ಬೆಂಗಳೂರು, ಜನವರಿ 02, (ಕರ್ನಾಟಕ ವಾರ್ತೆ):
ಕರ್ನಾಟಕ ಲೋಕಸೇವಾ ಆಯೋಗವು ಅಧಿಸೂಚಿಸಲಾದ ವಾಣಿಜ್ಯ ತೆರಿಗೆಗಳ ಇಲಾಖೆಯಲ್ಲಿ ವಾಣಿಜ್ಯ ತೆರಿಗೆ ಪರಿವೀಕ್ಷಕರ 15 (ಕಲ್ಯಾಣ ಕರ್ನಾಟಕ ವೃಂದದ) ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ, ಜನವರಿ 6 ಮತ್ತು 7 ರಂದು ರಾಜ್ಯದ ಆಯ್ದ ಜಿಲ್ಲೆಗಳಲ್ಲಿ ನಡೆಸಲಾಗುವ ಪರೀಕ್ಷೆಗೆ ಪ್ರವೇಶ ಪತ್ರವನ್ನು ಆಯೋಗದ ಜಾಲತಾಣ http://kpsc.kar.nic.in ನಲ್ಲಿ ಡಿಸೆಂಬರ್ 2 ರಿಂದ ಡೌನ್‍ಲೋಡ್ ಮಾಡಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ.
ಅಭ್ಯರ್ಥಿಗಳು ನೋಂದಣಿ ಮಾಡಿದ ಮೊಬೈಲ್ ನಂಬರ್, ಇ-ಮೇಲ್ ಐಡಿ ಅಥವಾ ಎನ್‍ರೋಲ್‍ಮೆಂಟ್ ನಂಬರ್, ಇವುಗಳಲ್ಲಿ ಯಾವುದಾದರೂ ಒಂದನ್ನು ನಮೂದಿಸಿ ಲಾಗಿನ್ ಮಾಡಿ ಡ್ಯಾಶ್ ಬೋರ್ಡ್ ಮೆನುನಲ್ಲಿ ಅಡ್‍ಮಿಟ್ ಕಾರ್ಡ್ ಓಪನ್ ಗೆ ಹೋಗಿ ಅಧಿಸೂಚನೆ ಕ್ಲಿಕ್ ಮಾಡಿ ಪ್ರವೇಶ ಪತ್ರವನ್ನು ಡೌನ್‍ಲೋಡ್ ಮಾಡಿಕೊಳ್ಳಬಹುದಾಗಿದೆ. ಪ್ರವೇಶ ಪತ್ರಗಳನ್ನು ಡೌನ್‍ಲೋಡ್ ಮಾಡಲು ತಾಂತ್ರಿಕ ಸಮಸ್ಯೆ ಎದುರಾದಲ್ಲಿ ಸಹಾಯವಾಣಿ ಸಂಖ್ಯೆ : 080-22200090 22346487, 30574901, 30574957 ನ್ನು ಸಂಪರ್ಕಿಸಬಹುದು ಅಥವಾ ctipending@gmail.com ಗೆ ಮೇಲ್ ಮಾಡಬಹುದು.
ಆಯೋಗದಿಂದ ಪ್ರಥಮ ಬಾರಿಗೆ ಕೆಪಿಎಸ್‍ಸಿ ಉದ್ಯೋಗ ಸಾಫ್ಟ್‍ವೇರ್ ನ್ನು ಅಭಿವೃದ್ಧಿಪಡಿಸಲಾಗಿದ್ದು, ಸದರಿ ಪರೀಕ್ಷೆಯು ಈ ತಂತ್ರಾಂಶದ ಮೂಲಕ ನಡೆಸಲಾಗುತ್ತಿರುವ ಪ್ರಥಮ ಪರೀಕ್ಷೆಯಾಗಿರುತ್ತದೆ. ಪ್ರವೇಶ ಪತ್ರದಲ್ಲಿ ಅಭ್ಯರ್ಥಿಗಳಿಗೆ ಪರೀಕ್ಷಾ ಕೇಂದ್ರ ಹಂಚಿಕೆ ಮಾಡುವ ವಿಷಯದಲ್ಲಿ ಹಾಗೂ ನಾಮಿನಲ್ ರೋಲ್‍ನಲ್ಲಿ ಭಾವಚಿತ್ರ, ಹೆಸರು ಮತ್ತು ಇನ್ನಿತರ ವಿಷಯಗಳಲ್ಲಿ ವ್ಯತ್ಯಾಸವಾಗಿರುವ ಸಂಭವವಿರುತ್ತದೆ, ಅಂತಹ ಯಾವುದಾದರೂ ವಿಷಯಗಳಿದ್ದಲ್ಲಿ, ಅವುಗಳನ್ನು ಆಯೋಗದ ಇ-ಮೇಲ್‍ಗೆ ctipending@gmail.com ಮೇಲ್ ಮಾಡುವಂತೆ ಹಾಗೂ ಅಭ್ಯರ್ಥಿಗಳು ಯಾವುದೇ ಗೊಂದಲ ಹಾಗೂ ಆತಂಕಕ್ಕೆ ಒಳಗಾಗದೆ ಪರೀಕ್ಷೆಗೆ ಹಾಜರಾಗುವಂತೆ ಕರ್ನಾಟಕ ಲೋಕ ಸೇವಾ ಆಯೋಗದ ಕಾರ್ಯದರ್ಶಿ ಕೆ.ಎಸ್.ಲತಾಕುಮಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.