ಹುಬ್ಬಳ್ಳಿ . 25 – ಹುಬ್ಬಳ್ಳಿ ಫೋಟೋ ಹಾಗು ವಿಡಿಯೋ ಗ್ರಾಫರ್ ಅಸೋಸಿಯೇಷನ್ ಇವರ ವತಿಯಿಂದ ಕ್ರಿಕೆಟ್ ಫೆಸ್ಟ್ ಸ್ವರ್ಣ ಕಪ್ ಅಂತರ್ ವಲಯ ಮಟ್ಟದ ಟೆನಿಸ್ ಬಾಲ್ ಕ್ರಿಕೆಟ್ ಟೂರ್ನಮೆಂಟ್ ಆಯೋಜಿಸಲಾಗಿದೆ.
ಇದೇ ದಿನಾಂಕ 26 ಹಾಗೂ 27 ಮಾರ್ಚ್ ರಂದು ನೆಹರು ಕ್ರೀಡಾಂಗಣದಲ್ಲಿ ಅಂತರ್ ವಲಯ ಮಟ್ಟದ ಟೆನ್ನಿಸ್ ಬಾಲ್ ಕ್ರಿಕೆಟ್ ಟೂರ್ನಮೆಂಟ್ ಹಮ್ಮಿಕೊಂಡಿದ್ದು ದಿನಾಂಕ 26ರಂದು ಮುಂಜಾನೆ ಕ್ರಿಕೆಟ್ ಪಂದ್ಯಾವಳಿಯನ್ನು ಸ್ವರ್ಣ ಕಂಪನಿಯ ಚೇರ್ಮನ್ ರಾದ ವಿ ಎಸ್ ವಿ ಪ್ರಸಾದ ಇವರು ಉದ್ಘಾಟನೆಯನ್ನು ಮಾಡುವರು. ಮುಖ್ಯ ಅತಿಥಿಗಳಾಗಿ ಹುಬ್ಬಳ್ಳಿ ಧಾರವಾಡ ಪೊಲೀಸ್ ಕಮಿಷನರ್ ಆದ ಶ್ರೀಮತಿ ರೇಣುಕಾ ಸುಕುಮಾರ ಹಾಗೂ ವಿಶೇಷ ಅತಿಥಿಗಳಾಗಿ ಸಮಾಜ ಸೇವಕರಾದ ಶ್ರೀಯುತ ವೆಂಕಟೇಶ್ ಕಾಟ್ವೆ ಇವರು ಆಗಮಿಸುವರು ಹಾಗೂ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷರಾದ ಕಿರಣ್ ಬಾಕಳೆ ವಹಿಸುವರು. ದಿನಾಂಕ 27ರಂದು ಸಮಾರೋಪ ಸಮಾರಂಭದಲ್ಲಿ ಬಹುಮಾನ ವಿತರಣೆಯನ್ನು ಆಯೋಜಿಸಲಾಗಿದ್ದು ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಧಾರವಾಡ ಜಿಲ್ಲಾಧಿಕಾರಿಗಳಾದ ಶ್ರೀಮತಿ ದಿವ್ಯ ಪ್ರಭು ಇವರು ಭಾಗವಹಿಸುವರು ಹಾಗೂ ವಿಶೇಷ ಅತಿಥಿಗಳಾಗಿ ಡಾಕ್ಟರ್ ವಿ ಎಸ್ ಪಿ ಪ್ರಸಾದ್ ಸ್ವರ್ಣ ಕಂಪನಿ ಚೇರ್ಮನ್ ಹಾಗೂ ಇನ್ನೋರ್ವ ಅತಿಥಿಗಳಾಗಿ ವೆಂಕಟೇಶ್ ಕಾಟ್ವೆ ವಿ ಎ ಕೆ ಫೌಂಡೇಶನ್ ಅಧ್ಯಕ್ಷರು ಹಾಗೂ ಸಂಘದ ಅಧ್ಯಕ್ಷರಾದ ಕಿರಣ್ ಬಾಕಳೆ ಹಾಗೂ ಉಪಾಧ್ಯಕ್ಷರಾದ ದಿನೇಶ್ ದಾಬ್ಡೆ, ಕಾರ್ಯದರ್ಶಿ ರವೀಂದ್ರ ಕಾಟಿಗರ್ ಹಾಗೂ ಖಜಾಂಚಿಯಾದ ಅನಿಲ್ ತುರುಮರಿ ಸಂಘದ ಪದಾಧಿಕಾರಿಗಳು ಉಪಸ್ಥಿತರಿರುವರು. ಸಂಘದ ಸದಸ್ಯರಿಗೆ ಇಂತಹ ಚಟುವಟಿಕೆಯಿಂದ ಆರೋಗ್ಯಕರ ವಾತಾವರಣ ಮೂಡಲಿದ್ದು ಒಟ್ಟು ಆರು ತಂಡಗಳಿದ್ದು ಮೊದಲನೆಯ ಬಹುಮಾನ 21,001 ಹಾಗೂ ಆಕರ್ಷಕ ಟ್ರೋಫಿ, ಎರಡನೆಯ ಬಹುಮಾನ 11001 ಹಾಗೂ ಆಕರ್ಷಕ ಟ್ರೋಫಿ ನೀಡಲಾಗುವುದು ಎಂದು ಸಂಘದ ಕಾರ್ಯದರ್ಶಿಯಾದ ರವೀಂದ್ರ ಕಾಟಿಗರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕ್ರಿಕೆಟ್ ಫೆಸ್ಟ್ ಸ್ವರ್ಣ ಕಪ್ ಅಂತರ್ ವಲಯ ಮಟ್ಟದ ಟೆನಿಸ್ ಬಾಲ್ ಕ್ರಿಕೆಟ್ ಟೂರ್ನಾಮೆಂಟ್
