ್ತಾಂಶಗಳ ಸವಿವರವಾದ ವರದಿ ಮತ್ತು ಅಂಕಿ-ಅಂಶಗಳನ್ನು ಭಾರತ ಚುನಾವಣಾ ಆಯೋಗದ ಲಿಂಕ್ Menu>> MEDIA & PUBLICATION>> Election Results & Statistics < https://www.eci.gov.in/statistical-reports ಮೂಲಕ ಪಡೆದುಕೊಳ್ಳಬಹುದಾಗಿದೆ.

Don’t miss your news!

We don’t spam! Read our privacy policy for more info.

Don’t miss your news!

We don’t spam! Read our privacy policy for more info.

Don’t miss your news!

We don’t spam! Read our privacy policy for more info.

Don’t miss your news!

We don’t spam! Read our privacy policy for more info.

Related Articles

Stay Connected

0FansLike
3,912FollowersFollow
0SubscribersSubscribe
- Advertisement -spot_img

Latest Articles

error: Content is protected !!