Site icon MOODANA Web Edition

ಫೆ.8 ರಿಂದ 23ರವರೆಗೆ ಹುಬ್ಬಳ್ಳಿ ತಾಲೂಕಿನಾದ್ಯಂತ ಸಂವಿಧಾನ ಜಾಗೃತಿ ಜಾಥಾ

ಹುಬ್ಬಳ್ಳಿ ( ಕರ್ನಾಟಕ ವಾರ್ತೆ) ಫೆ.5: ಸಂವಿಧಾನ ಜಾಗೃತಿ ಜಾಥಾವು ಜನವರಿ 26 ರಿಂದ ಫೆಬ್ರವರಿ 23ರವರೆಗೆ ಇಡೀ ಜಿಲ್ಲೆಯಾದ್ಯಂತ ಸಂಚರಿಸಲಿದ್ದು, ಹುಬ್ಬಳ್ಳಿ ತಾಲೂಕಿನಲ್ಲಿ ಫೆಬ್ರವರಿ 8 ರಿಂದ 23 ರವರೆಗೆ ಸಂಚರಿಸಲಿದೆ.
ಫೆಬ್ರವರಿ 8 ರಂದು ವರೂರ್ ಮತ್ತು ಕರಡಿಕೊಪ್ಪ , ಫೆ.9 ರಂದು ಬೆಳಗಲಿ, ಕಟ್ನೂರ್, ಚೆನ್ನಾಪೂರ್, ಅಂಚಟಗೇರಿ, ದೇವರಗುಡಿಹಾಳ, ಫೆ.10 ರಂದು ರಾಯನಾಳ, ಅದರಗುಂಚಿ, ನೂಲ್ವಿ, ಶೆರೇವಾಡ, ಫೆ.11 ರಂದು ಬು.ಅರಳಿಕಟ್ಟಿ, ಅಗಡಿ, ಫೆ.21ರಂದು ಹೆಬಸೂರ್, ಬ್ಯಾಹಟ್ಟಿ, ಸುಳ್ಳ, ಫೆ.22ರಂದು ಕುಸುಗಲ್, ಕಿರೇಸೂರ್, ಇಂಗಳಹಳ್ಳಿ, ಭಂಡಿವಾಡ, ಉಮಚಗಿ, ಫೆ.23ರಂದು ಕೋಳಿವಾಡ, ಶಿರಗುಪ್ಪಿ, ಮಂಟೂರ, ಹಳ್ಯಾಳಗಳಲ್ಲಿ ಸಂವಿಧಾನ ಜಾಗೃತಿ ಜಾಥಾ ಸಂಚಾರ ಮಾಡಲಿದೆ ಎಂದು ಹುಬ್ಬಳ್ಳಿ ಗ್ರಾಮೀಣ ತಹಶೀಲ್ದಾರರಾದ ಪ್ರಕಾಶ ನಾಶಿ ಅವರು ಪ್ರಕಟಣೆಯಲ್ಲಿ ಕೋರಿದ್ದಾರೆ.

Exit mobile version