ಹುಬ್ಬಳ್ಳಿ ( ಕರ್ನಾಟಕ ವಾರ್ತೆ) ಫೆ.1: ಕಿಮ್ಸ್ ಸಂಸ್ಥೆಯಲ್ಲಿ ಹೊಸದಾಗಿ ಎಂ.ಆರ್.ಐ ಯಂತ್ರ ಅಳವಡಿಸುವಿಕೆ ಕಾರ್ಯ ನಡೆಯುತ್ತಿರುವುದರಿಂದ ಅಂದಾಜು 2 ರಿಂದ 3 ವಾರದವರೆಗೆ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗುತ್ತಿದೆ. ಈ ಸೇವೆಯನ್ನು ಬಾಹ್ಯ ಸಂಸ್ಥೆಯೊಂದಿಗೆ ಒಡಂಬಡಿಕೆ ಮಾಡಿಕೊಂಡು ಹಳೆಯ ದರದಲ್ಲಿ ಮುಂದುವರೆಸಲಾಗುತ್ತದೆ. ಸಿ.ಟಿ. ಸ್ಕ್ಯಾನ್ ಸೇವೆಯು ಎಂದಿನಂತೆ 24/7 ಕಾರ್ಯ ನಿರ್ವಹಿಸಲಿದೆ. ಹೆಚ್ಚಿನ ಮಾಹಿತಿಗೆ ದೂರವಾಣಿ ಸಂಖ್ಯೆ 0836-2370057 ಸಂಪರ್ಕಿಸುವಂತೆ ಕಿಮ್ಸ್ ನಿರ್ದೇಶಕರಾದ ಎಸ್.ಎಫ್. ಕಮ್ಮಾರ ಅವರು ಪ್ರಕಟಣೆಯಲ್ಲಿ ಕೋರಿದ್ದಾರೆ.
ಕಿಮ್ಸ್ ಸಂಸ್ಥೆ : ಎಂ.ಆರ್.ಐ ಸೇವೆ ತಾತ್ಕಾಲಿಕ ಸ್ಥಗಿತ
![](https://news.ananddesigns.in/wp-content/uploads/2024/02/price-decreased-at-diagnostic-centers-57714467.jpg)