ಹುಬ್ಬಳ್ಳಿ.27 – ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ (NCPCR)ದ ನಿರ್ದೇಶನದಂತೆ ಧಾರವಾಡ ಜಿಲ್ಲೆಯಲ್ಲಿ ಬಾಲಕಾರ್ಮಿಕ ಮತ್ತು ಕಿಶೋರಕಾರ್ಮಿಕರನ್ನು ರಕ್ಷಿಸಿ ಪುನರ್ವಸತಿಗೊಳಿಸಿ, ಶಿಕ್ಷಣ ಮುಂದುವರಿಕೆಗೆ ಅವಕಾಶ ಮಾಡಿಕೊಡುವ ಉದ್ದೇಶದಿಂದ ದಿನಾಂಕ 20-11-2023 ರಿಂದ ದಿನಾಂಕ 10-12-2023 ರವರೆಗೆ ರಕ್ಷಣಾ ಕಾರ್ಯಾಚರಣೆಯನ್ನು ಕಲಂ-17ರಡಿ ನೇಮಕಗೊಂಡ ಇತರೇ ಇಲಾಖೆಗಳ ಅಧಿಕಾರಿಗಳ ತಂಡದೊಂದಿಗೆ ನಡೆಸಲು ಸೂಚಿಸಿರುವಂತೆ, ದಿನಾಂಕ 27-11-2023 ರಂದು ಹುಬ್ಬಳ್ಳಿ ಶಹರದ ದುರ್ಗದಬೈಲ್, ಸಿಬಿಟಿ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕಾರ್ಯಾಚರಣೆಯನ್ನು ಕೈಗೊಳ್ಳಲಾಯಿತು.
ಶ್ರೀಮತಿ ಸಂಗೀತಾ ಬೆನಕನಕೊಪ್ಪ, ಹಿರಿಯ ಕಾರ್ಮಿಕ ನಿರೀಕ್ಷಕರು, 1ನೇ ವೃತ್ತ, ಹುಬ್ಬಳ್ಳಿ, ಶ್ರೀಮತಿ. ರಜನಿ ಹಿರೇಮಠ, ಹಿರಿಯ ಕಾರ್ಮಿಕ ನಿರೀಕ್ಷಕರು, 4ನೇ ವೃತ್ತ, ಹುಬ್ಬಳ್ಳಿ, ಶ್ರೀ. ಬಸವರಾಜ ಸಿ. ಪಂಚಾಕ್ಷರಿಮಠ, ಯೋಜನಾ ನಿರ್ದೇಶಕರು, ಜಿಲ್ಲಾ ಬಾಲಕಾರ್ಮಿಕ ಯೋಜನಾ ಸಂಘ, ಶ್ರೀ. ಕರಿಯಪ್ಪ ಕನಕೋರ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಶ್ರೀಮತಿ ರೇಣುಕಾ ಸುಣಗಾರ, ಮೇಲ್ವಿಚಾರಕಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಶ್ರೀಮತಿ ಶ್ವೇತಾ ಕಿಲ್ಲೇದಾರ, ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಸಿಬ್ಬಂದಿ, ಪೋಲಿಸ ಕಾನಸ್ಟೇಬಲ ಶ್ರೀ. ಎಚ್.ಡಿ. ಬಂಡಿವಡ್ಡರ ರವರು ಬಾಲಕಾರ್ಮಿಕ ಮತ್ತು ಕಿಶೋರಕಾರ್ಮಿಕರನ್ನು ರಕ್ಷಿಸಿ, ಪುನರ್ವಸತಿಗೊಳಿಸಲು ನಡೆಸಿರುವ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.
ತಪಾಸಣಾ ಸಮಯದಲ್ಲಿ 1 ಕಿಶೋರಕಾರ್ಮಿಕನನ್ನು ಪತ್ತೆಹಚ್ಚಿ ಪಾಲಕರ ವಶಕ್ಕೆ ಒಪ್ಪಿಸಲಾಯಿತು. ತಪಾಸಣಾ ಸಮಯದಲ್ಲಿ ಅಂಗಡಿ ಹಾಗೂ ವಾಣಿಜ್ಯ ಸಂಸ್ಥೆಗಳ ಮಾಲಿಕರಿಗೆ ಬಾಲಕಾರ್ಮಿಕ ಮತ್ತು ಕಿಶೋರಕಾರ್ಮಿಕ ಕಾಯ್ದೆ ಕುರಿತು ಕರಪತ್ರಗಳನ್ನು ವಿತರಿಸಲಾಯಿತು ಮತ್ತು ಸ್ಟೀಕರ್ಸಗಳನ್ನು ಅಂಟಿಸುವುದರ ಮೂಲಕ ಜಾಗೃತಿ ಮೂಡಿಸಲಾಯಿತು. ಎಂದು ಜಿಲ್ಲಾ ಕಾರ್ಮಿಕ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.