ಬೆಂಗಳೂರು, ಜನವರಿ 09 (ಕರ್ನಾಟಕ ವಾರ್ತೆ):
ಬೆಂಗಳೂರಿನ ಕೆಂಭತ್ತಹಳ್ಳಿಯ ಶಿವಶಂಕರ್.ಎಲ್ ಅವರಿಗೆ ಹಂಪಿಯ ಕನ್ನಡ ವಿಶ್ವವಿದ್ಯಾಲಯವು ಪಿಎಚ್.ಡಿ ಪದವಿ ನೀಡಿದೆ.
ಬೆಂಗಳೂರಿನ ಸೇಂಟ್. ಜೋಸೆಫ್ ಕಾಲೇಜಿನ ಸಹ ಪ್ರಾಧ್ಯಾಪಕರಾದ ಡಾ.ಪೂರ್ಣಿಮಾ ಬಿ.ಎನ್. ಅವರ ಮಾರ್ಗದರ್ಶನದಲ್ಲಿ, ಕನ್ನಡ ಸಾಹಿತ್ಯ ಅಧ್ಯಯನ ವಿಭಾಗದ ಶಿವಶಂಕರ್.ಎಲ್ ಅವರು ಮಂಡಿಸಿದ “ಕನ್ನಡ ಚಿಂತನ ಸಾಹಿತ್ಯದಲ್ಲಿ ಪ್ರಭುತ್ವ ನಿರ್ವಚನದ ನೆಲೆಗಳು” ಮಹಾಪ್ರಬಂಧವು ಅತ್ಯುತ್ತಮ ಶ್ರೇಣಿಯೊಂದಿಗೆ ಪಿಎಚ್.ಡಿ ಗೆ ಭಾಜನವಾಗಿದೆ ಎಂದು ಕುಲಸಚಿವರಾದ ಡಾ.ವಿಜಯ್ ಪೂಣಚ್ಛ ತಂಬಂಡ ತಿಳಿಸಿದ್ದಾರೆ.
ಇದೇ ಜನವರಿ 10 ರಂದು ನಡೆಯಲಿರುವ ನುಡಿಹಬ್ಬದಲ್ಲಿ ಪಿಎಚ್.ಡಿ ಪದವಿ ಪ್ರಧಾನವಾಗಲಿದೆ.