ಬೆಂಗಳೂರು, ಜನವರಿ 24 (ಕರ್ನಾಟಕ ವಾರ್ತೆ) :
ಅಸ್ಪೃಶ್ಯತೆ ನಿವಾರಣೆ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಸಲುವಾಗಿ “ಸಮಾನತೆಯ ಕಡೆಗೆ” ಕುರಿತ ಕನ್ನಡ ಚಲನಚಿತ್ರವನ್ನು ಸಮಾಜ ಕಲ್ಯಾಣ ಇಲಾಖೆಯ ವತಿಯಿಂದ ಪ್ರಾಯೋಜನೆ ಮಾಡಿ ಚಂದನ ವಾಹಿನಿಯಲ್ಲಿ ಜನವರಿ 26 ರ ಗಣರಾಜ್ಯೋತ್ಸವ ದಿನಾಚರಣೆಯ ದಿನದಂದು ಮಧ್ಯಾಹ್ನ 2.30 ರಿಂದ 4.30 ಗಂಟೆಯ ಅವಧಿಯಲ್ಲಿ ಚಂದನ ವಾಹಿನಿಯಲ್ಲಿ ಪ್ರಸಾರ ಮಾಡಲಾಗುತ್ತಿದ್ದು, ಸಾರ್ವಜನಿಕರು ಈ ಚಲನಚಿತ್ರವನ್ನು ವೀಕ್ಷಿಸಬಹುದು ಎಂದು ಸಮಾಜ ಕಲ್ಯಾಣ ಇಲಾಖೆಯು ಪ್ರಕಟಣೆಯಲ್ಲಿ ತಿಳಿಸಿದೆ.