22.2 C
Karnataka
Friday, February 7, 2025
spot_img

ವಿದ್ಯಾರ್ಥಿಗಳು ಕಲಿಕೆಯ ಜೊತೆಗೆ ತಮ್ಮ ಅಭಿರುಚಿಗಳಿಗೆ ಸಮಯ ಕೊಟ್ಟು ಇತರೆ ಕೌಶಲ್ಯಗಳನ್ನು ಬೆಳೆಸಿಕೊಳ್ಳಬೇಕು – ಪ್ರೋ.ವಿಜಯ ಅಕ್ಕಿಹಾಳ

ಧಾರವಾಡ – 24. ಡಾ. ಡಿ.ಜಿ.ಶೆಟ್ಟಿ ಎಜ್ಯುಕೇಷನಲ್ ಸೊಸೈಟಿಯ ಆರ್.ಎಸ್.ಶೆಟ್ಟಿ ಕಾಲೇಜ ಆಫ್ ಕಾಮರ್ಸ್ ಹಾಗೂ ರುಕ್ಮಿಣಿ ಶೆಟ್ಟಿ ಮೆಮೊರಿಯಲ್ ಸುಧಾಕರ ಶೆಟ್ಟಿ ಬಿಸಿಎ ಕಾಲೇಜಿನಲ್ಲಿ 2023-24 ನೇ ಸಾಲಿನ ಪ್ರಥಮ ವರ್ಷದ ಬಿ.ಕಾಂ, ಬಿಸಿಎ ವಿದ್ಯಾರ್ಥಿಗಳಿಗೆ ಸ್ವಾಗತ ಹಾಗೂ ಪಠ್ಯ, ಸಾಂಸ್ಕೃತಿಕ ಹಾಗೂ ಕ್ರೀಡಾ ಚಟುವಟಿಕೆಗಳ ಉದ್ಘಾಟನಾ ಸಮಾರಂಭವನ್ನು ನೆರವೇರಿಸಲಾಯಿತು.
ಕಾರ್ಯಕ್ರಮದ ಉದ್ಘಾಟನೆಯನ್ನು ಮುಖ್ಯ ಅತಿಥಿಗಳಾಗಿ ಆಗಮಿಸಿದ ಧಾರವಾಡದ ಜಿ.ಎಸ್. ಅಕ್ಕಿಹಾಳ ಕಾಲೇಜಿನ ಪ್ರಾಂಶುಪಾಲರಾದ ಪ್ರೋ.ವಿಜಯ ಅಕ್ಕಿಹಾಳ ಅವರು ಮಾಡಿ, ಸಮಾರಂಭವನ್ನು ಉದ್ದೇಶಿಸಿ ವಿದ್ಯಾರ್ಥಿಗಳಿಗೆ ಕಲಿಕೆಯ ಜೊತೆಗೆ ತಮ್ಮ ಅಭಿರುಚಿಗಳಿಗೆ ಸಮಯ ಕೊಟ್ಟು ಇತರೆ ಕೌಶಲ್ಯಗಳನ್ನು ಬೆಳೆಸಿಕೊಳ್ಳಬೇಕು. ಅದರಲ್ಲೂ ಸಂವಹನ ಕೌಶಲ್ಯ ಮುಖ್ಯವಾದುದು ಇದು ಮುಂದಿನ ವೃತ್ತಿ ಜೀವನಕ್ಕೆ ಸಹಾಯಕವಾಗುತ್ತದೆ. ದಿನದ 1 ಗಂಟೆ ಸಮಯವನ್ನು ಸಂವಹನ ಕೌಶಲ್ಯಕ್ಕೆ ಮಿಸಲಿಡುವುದರಿಂದ ಉತ್ತಮ ವಾಗ್ಮಿಗಳಾಗಬಹುದು ಎಂದು ಹೇಳಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಪ್ರೋ.ರಶ್ಮಿ ಎಮ್ ಶೆಟ್ಟಿ ನಿರ್ದೇಶಕರು ಆರ್.ಎಸ್.ಶೆಟ್ಟಿ ಕಾಲೇಜ ಆಫ್ ಕಾಮರ್ಸ್ ಇವರು ವಿದ್ಯಾರ್ಥಿಗಳು ಶಿಸ್ತಿನ ಜೀವನ ಅಳವಡಿಸಿಕೊಂಡು ಕಾಲೇಜಿಗೆ ಕೀರ್ತಿ ತಂದು ಕಾಲೇಜು ಹಾಗೂ ಪಾಲಕರಿಗೆ ಒಳ್ಳೆ ಹೆಸರು ತರುವಂತೆ ವರ್ತಿಸಬೇಕು ಎಂದು ಹೇಳಿದರು.
ಕಾಲೇಜಿನ ಉಪಪ್ರಾಂಶುಪಾಲರಾದ ಡಾ.ಎಸ್.ಎಮ್ ಸಾಲಿಮಠ ಇವರು ಮಾತನಾಡಿ ವಿದ್ಯಾರ್ಥಿಗಳು ಇದು ಒಂದು ಸುಸಮಯ ದೇಶಕ್ಕೆ ಒಂದು ಪ್ರಬಲ ನಾಯಕತ್ವ ಇದ್ದು. ಭಾರತವು ಮುಂದುವರೆಯುತ್ತಿರುವ ರಾಷ್ಟ್ರವಾಗುತ್ತಿದೆ ಈ ಸಮಯದಲ್ಲಿ ವಿದ್ಯಾರ್ಥಿಗಳಿಗೆ ಒಳ್ಳೆಯ ಉದ್ಯೋಗಾವಕಾಶಗಳು ಸೃಷ್ಟಿಯಾಗುತ್ತಿವೆ. ಈ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳಬೆಕೇಂದರೆ ವಿದ್ಯಾರ್ಥಿಗಳು ಉತ್ತಮ ಫಲಿತಾಂಶವನ್ನು ಪಡೆಯುವುದರ ಕಡೆಗೆ ಗಮನ ಹರಿಸಬೇಕೆಂದು ಹೇಳಿದರು.
ಸಂಸ್ಥೆಯ ಅಧ್ಯಕ್ಷರಾದ ಡಾ. ಡಿ.ಜಿ.ಶೆಟ್ಟಿಯವರು ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ವಿದ್ಯಾರ್ಥಿಗಳು ಇತ್ತಿಚೀನ ದಿನಗಳಲ್ಲಿ ಕಷ್ಟ ಪಟ್ಟು ಒದುವುದರ ಜೊತೆಗೆ ಬುದ್ದಿವಂತಿಕೆಯಿಂದ ಚುರುಕಾಗಿ ಕೆಲಸ ಮಾಡುವುದರಿಂದ ಯಶಸ್ಸು ಸಾಧಿಸಬಹುದು ಹಾಗೂ ಜೀವನದಲ್ಲಿ ಶಿಸ್ತನ್ನು ಅಳವಡಿಸಿಕೊಳ್ಳುವುದರಿಂದ ಒಳ್ಳೆಯ ಜೀವನವನ್ನು ಪಡೆಯಬಹುದು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಪ್ರೋ.ಎಸ್.ಎನ್.ಗುಡಿ ಇವರು ಅತಿಥಿಗಳ ಪರಿಚಯ ಮಾಡಿ ಸ್ವಾಗತಿಸಿದರು ವಿದ್ಯಾರ್ಥಿಗಳಾದ ಭರತ ಛಲವಾದಿ ಹಾಗೂ ಸ್ವಪ್ನಾ ಕಾರ್ಯಕ್ರಮ ನಿರೂಪಣೆ ಮಾಡಿದರು ಮತ್ತು ಪವನ ಕರಡಿ ವಂದಿಸಿದರು.ಎಲ್ಲಾ ಸಿಬ್ಬಂದಿವರ್ಗ, ವಿದ್ಯಾರ್ಥಿಗಳು ಉಪಸ್ಥಿತರಿದ್ದರು ಎಂದು ಅಧ್ಯಕ್ಷರಾದ ಡಾ. ಡಿ.ಜಿ.ಶೆಟ್ಟಿಯವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Don’t miss your news!

We don’t spam! Read our privacy policy for more info.

Don’t miss your news!

We don’t spam! Read our privacy policy for more info.

Don’t miss your news!

We don’t spam! Read our privacy policy for more info.

Don’t miss your news!

We don’t spam! Read our privacy policy for more info.

Related Articles

Stay Connected

0FansLike
3,912FollowersFollow
0SubscribersSubscribe
- Advertisement -spot_img

Latest Articles

error: Content is protected !!