ಬೆಂಗಳೂರು, ಫೆಬ್ರವರಿ 02 (ಕರ್ನಾಟಕ ವಾರ್ತೆ):
ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿಯು ವಿಜ್ಞಾನ ಪ್ರತಿಭಾನ್ವೇಷಣೆ ಕಾರ್ಯಕ್ರಮದಡಿ ಪದವಿ ಪೂರ್ವ ವಿದ್ಯಾರ್ಥಿಗಳು ಅಧ್ಯಯನಕ್ಕೆ (CET, NEET & Others) ಪೂರಕವಾಗುವಂತೆ ಭೌತ ವಿಜ್ಞಾನ, ರಸಾಯನ ವಿಜ್ಞಾನ, ಗಣಿತ ಮತ್ತು ಜೀವ ವಿಜ್ಞಾನ ವಿಷಯಗಳ ಪ್ರಶ್ನೋತ್ತರ ಹೊತ್ತಿಗೆಯನ್ನು ನುರಿತ ಸಂಪನ್ಮೂಲ ತಜ್ಞರ ಸಹಕಾರದೊಂದಿಗೆ ಹೊರತರಲಾಗಿದೆ.
ಪ್ರಶ್ನೋತ್ತರ ಹೊತ್ತಿಗೆಯನ್ನು ಅಕಾಡೆಮಿಯ ಜಾಲತಾಣದಿಂದ https://kstacademy.in/kn/sts-k/ ಡೌನ್ ಲೋಡ್ ಮಾಡಿಕೊಳ್ಳಬಹುದಾಗಿದೆ ಎಂದು ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.




