ಹುಬ್ಬಳ್ಳಿ: ಸರ್ಕಾರಿ ಶಾಲೆಯಲ್ಲಿ ಕಲಿಯುವ ಮಕ್ಕಳಲ್ಲಿ ಹಲವಾರು ರೀತಿಯ ಪ್ರತಿಭೆಗಳನ್ನು ಕಾಣಬಹುದು ಸರ್ಕಾರಿ ಶಾಲೆಯಲ್ಲಿ ಉತ್ತಮ ರೀತಿಯ ಗುಣಮಟ್ಟದ ಶಿಕ್ಷಣ ದೊರೆಯುವುದರಿಂದ ದೇಶವು ಮುನ್ನಡೆಯುತ್ತದೆ. ಒಳ್ಳೆಯ ಗುಣಮಟ್ಟದ ಶಿಕ್ಷಣ ದೊರೆಯುವುದರಿಂದ ಭಾರತವು ವಿಶ್ವಗುರು ಆಗುವುದರಲ್ಲಿ ಎರಡು ಮಾತಿಲ್ಲ ಎಂದು ಸ್ವರ್ಣ ಗ್ರುಪ್ಸ್ ಕನ್ಸಪ್ಟ್ರಕ್ಷನ್ಸ್ ಪ್ರೈ ಲಿ ನ ವ್ಯವಸ್ಥಾಪಕ ನಿರ್ದೆಶಕ ಡಾ. ವಿ.ಎಸ್. ವಿ ಪ್ರಸಾದ ಹೇಳಿದರು
ನಗರದ ಪ್ರತಿಷ್ಠಿತ ವಿದ್ಯಾಸಂಸ್ಥೆಯಾದ ಎಂ.ಆರ್.ಸಾಖರೆ ಶಾಲೆ (ಕೆಎಲ್‍ಇ ಸೊಸೈಟಿ) ಆವರಣದಲ್ಲಿ ಯೂಥ್ ಫಾರ್ ಸೇವಾ ಹುಬ್ಬಳ್ಳಿ ಘಟಕ ಇವರ ವತಿಯಿಂದ ರವಿವಾರ ನಡೆದ ಚಿಗುರು ಮಕ್ಕಳ ಮೇಳ 2023-24 ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆವರು ಮಾತನಾಡಿದರು.
ಇಂತಹ ಕಾರ್ಯಕ್ರಮಗಳು ಮಕ್ಕಳಿಗೆ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲು ವೇದಿಕೆಯಾಗಿದೆ ಮತ್ತು ದೇಶವನ್ನು ಪ್ರಗತಿಯತ್ತ ಕೊಂಡೊಯ್ಯಲು ಉತ್ತಮ ರೀತಿಯಾದ ಶಿಕ್ಷಣವು ಪ್ರಮುಖ ಪಾತ್ರವನ್ನು ನಿರ್ವಹಿಸುತ್ತದೆ ಎಂದು ಹೇಳಿದರು.
ಸರ್ಕಾರಿ ಶಾಲೆಯಲ್ಲಿ ಓದುವ ಮಕ್ಕಳು ಹಲವಾರು ರೀತಿಯ ಪ್ರತಿಭೆಯನ್ನು ಹೊಂದಿದವರು ಆಗಿರುತ್ತಾರೆ. ಅಂತಹ ಮಕ್ಕಳಿಗೆ ಸೂಕ್ತವಾದ ರೀತಿಯ ವಾತಾವರಣವನ್ನು ಕಲ್ಪಿಸಬೇಕು, ದೇಶವನ್ನು ಪ್ರಗತಿಯತ್ತ ಕೊಂಡೊಯ್ಯುವಲ್ಲಿ ಮಕ್ಕಳು ಪ್ರಮುಖ ಪಾತ್ರವನ್ನು ನಿರ್ವಹಿಸುತ್ತಾರೆ ಎಂದು ಹೇಳಿದರು.
ಕೆ.ಎಲ್‍ಇ ತಾಂತ್ರಿಕ ವಿಶ್ವವಿದ್ಯಾಲಯದ ಕುಲಸಚಿವರಾದ ಬಸವರಾಜ ಅನಾಮಿ ಅವರು ಮಾತನಾಡುತ್ತ, ಬೆಳೆಯುವ ಸಿರಿ ಮೊಳಕೆಯಲ್ಲಿ ಎಂಬ ನಾಡು ನುಡಿಯಂತೆ ಕಲಿಕೆಯಲ್ಲಿ ನಿರಂತರ ಪ್ರಗತಿ ಹೊಂದಲು ಸರ್ಕಾರಿ ಶಾಲೆಯಲ್ಲಿ ಕಲಿಯುವ ಮಕ್ಕಳಿಗೆ ಉತ್ತಮ ರೀತಿಯ ಹೈಟೆಕ್ ಸ್ಪರ್ಶ ನೀಡುವಂತಹ ತರಗತಿಯನ್ನು ಮಕ್ಕಳಿಗೆ ನಿರ್ಮಿಸಿ ಕೊಡುವಂತ ಕೆಲಸವಾಗಬೇಕಿದೆ ಎಂದು ಹೇಳಿದರು.
ವೈಎಫ್‍ಎಸ್‍ನ ನ್ಯಾಷನಲ್ ವಾಲಿಂಟಿಯರ್ ಮ್ಯಾನೆಜ್‍ಮೆಂಟ್ ಮುಖ್ಯಸ್ಥರಾದ ಶ್ರೀಮತಿ ಅರುಣಮಯಿ ಜಿ ಮಾತನಾಡುತ್ತ ವಿದ್ಯಾರ್ಥಿಗಳನ್ನು ಹುರಿದುಂಬಿಸಿ ಸ್ಪರ್ದೆಗಳಲ್ಲಿ ವಿಜೆತರಾಗುವ ಮಕ್ಕಳಿಗೆ ಶುಭಾಶಯ ಕೋರುತ್ತ ಹಿನ್ನಡೆಯಾಗುವ ವಿದ್ಯಾರ್ಥಿಗಳು ಅದನ್ನು ಸೋಲು ಎಂದುಕೊಳ್ಳದೇ ಮುಂದೆ ದೊಡ್ಡ ಅವಕಾಶವಿದೆ ಎಂದುಕೊಲ್ಳಬೇಕು ಎಂದು ಹೇಳಿದರು.
ವೈಎಫ್‍ಎಸ್ ಸಲಹಾ ಸಮಿತಿ ಸದಸ್ಯರಾದ ಸಿ ಎ ಸಂತೋಷ ಪಾಟೀಲರು ಅಧ್ಯಕ್ಷೀಯ ನುಡಿ ಆಡಿದರು. ವಿಠ್ಠಲ್ ಖಟಾವಕರ ಉಪಸ್ಥಿತರಿದ್ದರು. ವೈಎಫ್‍ಎಸ್ ಸಲಹಾ ಸಮಿತಿ ಸದಸ್ಯರಾದ ಪ್ರೊ. ಸಂದೀಪ ಬೂದಿಹಾಳ ಸ್ವಾಗತ ಭಾಷಣ ಮಾಡಿದರು, ಹುಬ್ಬಳ್ಳಿಯ ಕಿಮ್ಸ್ ಶರೀರಶಾಸ್ತ್ರ ವಿಭಾಗದ ಎಚ್‍ಒಡಿ ಡಾ. ಕೆ. ಎಫ್. ಕಮ್ಮಾರ್ ವಂದಿಸಿದರು. ಜ್ಯೋತಿ ಹೆಗಡೆ ನಿರೂಪಿಸಿದರು.
ಮಧ್ಯಾಹ್ನ ಬಹುಮಾನ ವಿತರಣಾ ಸಮಾರಂಭದಲ್ಲಿ ವೈಎಫ್‍ಎಸ್ ಸಲಹಾ ಸಮಿತಿ ಸದಸ್ಯರಾದ ಡಾ. ಸಂಜಯ ಕೊಟಬಾಗಿಯವರು ಅಧ್ಯಕ್ಷೀಯ ನುಡಿ ನುಡಿದರು. ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಕಿಮ್ಸ್ ಹುಬ್ಬಳ್ಳಿಯ ನಿರ್ದೇಶಕ ಡಾ. ಎಸ್.ಎಫ್.ಕಮ್ಮಾರ್, ಶ್ರೇಯಸ್ ನಡಕರ್ಣಿ, ಶ್ರೀ ಸೋಮಶೇಖರ ಶಿರಗುಪ್ಪಿ, ಸಲಹಾ ಸಮಿತಿಯ ಸದಸ್ಯರಾದ ನಾಗರಾಜ ನಡಕಟ್ಟಿ, ಶ್ರೀಮತಿ ಜ್ಯೋತಿ ನಡಕಟ್ಟಿ, ಸುರೇಶ ಸರದೇಶಪಾಂಡೆ, ಡಾ ಸುನೀಲ್ ಗೋಕ್ಲೆ, ಡಾ ಪ್ರಕಾಶ ರಾಠೋಡ್, ಶ್ರೀಮತಿ ಮಾಧುರಿ ಕಟಾವಕರ್, ಶ್ರೀಮತಿ ವೀಣಾ ಭಟ್, ಜಗನ್ನಾಥ ಜರತಾರಗರ ಭಾಗವಹಿಸಿದ್ದರು.
ವಿನಯ್ ಕೋಣಜೆ ಅವರು ತಮ್ಮ ತಾಯಿ ಶ್ರೀಮತಿ ಗೀತ ನಾಗೇಶ ಕೋಣಜೆ ಅವರ ಸವಿನೆನಪಿಗಾಗಿ ಸಂಪೂರ್ಣ ಎರಡೂವರೆ ಸಾವಿರ ಜನರಿಗೆ ಊಟದ ವ್ಯವಸ್ಥೆ ಪ್ರಾಯೋಜಿಸಿದರು. ಯುನಿಟಿ ಸೆಕ್ಯುರಿಟಿ ಫೋರ್ಸ್ ನ ಶ್ರೀ ಸಂತೋಷ ಇಂಚಲ ಅವರು ಎಲ್ಲಾ ಕಾರ್ಯಕ್ರಮಗಳಿಗೆ 300 ಬಹುಮಾನಗಳನ್ನು ಪ್ರಾಯೋಜಿಸಿದರು. ಸ್ವರ್ಣ ಗ್ರೂಪ್‍ನ ನಿರ್ದೆಶಕರಾದ ಡಾ. ವಿ.ಎಸ್.ವಿ. ಪ್ರಸಾದ್ ಅವರು ವಿವಿಧ ಕ್ಷೇತ್ರಗಳಲ್ಲಿ ಚಿಗುರು ಜಾಗೃತಿ ಮೂಡಿಸಲು ನಡೆದ ಕ್ರಿಕೆಟ್ ಪಂದ್ಯಾವಳಿ ಕಾರ್ಯಕ್ರಮಗಳಿಗೆ ನಗದು ಬಹುಮಾನ ನೀಡಿದರು.
ವೈಎಫ್‍ಎಸ್ ನ 7ನೇ ಚಿಗುರು ಕಾರ್ಯಕ್ರಮದಲ್ಲಿ ಧಾರವಾಡ ಜಿಲ್ಲೆಯ 47 ಶಾಲೆಯಿಂದ 1920 ಸರ್ಕಾರಿ ಶಾಲೆ ವಿದ್ಯಾರ್ಥಿಗಳು ಒಟ್ಟು 23 ಸ್ಪರ್ಧೆಗಳಲ್ಲಿ ಭಾಗಿಯಾಗಿದ್ದರು. ಮತ್ತು ಈ ಸ್ಪರ್ಧೆಗಳಿಗೆ 69 ತಿರ್ಪುಗಾರರು ಹಾಗೂ 400 ಕ್ಕೂ ಹೆಚ್ಚು ಸ್ವಯಂಸೇವಕರು ಮತ್ತು 150 ಶಿಕ್ಷಕರು ಹಾಗೂ ಎನ್‍ಸಿಸಿ ಕಡೆಟ್ಸ್‍ಗಳು ಭಾಗಿಯಾಗಿದ್ದರು. ಕ್ರೀಡೆ, ಕಲೆ, ನಾಟಕ, ವಿಜ್ಞಾನ ಇತ್ಯಾದಿ ವಿಭಾಗಗಳಲ್ಲಿ ಸ್ಪರ್ಧೆಗಳನ್ನು ನಡೆಸಲಾಯಿತು. ಸ್ಫರ್ಧೆಗಳಲ್ಲಿ ನೇತಾಜಿ ಸುಭಾಶ ಚಂದ್ರ ಬೋಸ್ ಪ್ರಾಥಮಿಕ ಶಾಲೆ ವಿರಾಗ್ರಣಿ ಪ್ರಶಸ್ತಿಯನ್ನು ಪಡೆಯಿತು.
ಎಂ. ಆರ್ ಸಾಕ್ರೆ ಆಂಗ್ಲ ಮಾಧ್ಯಮ ಶಾಲೆಯ ಪ್ರಾಚಾರ್ಯರು, ಕಾಲೇಜು ಸ್ವಯಂಸೇವಕರು, ಶಾಲೆಯ ಎಲ್ಲ ವಿದ್ಯಾರ್ಥಿಗಳು ಹಾಗೂ ಬೋಧಕ ಬೋಧಕೇತರ ಸಿಬ್ಬಂದಿ ವರ್ಗದವರು ಮತ್ತು ವೈಎಫ್‍ಎಸ್‍ನ ಶಿರಸಿ, ಬೆಳಗಾವಿ, ವಿಜಯಪುರ, ಕಲಬುರ್ಗಿಯ ಮತ್ತು ಹುಬ್ಬಳ್ಳಿ ಎಲ್ಲಾ ಜಿಲ್ಲಾ ಸಂಯೋಜಕರು ಉಪಸ್ಥಿರಿದರು. ಹರ್ಷಿತ ರೋಣದ ಸಮಾರೋಪ ಕಾರ್ಯಕ್ರಮ ನಿರೂಪಿಸಿದರು.