22.9 C
Karnataka
Saturday, December 6, 2025
spot_img

12ನೇ ಅಖಿಲ ಭಾರತ ಪೋಲೀಸ್ ಆರ್ಚರಿ ಚಾಂಪಿಯನ್‍ಷಿಪ್ 2023-24

ಬೆಂಗಳೂರು, ಫೆಬ್ರವರಿ 02 (ಕರ್ನಾಟಕ ವಾರ್ತೆ):

ಬೆಂಗಳೂರಿನ ಕೋರಮಂಗಲದ ಕೆಎಸ್‍ಆರ್‍ಪಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ 12ನೇ ಅಖಿಲ ಭಾರತ ಪೊಲೀಸ್ ಆರ್ಚರಿ ಚಾಂಪಿಯನ್‍ಷಿಪ್ 2023-24 ರಲ್ಲಿ  ಇಂದು ನಡೆದ ಪಂದ್ಯಾವಳಿಗಳ ರಿಕರ್ವ್ ತಂಡದ ಪುರುಷ ವಿಭಾಗದಲ್ಲಿ ಇಂಡೋ ಟಿಬೆಟಿಯನ್ ಬಾರ್ಡರ್ ಪೋಲೀಸ್ ಕ್ರೀಡಾಪಟುಗಳಾದ ತುಷಾರ್ ಪ್ರಭಾಕರ್ ಶೆಲ್ಲೆ. ನೀರಜ್ ಚೌಹಾಣ್, ಮುಖೇಶ್ ಬೋರೊ, ಜಿತೇಂದರ್ ಸಿಂಗ್ ರವರು 6 ಪಾಯಿಂಟ್‍ಗಳನ್ನು ಗಳಿಸಿದರೆ ಸಿಆರ್‍ಪಿಎಫ್ ತಂಡದ ಬಸಂತ್ ಕುಮಾರ್, ಕಮಲ್ ಸಾಗರ್, ಹೃದಬ್ ತಿರಿಯಾ ಮತ್ತು ವಿನಾಯಕ್ ವರ್ಮ ರವರು 2 ಪಾಯಿಂಟ್‍ಗಳನ್ನು ಗಳಿಸಿರುತ್ತಾರೆ. ಈ ಹಂತದಲ್ಲಿ ಐಟಿಬಿಪಿ ತಂಡವು ಸಿಆರ್‍ಪಿಎಫ್ ತಂಡವನ್ನು 4 ಸೆಟ್ ಪಾಯಿಂಟ್‍ಗಳ ಅಂತರದಲ್ಲಿ ಮಣಿಸಿ. ಚಿನ್ನದ ಪದಕವನ್ನು ಗೆದ್ದಿರುತ್ತಾರೆ.

ಅದೇ ರೀತಿ ರಿಕರ್ವ್ ತಂಡದ ಮಹಿಳಾ ವಿಭಾಗದಲ್ಲಿ ರಾಜಸ್ಥಾನ್ ರಾಜ್ಯದ ಪರವಾಗಿ ಅಮನ್ ದೀಪ್ ಕೌರ್, ಮೀನಾಕುಮಾರಿ ಚತುರ್ವೇದಿ, ನೀರಜ್ ಶರ್ಮ ರವರು, 5 ಸೆಟ್ ಪಾಯಿಂಟ್‍ಗಳನ್ನು ಪಡೆದರೆ, ಉತ್ತರ ಪ್ರದೇಶ ರಾಜ್ಯದ ಪರವಾಗಿ ಸುಮನ್ ಚೌಧರಿ. ಜೀನತ್ ಆರ್ಯ, ಅನಿತ ಪೌದವಾಲ್, ಶಿಲ್ಪಿ ರವರು 1 ಸೆಟ್ ಪಾಯಿಂಟ್‍ಗಳನ್ನು ಪಡೆದಿರುತ್ತಾರೆ. ಈ ಹಂತದಲ್ಲಿ ರಾಜಸ್ಥಾನ್ ತಂಡವು 4 ಸೆಟ್ ಪಾಯಿಂಟ್‍ಗಳ ಅಂತರದಲ್ಲಿ ಮಣಿಸಿ, ಚಿನ್ನದ ಪದಕವನ್ನು ಗೆದ್ದಿರುತ್ತಾರೆ.

ಇಂದು ನಡೆದ ಇಂಡಿಯನ್ ವಿಭಾಗದ ವೈಯಕ್ತಿಕ ಒಲಿಂಪಿಕ್ ಪಂದ್ಯಾವಳಿಯ ಪುರುಷ ವಿಭಾಗದಲ್ಲಿ ಪಿ ಹೆರೋಬಾ ಸಿಂಗ್ – ಚಿನ್ನ, ವಿಕಾಸ್ ಹರಿದಾಸ್ ಮೋರೆ – ಬೆಳ್ಳಿ ಮತ್ತು ಗೌರವ್ ಸಂಜಯ್ ರಾವ್ ಚಂಡ್ನೆ-ಕಂಚು ಪಡೆದಿದ್ದಾರೆ. ಇದೇ ವಿಭಾಗದ ಮಹಿಳಾ ಪಂದ್ಯಾವಳಿಯಲ್ಲಿ ಬೇಬಿ ದೇವಿ – ಚಿನ್ನ, ಟುಟುಮೋನಿ ಬೋರೊ – ಬೆಳ್ಳಿ ಮತ್ತು ಪಲ್ಲಬಿ ಬೋರೊ – ಕಂಚಿನ ಪದಕ ಗೆದ್ದಿರುತ್ತಾರೆ.

ಕರ್ನಾಟಕ ಲೋಕಾಯುಕ್ತದ ಡಿಜಿಪಿ ಪ್ರಶಾಂತ್ ಕುಮಾರ್ ಠಾಕೂರ್ ಅವರು ಪದಕ ವಿಜೇತರಿಗೆ ಪದಕಗಳನ್ನು ಪ್ರದಾನ ಮಾಡಿ, ಭಾಗವಹಿಸಿದ ಎಲ್ಲಾ ಕ್ರೀಡಾಪಟುಗಳಿಗೆ ಶುಭ ಕೋರಿದರು.

Don’t miss your news!

We don’t spam! Read our privacy policy for more info.

Don’t miss your news!

We don’t spam! Read our privacy policy for more info.

Don’t miss your news!

We don’t spam! Read our privacy policy for more info.

Don’t miss your news!

We don’t spam! Read our privacy policy for more info.

Related Articles

Stay Connected

0FansLike
3,912FollowersFollow
0SubscribersSubscribe
- Advertisement -spot_img

Latest Articles

error: Content is protected !!