Site icon MOODANA Web Edition

ಸುಬ್ರಹ್ಮಣ್ಯ ಜಿ. ಎಮ್.ಗೆ ಪಿಎಚ್‌‌ಡಿ ಪದವಿ ಪ್ರದಾನ

ಹುಬ್ಬಳ್ಳಿ ಮಾ.20: ಮಂಗಳೂರಿನ ಮುಕ್ಕದಲ್ಲಿರುವ ಶ್ರೀನಿವಾಸ ವಿಶ್ವವಿದ್ಯಾಲಯದ ಸಂಸ್ಕೃತ ವಿಭಾಗದಲ್ಲಿ ಅಧ್ಯಯನ ಮಾಡಿದ ಸುಬ್ರಹ್ಮಣ್ಯ ಜಿ. ಎಮ್. ಅವರು “मोहनदास करमचन्दगान्धिमहाभागस्य अद्वैततत्त्वचिन्तनानां विश्लेषणात्मकम् अध्ययनम्” (“An Analytical Study of Advaita Thoughts of Mohandas Karamchand Gandhi”) ಎಂಬ ಮಹಾಪ್ರಬಂಧವನ್ನು ಮಾರ್ಚ್ 9 ರಂದು ಮಂಡಿಸಿ ‘ಡಾಕ್ಟರ್ ಆಫ್ ಫಿಲಾಸಫಿ’ (ಪಿ.ಎಚ್.ಡಿ) ಪದವಿಗೆ ಭಾಜನರಾಗಿದ್ದಾರೆ.

ಡಾ. ಸೋಂದ ಭಾಸ್ಕರ ವಿ. ಭಟ್ ಅವರು ಮಾರ್ಗದರ್ಶನ ಮಾಡಿದ್ದರು.‌ ಸಾಗರ ತಾಲೂಕಿನ ಗಾಡಿಗೆರೆ ಗ್ರಾಮದ ಮಹಾಬಲಗಿರಿ ಹಾಗೂ ಶಾಂತಲಾ ದಂಪತಿಯ ಪ್ರಥಮ ಪುತ್ರರಾದ ಸುಬ್ರಹ್ಮಣ್ಯ ಜಿ. ಎಮ್. ಅವರು ತಮ್ಮ ಅಚಲ ಪರಿಶ್ರಮ, ಅಧ್ಯಯನ ನಿಷ್ಠೆ ಮತ್ತು ಸಂಸ್ಕೃತ ಸಾಹಿತ್ಯದ ಮೇಲಿನ ಅಪಾರ ಆಸಕ್ತಿಯಿಂದ ವಿದ್ಯಾಭ್ಯಾಸದ ಉನ್ನತ ಶಿಖರವನ್ನು ಏರಿದ್ದಾರೆ. ಸಂಸ್ಕೃತ ಹಾಗೂ ಸಂಸ್ಕೃತಿಯ ಸೇವೆಯಲ್ಲಿ ಸದಾ ನಿರತವಾಗಿರುವ ‘ಗೀರ್ವಾಣ ಭಾರತೀ ಟ್ರಸ್ಟ್’ನ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸುತ್ತಿರುವ ಇವರು, ತಮ್ಮ ಕೇವಲ ೩೧ನೇ ವಯಸ್ಸಿನಲ್ಲಿಯೇ ಜ್ಞಾನಪಥದಲ್ಲಿ ಇಂತಹ ಪ್ರಭಾವಶಾಲಿ ಹೆಜ್ಜೆ ಇಟ್ಟಿರುವುದು ಅತ್ಯಂತ ಶ್ಲಾಘನೀಯವಾಗಿದೆ.
ಡಾ. ಸುಬ್ರಹ್ಮಣ್ಯ ಜಿ. ಎಮ್. ಅವರಿಗೆ ಗೀರ್ವಾಣಭಾರತೀ ಟ್ರಸ್ಟ್‌ನ ಕಾರ್ಯದರ್ಶಿಗಳಾದ ಗೌತಮ ಎಮ್. ಎ. ಹಾಗೂ ಸರ್ವ ನಿರ್ದೇಶಕರು ಅಭಿನಂದನೆಗಳನ್ನು ತಿಳಿಸಿದ್ದಾರೆ.

Exit mobile version