ಹುಬ್ಬಳ್ಳಿ ( ಕರ್ನಾಟಕ ವಾರ್ತೆ) ಫೆ.8: ನಗರದ ಚನ್ನಮ್ಮ ಸರ್ಕಲ್ ಹತ್ತಿರ ಫ್ಲೈ ಓವರ್ ಕಾಮಗಾರಿ ಪ್ರಾರಂಭಗೊಂಡಿದ್ದು, ಸುಗಮ ವಾಹನ ಸಂಚಾರದ ಹಿತದೃಷ್ಟಿಯಿಂದ ಹುಬ್ಬಳ್ಳಿ ಶಹರದಲ್ಲಿ ಸಂಚರಿಸುವ ವಾಹನಗಳಿಗೆ ಪ್ರತ್ಯೇಕವಾಗಿ ಮಾರ್ಗ ವ್ಯವಸ್ಥೆಯನ್ನು ಫೆಬ್ರವರಿ 10 ರಿಂದ ಮಾಡಲಾಗಿದೆ.
ಹೊಸೂರು ಸರ್ಕಲ್‍ದಿಂದ ಗದಗ ಕಡೆಗೆ ಸಂಚರಿಸುವ ಬಸ್, ಭಾರಿ ಗಾತ್ರದ ವಾಹನಗಳು, ಹಾಗೂ ಇತರೆ ವಾಹನಗಳ ಮಾರ್ಗ- ಹೊಸೂರು ಸರ್ಕಲ್‍ದಿಂದ ಬಸವವನ, ಹಳೇ ಬಸ್ಟ್ಯಾಂಡ ಅಯೋದ್ಯ ಹೋಟಲ್ ಮುಂದೆ ಹಾಯ್ದು, ಚನ್ನಮ್ಮ ಸರ್ಕಲ್, ಸಂಗೊಳ್ಳಿ ರಾಯಣ್ಣ ಸರ್ಕಲ್ ಮುಖಾಂತರ ಗದಗ ರಸ್ತೆಗೆ ಹೋಗುವುದು.
ಹೊಸೂರು ಸರ್ಕಲ್‍ದಿಂದ ವಿಜಯಪೂರ ರಸ್ತೆಗೆ ಸಂಚರಿಸುವ ಬಸ್ ಹಾಗೂ ಲಘು ವಾಹನಗಳ ಮಾರ್ಗ- ಹೊಸೂರು ಸರ್ಕಲ್‍ದಿಂದ, ಬೆಂಬಳಗಿ ಕ್ರಾಸ್, ಬಾಳಿಗಾ ಕ್ರಾಸ್, ಹುಬ್ಬಳ್ಳಿ ಸ್ಕ್ಯಾನ್ ಸೆಂಟರ್ ಹತ್ತಿರ ಎಡಕ್ಕೆ ತಿರುಗಿ ದೇಸಾಯಿ ಓವರ್ ಬ್ರಿಡ್ಡ ಮುಖಾಂತರ ಬಿಜಾಪೂರ ರಸ್ತೆ ಕಡೆಗೆ ಹೋಗುವುದು.
ಹೊಸೂರು ಸರ್ಕಲ್‍ದಿಂದ ವಿಜಯಪೂರ ರಸ್ತೆಗೆ ಸಂಚರಿಸುವ ಭಾರಿ ಗಾತ್ರದ ವಾಹನಗಳ ಮಾರ್ಗ- ಭಾರಿ ಗಾತ್ರದ ವಾಹನಗಳು ಹೊಸೂರು ಸರ್ಕಲ್, ಹಳೇ ಬಸ್ಟ್ಯಾಂಡ ಅಯೋದ್ಯ ಹೋಟಲ್ ಮುಂದೆ ಹಾಯ್ದು, ಚನ್ನಮ್ಮ ಸರ್ಕಲ್, ಸಂಗೋಳ್ಳಿ ರಾಯಣ್ಣ ಸರ್ಕಲ್, ಪಿಂಟೋ ಸರ್ಕಲ್ ಮುಖಾಂತರ ಗದಗ ರೋಡ ರಿಂಗ ರೋಡ ಮೂಲಕ ವಿಜಯಪೂರ ರಸ್ತೆಗೆ ಹೋಗುವುದು.
ನವಲಗುಂದ, ಬಿಜಾಪೂರ ಕಡೆಯಿಂದ ಹುಬ್ಬಳ್ಳಿಗೆ ಬರುವ ಬಸ್‍ಗಳು- ಸರ್ವೋದಯ ಸರ್ಕಲ್, ಕೆ.ಎಚ್.ಪಾಟೀಲ್ ರೋಡ, ಶೃಂಗಾರ ಹೋಟೆಲ್ ಕ್ರಾಸನಲ್ಲಿ ಎಡ ತಿರುವು ಪಡೆದುಕೊಂಡು ಮುಂದೆ ಗದಗ ರೋಡಗೆ ಬಂದು ಕೂಡುವುದು.
ಕೋರ್ಟ ಸರ್ಕಲ್ ಕಡೆಯಿಂದ ಚನ್ನಮ್ಮ ಸರ್ಕಲ್ ಕಡೆಗೆ ಬರುವ ವಾಹನಗಳು -ಸಂಗೊಳ್ಳಿ ರಾಯಣ್ಣ ಸರ್ಕಲ್‍ದಲ್ಲಿ ಎಡಕ್ಕೆ ತಿರುಗಿ ಚಿಟಗುಪ್ಪಿ ಸರ್ಕಲ್‍ನಲ್ಲಿ ಯು-ಟರ್ನ ಮಾಡಿಕೊಂಡು ಚನ್ನಮ್ಮ ಸರ್ಕಲ್ ಹತ್ತಿರ ಬರುವುದು.
ಸರ್ವೋದಯ ಸರ್ಕಲ್ ಕಡೆಯಿಂದ ಕಾರವಾರ ರೋಡ ಕಡೆಗೆ ಹೋಗುವ ವಾಹನಗಳು- ದೇಸಾಯಿ ಅಂಡರ್ ಬ್ರಿಡ್ಡ, ಬಾಳಿಗಾ ಕ್ರಾಸ್, ಉತ್ತರ ಸಂಚಾರ ಪೋಲೀಸ್ ಠಾಣೆ ಮುಂದೆ ಹಾಯ್ದು, ಗ್ಲಾಸ್ ಹೌಸ್ ರಸ್ತೆ ಮೂಲಕ ಕಾರವಾರ ರಸ್ತೆಗೆ ಕೂಡುವದು.
ನವಲಗುಂದ ಕಡೆಯಿಂದ ಮತ್ತು ಗದಗ ಕಡೆಯಿಂದ ಬರುವ ಭಾರಿ ಮತ್ತು ಸರಕು ವಾಹನಗಳು- ಹುಬ್ಬಳ್ಳಿ ನಗರವನ್ನು ಪ್ರವೇಶಿಸದೆ ರಿಂಗ ರೋಡ ಮುಖಾಂತರ ಬೆಂಗಳೂರು ಹಾಗೂ ಕಾರವಾರ ಕಡೆಗೆ ಹೋಗುವುದು.
ನವಲಗುಂದ ಕಡೆಯಿಂದ ಮತ್ತು ಗದಗ ಕಡೆಯಿಂದ ಬಂದು ಹುಬ್ಬಳ್ಳಿ ನಗರವನ್ನು ಪ್ರವೇಶಿಸುವ ಭಾರಿ ಮತ್ತು ಸರಕು ವಾಹನಗಳು- ರಿಂಗ ರೋಡ ಮುಖಾಂತರ ಗಟ್ಟೂರ ಸರ್ಕಲ್‍ಗೆ ಹೋಗಿ ಅಲ್ಲಿಂದ ಹಳೇ ಪಿಬಿ ರೋಡ ಅಥವಾ ಕಾರವಾರ ರಸ್ತೆ ಮೂಲಕ ಬರುವುದು.
ಸಾರ್ವಜನಿಕರ ಹಿತದೃಷ್ಟಿಯಿಂದ ಬದಲೀ ವಾಹನ ಸಂಚಾರ ವ್ಯವಸ್ಥೆಯನ್ನು ಮಾಡಲಾಗಿದ್ದು, ಸಾರ್ವಜನಿಕರು ಸಹಕರಿಸುವಂತೆ ಪ್ರಕಟಣೆ ತಿಳಿಸಿದೆ.




