ಹುಬ್ಬಳ್ಳಿ (ಕರ್ನಾಟಕ ವಾರ್ತೆ)ಫೆ.01: ಸಮಾಜಕ್ಕೆ ಮಡಿವಾಳ ಮಾಚಿದೇವರ ಕೊಡುಗೆ ಅಪಾರವಾಗಿದೆ. ಮುಂದಿನ ಪೀಳಿಗೆಯ ಮಕ್ಕಳಿಗೆ ಅವರ ಕೊಡುಗೆಗಳ ಬಗ್ಗೆ ಅರಿವು ಮೂಡಿಸಬೇಕು. ಅವರ ವಚನಗಳ ಬಗ್ಗೆ ತಿಳಿಸುವ ಕಾರ್ಯಗಳಾಗಬೇಕು ಎಂದು ಶಾಸಕರಾದ ಮಹೇಶ ಟೆಂಗಿನಕಾಯಿ ಹೇಳಿದರು.

ಇಂದು ತಹಶೀಲ್ದಾರ ಕಾರ್ಯಾಲಯದಲ್ಲಿ ನಡೆದ ಶ್ರೀ ಮಡಿವಾಳ ಮಾಚಿದೇವರ ಜಯಂತಿ ಕಾರ್ಯಕ್ರಮವನ್ನುದ್ಧೇಶಿಸಿ ಅವರು ಮಾತನಾಡಿದರು.
ಬಸವಣ್ಣನವರ ಕಾಯಕವೇ ಕೈಲಾಸ ಎಂಬ ನಾಣ್ಣುಡಿಯಂತೆ ಕಾಯಕದ ಜೊತೆಗೆ ಸಮಾಜವನ್ನು ತಿದ್ದುವ ಕೆಲಸವನ್ನು ಅವರು ಮಾಡಿದರು. ವಚನ ಸಾಹಿತ್ಯಕ್ಕೆ ಕುತ್ತು ಬಂದಾಗ ಅವುಗಳನ್ನು ಸಂರಕ್ಷಿಸಿ, ಆಧುನಿಕ ಸಮಾಜಕ್ಕೆ ವಚನಗಳನ್ನು ನೀಡಿದ ಮಹಾನ್ ವ್ಯಕ್ತಿ ಮಡಿವಾಳ ಮಾಚಿದೇವರು. ಅವರು ಹಾಕಿ ಕೊಟ್ಟ ಹಾದಿಯಲ್ಲಿ ನಾವೆಲ್ಲರೂ ನಡೆಯೋಣ ಎಂದರು.
ಬಿ.ವಿ.ಮಡಿವಾಳರ ಮಾತನಾಡಿ, 12ನೇ ಶತಮಾನದ ಮಾಚಿ ತಂದೆ ಎಂದೇ ಪ್ರಸಿದ್ಧರಾದ ಮಡಿವಾಳ ಮಾಚಿದೇವರರು ತಮ್ಮ ವಚನಗಳಿಂದ ಜನತೆಗೆ ಮಾರ್ಗದರ್ಶನ ನೀಡಿದರು. ಹಲವಾರು ವಚನಕಾರರ ವಚನಗಳನ್ನು ಸಂಗ್ರಹಿಸಿ, ಜನರಿಗೆ ದೊರಕುವಂತೆ ಮಾಡಿದ ಕೀರ್ತಿ ಇವರಿಗೆ ಸಲ್ಲುತ್ತದೆ ಎಂದು ಉಪನ್ಯಾಸದಲ್ಲಿ ತಿಳಿಸಿದರು.
ಕಾರ್ಯಕ್ರಮದಲ್ಲಿ ಸಮಾಜದ ಹಿರಿಯರು ಮತ್ತು ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಇದೇ ಸಂದರ್ಭದಲ್ಲಿ ಮಡಿವಾಳ ಮಾಚಿದೇವರ ವಾರ್ಷಿಕ ಕ್ಯಾಲೆಂಡರ್ ಬಿಡುಗಡೆಗೊಳಿಸಲಾಯಿತು.
ಕಾರ್ಯಕ್ರಮದಲ್ಲಿ ಉಪ ತಹಶೀಲ್ದಾರರಾದ ಜಿ.ವಿ.ಪಾಟೀಲ್, ಪೆÇ್ರಬೇಷನರಿ ತಹಶೀಲ್ದಾರರಾದ ಅಕ್ಷತಾ, ದೀಪಾ, ಸಮಾಜದ ಮುಖಂಡರಾದ ರಂಗಸ್ವಾಮಿ ಬಳ್ಳಾರಿ, ಶಿವು ಮಡಿವಾಳ, ಗುರು ಬಳ್ಳಾರಿ, ಬಸವರಾಜ್ ಬಳಗಲಿ, ನವೀನ್, ಉದಯ್ ಬಳ್ಳಾರಿ, ವಿದ್ಯಾರ್ಥಿಗಳು, ವಿವಿಧ ಇಲಾಖೆಯ ಅಧಿಕಾರಿಗಳು, ಇತರರು ಉಪಸ್ಥಿತರಿದ್ದರು.