Site icon MOODANA Web Edition

ಮಾ.23 ಮತ್ತು 24 ರಂದು “ಭಾರತೀಯ ಜ್ಞಾನ ಪರಂಪರೆ” ಎರಡು ದಿನಗಳ ರಾಷ್ಟ್ರೀಯ ಸಮ್ಮೇಳನ

ಹುಬ್ಬಳ್ಳಿ ಮಾ.20: ಕೇಂದ್ರ ಸರ್ಕಾರದ ಪಿಎಂ ಉಷಾ ಯೋಜನೆ, ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡ ಹಾಗೂ ಸ್ನಾತಕೋತ್ತರ ಸಂಸ್ಕೃತ ಅಧ್ಯಯನ ವಿಭಾಗ ವತಿಯಿಂದ “ಭಾರತೀಯ ಜ್ಞಾನ ಪರಂಪರೆ” ಎಂಬ ವಿಷಯದ ಕುರಿತು ರಾಷ್ಟ್ರೀಯ ಸಮೇಳನವನ್ನು ಮಾರ್ಚ 23 ಮತ್ತು 24 ರಂದು ಕರ್ನಾಟಕ ವಿಶ್ವವಿದ್ಯಾಲಯದ ಆವರಣದಲ್ಲಿರುವ ಪ್ರಾದೇಶಿಕ ವಿಜ್ಞಾನ ಕೇಂದ್ರದಲ್ಲಿ ಹಮ್ಮಿಕೊಳ್ಳಲಾಗಿದೆ.

ದೇಶದ ವಿವಿಧ ಭಾಗಗಳಿಂದ ಸಂಸ್ಕೃತ ವಿದ್ವಾಂಸರು, ಬೇರೆ ಬೇರೆ ಶಾಖೆಯ ಅನೇಕ ಸಂಪನ್ಮೂಲ ವ್ಯಕ್ತಿಗಳು ಆಗಮಿಸಲಿದ್ದು, ಬಹುಶಿಸ್ತೀಯ ವಿಷಯಗಳನ್ನು ಮಂಡಿಸಲಿದ್ದಾರೆ. ಆಸಕ್ತರು ನೋಂದಣಿ ಮಾಡಿಸುವ ಮೂಲಕ ಸಂಶೋಧನ ಲೇಖನಗಳನ್ನು ಕಳುಹಿಸಬಹುದು.
ಹೆಚ್ಚಿನ ಮಾಹಿತಿಗೆ ಡಾ.ಪದ್ಮಾವತಿ ಎಂ (+919035919598), ಡಾ.ರಜನಿ ಎಚ್ (+919986511844), ಡಾ.ಪ್ರಮೋದ ಚಂದಿ (+917676619341) ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.

Exit mobile version