ಹುಬ್ಬಳ್ಳಿ. 25. ಇಂದು ನವನಗರದ ಶ್ರೀ ಸ್ವಾಮಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆ, ಬೈರಿದೇವರಕೊಪ್ಪ ದಲ್ಲಿ ನೂತನ ಕಟ್ಟಡ ಉದ್ಘಾಟನೆ ಸಮಾರಂಭ ಮತ್ತು ವಾರ್ಷಿಕ ಸ್ನೇಹ ಸಮ್ಮೇಳನವನ್ನು ಬ್ರಹ್ಮಕುಮಾರಿಯ Dr. ಬಿ.ಕೆ ಬಸವರಾಜ್ ರಾಜಋಷಿ ಅವರು ನಡೆಸಿಕೊಟ್ಟು ಮಕ್ಕಳಿಗೆ ಗುರುಕುಲ ಶಿಕ್ಷಣದ ರೀತಿಯಲ್ಲಿ ಮೌಲ್ಯಯುತವಾದ ಶಿಕ್ಷಣವನ್ನು ನೀಡುತ್ತಿರುವ ಸಂಸ್ಥೆಯೊಂದು ಇದು ಎಂದು ಹೇಳಿದರು. ವಿಶೇಷ ಅತಿಥಿಗಳಾದಂತಹ ಗಂಗಾವತಿ ಪ್ರಾಣೇಶ್ ಅವರು ಪಾಲಕರಿಗೆ ಒಂದು ವಿಶೇಷ ಸಂದೇಶನವಾಗಿರುವಂತಹ ಮೊಬೈಲ್ ಅನ್ನು ಬಿಡಿಸಿ ಪುಸ್ತಕವನ್ನು ಕೊಡಿ ಎನ್ನುವಂತಹ ಮಾತನ್ನು ಹೇಳಿದರು .ಇನ್ನೋರ್ವ ಅತಿಥಿಗಳಾಗಿರುವಂತಹ ಎಸ್ ವಿ ಎಸ್ ಪ್ರಸಾದ್ ಸರ್ ಅವರು ನೈತಿಕ ಶಿಕ್ಷಣಕ್ಕೆ ಹೆಚ್ಚಿನ ಪ್ರಾಧಾನ್ಯತೆಯನ್ನು ನೀಡಿ ಅದರ ಜೊತೆಗೆ ನಾವು ಉತ್ತಮವಾದಂತಹ ವಿಶೇಷವಾಗಿ ಇರುವಂತಹ ಈ ಶಾಲೆಯಿಂದ ಇನ್ನೊಬ್ಬ ಸ್ವಾಮಿ ವಿವೇಕಾನಂದರನ್ನು ಹೊರ ತರಬಹುದು ಎನ್ನುವಂತಹ ಮಾತನ್ನು ಹೇಳಿದರು. ಶಾಲೆಯ ಚೇರ್ಮನರಾದಂತಹ ಎಂ .ಜಗನ್ ಮೋಹನ್ ರಾವ್ ಅವರು ಎಲ್ಲಾ ಅತಿಥಿ ಮೊಹೋದಯರನ್ನು ಸ್ವಾಗತಿಸಿ ಸಮಾಜಕ್ಕೆ ಉತ್ತಮ ಪ್ರಜೆಯನ್ನು ನಿರ್ಮಿಸುವಲ್ಲಿ ನನ್ನದೊಂದು ಅಳಿಲು ಸೇವೆ ಎಂದು ಹೇಳಿದರು. ಶಾಲೆಯ ಪ್ರಾಂಶುಪಾಲರಾದಂತಹ ಶ್ರೀಮತಿ ಶರ್ಮಿಳಾ S ಹೊಸೂರ್ ಅವರು ಮಕ್ಕಳಿಗಾಗಿ ಆಸ್ತಿಯನ್ನು ಮಾಡಬೇಡಿ ಮಕ್ಕಳನ್ನೇ ಆಸ್ತಿಯನ್ನಾಗಿ ಮಾಡಿ ಎನ್ನುವಂತಹ ವಿಶೇಷವಾದ ಸಂದೇಶವನ್ನು ನೀಡಿವುದರೊಂದಿಗೆ ಬಂದಂತಹ ಎಲ್ಲಾ ಅತಿಥಿ ಮಹೋದಯರಿಗೆ ವಂದನಾರ್ಪಣೆಯನ್ನು ಮಾಡಿದರು. ಈ ಕಾರ್ಯಕ್ರಮದಲ್ಲಿ ಶಾಲೆಯ ಸುತ್ತಮುತ್ತಲಿರುವಂತಹ ಎಲ್ಲಾ ನಿವಾಸಿಗಳ ಆದಂತಹ ಬೈರಿದೇವರಕೊಪ್ಪದ ಶಿವ ಪಾರ್ವತಿ ನಗರ ರಾಧಿಕಾ ಪಾರ್ಕ್ ಶಿವಶಂಕರ್ ಪಾರ್ಕ್, ಸಂಗೊಳ್ಳಿ ರಾಯಣ್ಣ ನಗರ ಮತ್ತು ಶಾಲಾ ಮಕ್ಕಳು ಶಿಕ್ಷಕ ವೃಂದ ಎಲ್ಲಾ ಸಿಬ್ಬಂದಿ ವರ್ಗದವರು ತಮ್ಮ ಪಾತ್ರವನ್ನು ವಹಿಸಿ ಈ ಕಾರ್ಯಕ್ರಮಕ್ಕೆ ಶೋಭೆಯನ್ನು ತಂದರು. ಕಾರ್ಯಕ್ರಮವನ್ನು RJ ರಶೀದ್ ಅವರು ನಿರೂಪಿಸಿದರು.