ಹುಬ್ಬಳ್ಳಿ ( ಕರ್ನಾಟಕ ವಾರ್ತೆ) ಫೆ.7: ನಿರಂತರ ನೀರು ಸರಬರಾಜು ಯೋಜನೆಯಡಿಯಲ್ಲಿ ಹುಬಳ್ಳಿಯ ನೃಪತುಂಗ ಬೆಟ್ಟದಿಂದ ಅಶೋಕ ನಗರ ದೋಬಿಘಾಟವರೆಗೆ 864 ಎಂ.ಎಂ. ವ್ಯಾಸದ ಎಂ.ಎಸ್. ನೀರಿನ ಪೈಪ್ ಲೈನ್ ನ್ನು ಅಳವಡಿಸಿದ್ದು, ಈ ಮುಂಚೆ ಇದ್ದ 660 ಎಂ.ಎಂ. ವ್ಯಾಸದ ಪಿ.ಎಸ್.ಸಿ ನೀರಿನ ಪೈಪ್ ಲೈನಿನ ಸಂಪರ್ಕವನ್ನು ಕಡಿತಗೊಳಿಸಿ, 864 ಎಂ. ಎಂ. ವ್ಯಾಸದ ಪೈಪಲೈನಿಗೆ ಸಂಪರ್ಕ ಕಲ್ಪಿಸಬೇಕಾದ ಹಿನ್ನೆಲೆಯಲ್ಲಿ ಫೆಬ್ರವರಿ 8 ಮತ್ತು 9 ರಂದು ಹುಬ್ಬಳ್ಳಿ ನಗರದ ತಬೀಬ್ ಲ್ಯಾಂಡ್ ಹಾಗೂ ಮಂಟೂರ ರೋಡ್ ವ್ಯಾಪ್ತಿಯ ಪ್ರದೇಶಗಳ ಬಡಾವಣೆಗಳಲ್ಲಿ ನೀರು ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ.
ವಿಳಂಬವಾಗಿ ನೀರು ಪೂರೈಕೆ ಮಾಡುವುದರಿಂದ ಸಾರ್ವಜನಿಕರು ಸಹಕರಿಸಬೇಕೆಂದು ಕೆಯುಐಡಿಎಫಸಿ ಕುಸ್ಸೆಂಪ್ ಯೋಜನೆಯ ಅಧೀಕ್ಷಕ ಅಭಿಯಂತರರು ಪ್ರಕಟಣೆಯಲ್ಲಿ ಕೋರಿದ್ದಾರೆ.