24.9 C
Karnataka
Wednesday, February 5, 2025
spot_img

ಪ್ರಶ್ನೆಗಳಿಲ್ಲದ ವರ್ಗ ನಿರ್ಜೀವದಂತೆ : ಪ್ರೊ. ಮೋಹನ ಸಿದ್ಧಾಂತಿ

ಹುಬ್ಬಳ್ಳಿ: ಶಿಕ್ಷಕರು ಯಾವತ್ತು ತಪ್ಪು ಮಾಡಬಾರದು, ಜಗತ್ತಿನಲ್ಲಿ ಯಾರೇ ತಪ್ಪು ಮಾಡಿದರು ಏನೂ ಅನ್ನದ ಜಗತ್ತು, ಶಿಕ್ಷಕರು ತಪ್ಪು ಮಾಡಿದರೆ ಕೈ ಮಾಡಿ ತೋರಿಸುತ್ತದೆ. ಶಿಕ್ಷಕರಿಗೆ ಹೇಳಿದರೆ ಕರ್ತವ್ಯ ಬರದು, ಅದನ್ನು ಪಾಲಿಸಬೇಕು, ಕರ್ತವ್ಯ ಮಾಡಲಾಗದ ಶಿಕ್ಷಕರು ಶಿಕ್ಷಕ ವೃತ್ತಿ ಬಿಟ್ಟು ಬಿಡಬೇಕು ಎಂದು ಮಾರ್ಮಿಕವಾಗಿ ಹೇಳಿದರು.
ನಗರದ ಕನಕದಾಸ ಶಿಕ್ಷಣ ಮಹಾವಿದ್ಯಾಲಯದ ಬಿ.ಇಡಿ ಸಭಾಂಗಣದಲ್ಲಿ ಕೆ.ಆರ್.ಎಂ.ಎಸ್‍.ಎಸ್ ಮತ್ತು ಎ.ಬಿ.ಆರ್.ಎಸ್‍.ಎಂ ವತಿಯಿಂದ ಶನಿವಾರ ಶಿಕ್ಷಕರಿಗೆ ಹಮ್ಮಿಕೊಳ್ಳಲಾಗಿದ್ದ ಕಾಯಕ ಸಂಕಲ್ಪ ದಿನ ಕಾರ್ಯಕ್ರಮದಲ್ಲಿ ಮುಖ್ಯ ಅಥಿತಿಗಳಾಗಿ ಅವರು ಮಾತನಾಡಿದರು.
ಪ್ರಶ್ನೆಗಳಿಲ್ಲದ ವರ್ಗ ನಿರ್ಜೀವದಂತೆ ಹಾಗಾಗಿ ಮಕ್ಕಳು ಪ್ರಶ್ನೆ ಕೇಳಿದಾಗ ಗದರಿಸದೆ ಸೂಕ್ತ ಉಧಾಹರಣೆಗಳೊಂದಿಗೆ ಸಮಾಧಾನವಾಗಿ ಉತ್ತರಿಸಬೇಕು. ಶಿಕ್ಷಕರ ಕೈಯಲ್ಲಿ ಅಧಿಕಾರ ಬಂದಾಗ ಅದು ಮತ್ತೊಬ್ಬರಿಗೆ ಉಪಯೋಗಕಾರಿಯಾಗಬೇಕು, ನಾಲ್ಕು ಗೋಡೆಯ ಮಧ್ಯದಲ್ಲಿ ರೂಪಿತವಾಗುವ ವಿದ್ಯಾರ್ಥಿಗಳ ಜೀವನ ರೂಪಿಸುವಲ್ಲಿ ಶಿಕ್ಷಕರ ಪಾತ್ರ ಬಹಳ ಪ್ರಮುಖವಾಗಿದ್ದು, ಶಿಕ್ಷಕನಿಗೆ ಸಮಯದ ಜಾಗೃತಿ ಅವಶ್ಯವಾಗಿ ಬರಬೇಕು ಅದು ಬಂದರೆ ಅವರ ವ್ಯಕ್ತಿತ್ವ ಬದಲಾಗುತ್ತದೆ. ಒಳ್ಳೆ ಗುಣಗಳಿಂದ ಒಳ್ಳೆ ದಿನಗಳು ಬರಬೇಕಾರದೆ ಆಸಕ್ತಿಯಿಂದ ಶಿಕ್ಷಕ ವೃತ್ತಿಗೆ ಬರಬೇಕು, ಹಣ ಬಯಸಿ ಈ ವೃತ್ತಿಗೆ ಬರಬಾರದು ಎಂದು ಹೇಳಿದರು.
ಶಿಕ್ಷಕರು ವಿದ್ಯಾರ್ಥಿಗಳನ್ನು ಸಂಸ್ಕಾರವಂತರನ್ನಾಗಿಸಬೇಕು, ಕಾಲ ಬದಲಾದಂತೆ ಶಿಕ್ಷಕರು ಬದಲಾಗಬೇಕು. ತರಗತಿಗೆ ಹೊರಡುವ ಮುನ್ನ ಸಕಲ ಸಿದ್ಧತೆಗಳೊಂದಿಗೆ ಶಿಕ್ಷಕ ತಯಾರಾಗಿರಬೇಕು, ಗ್ರಂಥಾಲಯಗಳು ಪುಸ್ತಕಗಳಿಂದ ತುಂಬಿ ತುಳುಕುತ್ತಿವೆ. ಆದರೆ ಓದುವ ಶಿಕ್ಷಕ ಮತ್ತು ವಿದ್ಯಾರ್ಥಿ ಮನಸ್ಸುಗಳ ಕೊರತೆ ಎದ್ದು ಕಾಣುತ್ತಿದೆ ಎಂದು ವಿಷಾಧ ವ್ಯಕ್ತಪಡಿಸಿದರು.
ಶಿಕ್ಷಕರು ಹೇಳಿದ್ದೇ ಸರ್ವಸ್ವ ಎಂಬ ಕಾಲವಿತ್ತು? ಆದರೆ ಈಗ ವಿದ್ಯಾರ್ಥಿಗಳು ಗೂಗಲ್ ಜಗತ್ತಿನಲ್ಲಿದ್ದಾರೆ. ಹಾಗಾಗಿ ಶಿಕ್ಷಕರಿಗೆ ಪಾಂಡಿತ್ಯ, ಅಧ್ಯಾಪನ, ಬೋಧನಾ ಸಾಮಥ್ರ್ಯ, ಪ್ರೇರಣಾ ಸಾಮಥ್ರ್ಯ, ಮತ್ತು ನಡೆ ನುಡಿಗಳನ್ನು ಚೆನ್ನಾಗಿಟ್ಟುಕೊಳ್ಳಬೇಕು ಏಕೆಂದರೆ ವಿದ್ಯಾರ್ಥಿಗಳು ನಮ್ಮನ್ನು ಅವಲೋಕಿಸುತ್ತಿರುತ್ತಾರೆ ಹಾಗಾಗಿ ಶಿಕ್ಷಕರ ಮೌಲ್ಯಗಳು ವೃದ್ಧಿಯಾಗಬೇಕೆ ಹೊರತು ಪಠ್ಯ ಬೋಧನೆ ಮುಗಿಯಿತೆಂದು ಕೈ ಚೆಲ್ಲಿ ಕೂಡಬಾರದು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿದ್ಧ ಎಬಿ.ಆರ್‍ಎಸ್.ಎಂ ನ ದಕ್ಷಿಣ ಮಧ್ಯ ಕ್ಷೇತ್ರಿಯ ಪ್ರಮುಖರಾದ ಡಾ. ರಘು ಅಕಮಂಚಿ ಮಾತನಾಡಿ, ಪ್ರತಿ ಶಿಕ್ಷಕರು ಶಿಕ್ಷಕರಿಂದ ಗುರು ಆಗುವತ್ತ ಹೆಜ್ಜೆ ಹಾಕಬೇಕು ಎಂದು ಹೇಳಿದರು.
ಶಿಕ್ಷಕರು ನಿರಂತರ ಅಧ್ಯಯನಶೀಲರಾಗಿರಬೇಕು, ವಿದ್ಯಾರ್ಥಿಗಳ ಶ್ರೇಯೋಭಿವೃದ್ಧಿ ಹೆಚ್ಚಿಸುವವರಾಗಿದ್ದು ತಮ್ಮ ಕರ್ತವ್ಯ ಮತ್ತು ಜವಾಬ್ದಾರಿಯನ್ನು ಸದಾ ಪಾಲಿಸಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಕೆ.ಆರ್‍ಎಂ.ಎಸ್.ಎಸ್ ರಾಜ್ಯಾಧ್ಯಕ್ಷ ಸಂದೀಪ ಬೂದಿಹಾಳ, ಕೆ.ಯು.ಡಿ ವಿಭಾಗದ ಮಹಿಳಾ ಪ್ರಮುಖರಾದ ಪ್ರೊ. ಶೈಲಜಾ ಹುದ್ದಾರ ಸೇರಿದಂತೆ ಶಿಕ್ಷಕ ಸಂಘಟನೆಗಳ ಪದಾಧಿಕಾರಿಗಳು ಸೇರಿದಂತೆ ನೂರಾರು ಶಿಕ್ಷಕರು, ಪ್ರಶಿಕ್ಷಣಾರ್ಥಿಗಳು ಉಪಸ್ಥಿತರಿದ್ದರು.
ಕಾರ್ಯಕ್ರಮದ ಆರಂಭದಲ್ಲಿ ಉಪನ್ಯಾಸಕಿ ಶ್ರೀಮತಿ ಶೋಭಾ ಉಜ್ಜಯಿನಶೆಟ್ಟರ ಪ್ರಾರ್ಥಿನೆ ಮಾಡಿದರು, ಡಾ. ಸಿ.ವಿ ಮರಿದೇವರಮಠ ಸಭೆಯನ್ನು ಸ್ವಾಗತಿಸಿ ಪರಿಚಯಿಸಿದರು, ಬಸವರಾಜ ದೇವರಮನಿ ಸಂಕಲ್ಪ ಬೋಧನೆ ಮಾಡಿಸಿದರು, ಡಾ. ರಾಜಕುಮಾರ ಪಾಟೀಲ ನಿರೂಪಣೆ ಮಾಡಿದರು, ಕೊನೆಗೆ ಡಾ. ಜಯಾನಂದ ಹಟ್ಟಿ ವಂದಿಸಿದ ನಂತರ ಶಾಂತಿಮಂತ್ರದಿಂದ ಕಾರ್ಯಕ್ರಮ ಮುಕ್ತಾಯಗೊಂಡಿತು.

Don’t miss your news!

We don’t spam! Read our privacy policy for more info.

Don’t miss your news!

We don’t spam! Read our privacy policy for more info.

Don’t miss your news!

We don’t spam! Read our privacy policy for more info.

Don’t miss your news!

We don’t spam! Read our privacy policy for more info.

Related Articles

Stay Connected

0FansLike
3,912FollowersFollow
0SubscribersSubscribe
- Advertisement -spot_img

Latest Articles

error: Content is protected !!