ಬೆಂಗಳೂರು, ನವೆಂಬರ್ 22 (ಕರ್ನಾಟಕ ವಾರ್ತೆ) :
ಕಾಡು ಅಂಚಿನಲ್ಲಿ ವಾಸಿಸುತ್ತಿರುವ ಬುಡಕಟ್ಟು ಯರವ ಜನಾಂಗದವರಿಗೆ ಮೂಲಭೂತ ಸೌಲಭ್ಯಗಳಾದ ನೀರು, ವಿದ್ಯುತ್, ವಸತಿ ಸೇರಿದಂತೆ ಇನ್ನಿತರ ಸೌಕರ್ಯಗಳನ್ನು ಬಗೆಹರಿಸುವಂತೆ ಮುಖ್ಯಮಂತ್ರಿಗಳಿಗೆ ಇಂದು ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಎ.ಎಸ್.ಪೊನ್ನಣ್ಣ ಅವರ ನೇತೃತ್ವದಲ್ಲಿ ಬುಡಕಟ್ಟು ಯರವ ಜನಾಂಗದ ನಿಯೋಗ ಮನವಿ ಸಲ್ಲಿಸಿದರು.
ಎ.ಎಸ್.ಪೊನ್ನಣ್ಣ ಅವರನ್ನು ಒಳಗೊಂಡಂತೆ ಸಮಾಜ ಕಲ್ಯಾಣ ಇಲಾಖೆ, ಬೆಸ್ಕಾಂ, ಅರಣ್ಯ ಇಲಾಖೆ, ಆರ್ಥಿಕ ಇಲಾಖೆ, ಅಧಿಕಾರಿಗಳೊಂದಿಗೆ ಕುಂದು-ಕೊರತೆ ಸಭೆ ಕರೆಯಲು ಮುಖ್ಯಮಂತ್ರಿಗಳು ಸೂಚಿಸಿದರು.