18.8 C
Karnataka
Wednesday, February 5, 2025
spot_img

ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ ಗೌರವ ನಮನ

ಬೆಂಗಳೂರು, ಜನವರಿ 30 (ಕರ್ನಾಟಕ ವಾರ್ತೆ):

ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ಪುಣ್ಯತಿಥಿ ಅಂಗವಾಗಿ, ದೇಶದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಹುತಾತ್ಮರಾದವರ ಸ್ಮರಣಾರ್ಥ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ವಿಧಾನಸೌಧ ಮತ್ತು ವಿಕಾಸಸೌಧ ಕಟ್ಟಡಗಳ ಮಧ್ಯ ಭಾಗದಲ್ಲಿರುವ ಮಹಾತ್ಮ ಗಾಂಧಿ ಅವರ ಪ್ರತಿಮೆಯ ಬಳಿ ಅವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡುವ ಮೂಲಕ ಗೌರವ ನಮನ ಸಲ್ಲಿಸಿದ ಬಳಿಕ, ಕೆಲವು ನಿಮಿಷಗಳ ಕಾಲ ಮೌನವನ್ನು ಆಚರಣೆ ಮಾಡಿ, ಹುತಾತ್ಮರ ದಿನಾಚರಣೆಯನ್ನು ನೆರವೇರಿಸಿದರು.

 ಈ ವೇಳೆ, ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಸಚಿವ ಡಾ. ಕೆ.ಹೆಚ್.ಮುನಿಯಪ್ಪ, ನಗರಾಭಿವೃದ್ಧಿ ಸಚಿವ ಸುರೇಶ (ಬೈರತಿ), ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಗೋವಿಂದರಾಜು, ಮುಖ್ಯಮಂತ್ರಿಯವರ ಕಾನೂನು ಸಲಹೆಗಾರ ಪೆÇನ್ನಣ್ಣ, ವಿಧಾನ ಪರಿಷತ್ ಸದಸ್ಯ ಶರವಣ, ಮುಖ್ಯ ಕಾರ್ಯದರ್ಶಿ ರಜನೀಶ್ ಗೋಯಲ್, ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ಕಾರ್ಯದರ್ಶಿ ಅಜಯ್ ನಾಗಭೂಷಣ್,  ಮಾಜಿ ಸಚಿವ ಹೆಚ್.ಆಂಜನೇಯ, ರಾಜ್ಯ ಸಭೆ ಸದಸ್ಯ ರಾಜೀವ್ ಗೌಡ, ಸೇರಿದಂತೆ ಇತರೆ ಗಣ್ಯರು ಉಪಸ್ಥಿತರಿದ್ದರು.

ಮ್ಯಾನ್ಯುಯಲ್ ಸ್ಕ್ಯಾವೆಂಜರ್ಸ್‍ಗಳ ಪುನರ್ವಸತಿ ಸಮಾವೇಶ ಕಾರ್ಯಕ್ರಮ

ಕರ್ನಾಟಕ ರಾಜ್ಯ ಸಫಾಯಿ ಕರ್ಮಚಾರಿ ಅಭಿವೃದ್ಧಿ ನಿಗಮವನ್ನು ಕಂಪನಿ ಕಾಯ್ದೆ – 2013 ರನ್ವಯ ಸಫಾಯಿ ಕರ್ಮಚಾರಿಗಳು ಮತ್ತು ಗುರುತಿಸಿರುವ ಮ್ಯಾನ್ಯುಯಲ್ ಸ್ಕ್ಯಾವೆಂಜರ್ಸ್‍ಗಳ ಸರ್ವತೋಮುಖ ಅಭಿವೃದ್ಧಿಗಾಗಿ ಸ್ಥಾಪಿಸಲಾಗಿದೆ.

ಮ್ಯಾನ್ಯುಯಲ್ ಸ್ಕ್ಯಾವೆಂಜರ್ಸ್ ನೇಮಕಾತಿ ನಿμÉೀಧ ಮತ್ತು ಅವರ ಪುನರ್ವಸತಿ ಅಧಿನಿಯಮ 2013 ರನ್ವಯ ರಾಜ್ಯದಲ್ಲಿ 2013 ರಿಂದ ಇಲ್ಲಿಯವರೆಗೂ ವಿವಿಧ ಹಂತಗಳಲ್ಲಿ ಗ್ರಾಮೀಣ ಮತ್ತು ನಗರ ಸ್ಥಳೀಯ ಸಂಸ್ಥೆಗಳಲ್ಲಿ ಸಮೀಕ್ಷೆ ಮಾಡಿ 7483 ಮ್ಯಾನ್ಯುಯಲ್ ಸ್ಕ್ಯಾವೆಂಜರ್ಸ್‍ಗಳನ್ನು ಗುರುತಿಸಲಾಗಿದೆ.


ಕೇಂದ್ರ ಸರ್ಕಾರದ ರಾಷ್ಟ್ರೀಯ ಸಫಾಯಿ ಕರ್ಮಚಾರಿ ಫೈನಾನ್ಸ್ ಅಭಿವೃದ್ಧಿ ನಿಗಮ (NSKFDC) ದಿಂದ 2833 ಮ್ಯಾನ್ಯುಯಲ್ ಸ್ಕ್ಯಾವೆಂಜರ್ಸ್‍ಗಳಿಗೆ ರೂ.40,000/- ಒಂದು ಬಾರಿ ನಗದು ಸಹಾಯಧನ (OTCA) ಮತ್ತು ಗುರುತಿನ ಚೀಟಿಯನ್ನು ನೀಡಿರುತ್ತಾರೆ.

ಬಾಕಿ ಉಳಿದ 4650 ಮ್ಯಾನ್ಯುಯಲ್ ಸ್ಕ್ಯಾವೆಂಜರ್ಸ್‍ಗಳಿಗೆ ಗುರುತಿನ ಚೀಟಿ ಮತ್ತು OTCA ನೀಡಲು ಕೇಂದ್ರ ಸರ್ಕಾರದವರು ನಿರಾಕರಿಸಿರುತ್ತಾರೆ. ಆದ್ದರಿಂದ, ಬಾಕಿ ಉಳಿದ 4650 ಮ್ಯಾನ್ಯುಯಲ್ ಸ್ಕ್ಯಾವೆಂಜರ್ಸ್‍ಗಳಿಗೆ ಕರ್ನಾಟಕ ಸರ್ಕಾರದಿಂದ ಗುರುತಿನ ಚೀಟಿ, ಗುರುತಿನ ಸಂಖ್ಯೆ ಹಾಗೂ OTCA (ಒಂದು ಬಾರಿ ನಗದು ಸಹಾಯಧನ) ತಲಾ ರೂ.40000/- ರಂತೆ ವಿತರಣೆ ಮಾಡಲು ಕ್ರಮವಹಿಸಲಾಗಿದೆ.


2023-24ನೇ ಸಾಲಿನಲ್ಲಿ ನಿಗಮಕ್ಕೆ ಹಂಚಿಕೆ ಮಾಡಿರುವ ರೂ.40.00 ಕೋಟಿ ಅನುದಾನದಲ್ಲಿ ಶೇ.75 ರಷ್ಟು ಮೊತ್ತ ರೂ.30.00 ಕೋಟಿಗಳನ್ನು ಮ್ಯಾನ್ಯುಯಲ್ ಸ್ಕ್ಯಾವೆಂಜರ್ಸ್‍ಗಳಿಗೆ ವಿವಿಧ ಯೋಜನೆಗಳಿಗೆ ಮೀಸಲಿಡಲಾಗಿದ್ದು, ರೂ.40,000/- OTCA ಮೊತ್ತವನ್ನು ನೇರವಾಗಿ ಮ್ಯಾನ್ಯುಯಲ್ ಸ್ಕ್ಯಾವೆಂಜರ್ಸ್‍ಗಳ ಖಾತೆಗೆ ಆರ್‍ಟಿಜಿಎಸ್ ಮೂಲಕ ಜಮೆ ಮಾಡಲು ರೂ.18.60 ಕೋಟಿಗಳ ಅನುದಾನವನ್ನು ನಿಗಧಿಪಡಿಸಿದೆ.


OTCA ರೂ.18.50 ಕೋಟಿ ಹಾಗೂ ನಿಗಮದಿಂದ ವಿವಿಧ ಯೋಜನೆಗಳಡಿ 1462 ಮ್ಯಾನುಯಲ್ ಸ್ಕ್ಯಾವೆಂಜರ್ಸ್‍ಗೆ ರೂ.32.66 ಕೋಟಿಗಳ ಅನುದಾನದಲ್ಲಿ ಪುನರ್ವಸತಿ ಕಲ್ಪಿಸಲಾಗಿದೆ. ಒಟ್ಟಾರೆ ರೂ.51.26 ಕೋಟಿ ನಿಗಮದಿಂದ ನೆರವು ನೀಡಲಾಗಿದೆ.


ವಿವಿಧ ಯೋಜನೆಗಳಡಿ ನೀಡಿರುವ ಸೌಲಭ್ಯಗಳ ವಿವರಗಳು:


ಸ್ವಯಂ ಉದ್ಯೋಗ-ನೇರಸಾಲ ಯೋಜನೆಯಡಿಯಲ್ಲಿ 6355 ಫಲಾನುಭವಿಗಳಿಗೆ ರೂ. 3495.00 ಲಕ್ಷಗಳ ಅನುದಾನ ಬಿಡುಗಡೆ ಮಾಡಲಾಗಿರುತ್ತದೆ. ಸ್ವಯಂ ಉದ್ಯೋಗ-ಉದ್ಯಮಶೀಲತಾ ಯೋಜನೆಯಡಿಯಲ್ಲಿ 1352 ಫಲಾನುಭವಿಗಳಿಗೆ ರೂ. 1889.00 ಲಕ್ಷಗಳ ಅನುದಾನ ಬಿಡುಗಡೆ ಮಾಡಲಾಗಿರುತ್ತದೆ.


ಐರಾವತ ಯೋಜನೆಯಡಿಯಲ್ಲಿ 492 ಫಲಾನುಭವಿಗಳಿಗೆ ರೂ. 2452.00 ಲಕ್ಷಗಳ ಅನುದಾನ ಬಿಡುಗಡೆ ಮಾಡಲಾಗಿರುತ್ತದೆ. ಮೈಕ್ರೋ ಕ್ರೆಡಿಟ್ ಪ್ರೇರಣಾ ಯೋಜನೆಯಡಿ 782 ಫಲಾನುಭವಿಗಳಿಗೆ ರೂ. 195.00 ಲಕ್ಷಗಳ ಅನುದಾನ ಬಿಡುಗಡೆ ಮಾಡಲಾಗಿರುತ್ತದೆ.
ವಿಧಾನಸೌಧ, ವಿಕಾಸಸೌಧ ಹಾಗೂ ಮಹಾನಗರ ಪಾಲಿಕೆಗಳಲ್ಲಿ ಸ್ವಚ್ಛತಾ ಕಾರ್ಯನಿರ್ವಹಿಸುತ್ತಿರುವ ಮಹಿಳಾ ಸಫಾಯಿ ಕರ್ಮಚಾರಿ/ಮಾನ್ಯುಯಲ್ ಸ್ಕ್ಯಾವೆಂಜರ್ಸ್‍ಗಳಿಗೆ ಕೆಲಸಕ್ಕೆ ಹಾಜರಾಗಲು 241 ಎಲೆಕ್ಟ್ರಿಕಲ್ ದ್ವಿಚಕ್ರ ವಾಹನ ವಿತರಿಸಲಾಗಿದೆ.


ಸಫಾಯಿ ಕರ್ಮಚಾರಿ/ಮ್ಯಾನ್ಯುಯಲ್ ಸ್ಕ್ಯಾವೆಂಜರ್ಸ್‍ಗಳ ಹಾಗೂ ಅವಲಂಬಿತರ ಮಕ್ಕಳಿಗೆ ಆನ್‍ಲೈನ್ ಪಾಠ ಕೇಳಲು ರೂ. 228.00 ಲಕ್ಷಗಳ ಅನುದಾನದಲ್ಲಿ 2450 ಟ್ಯಾಬ್‍ಗಳನ್ನು ವಿತರಣೆ ಮಾಡಲಾಗಿದೆ.


ಸಫಾಯಿ ಕರ್ಮಚಾರಿ/ಮ್ಯಾನ್ಯುಯಲ್ ಸ್ಕ್ಯಾವೆಂಜರ್ಸ್ ಹಾಗೂ ಅವಲಂಬಿತರ 113 ಮಕ್ಕಳಿಗೆ ಸ್ಯಾನಿಟರಿ ಡಿಪೆÇ್ಲೀಮಾ ಕೋರ್ಸ್ ತರಬೇತಿ ನೀಡಲು ಕ್ರಮವಹಿಸಲಾಗಿದೆ. ಹಾಗೂ ಶುಲ್ಕ,  ರೂ. 22,62,000/-ಗಳನ್ನು ನಿಗಮದಿಂದIndia Institute of Self Local Government ಸಂಸ್ಥೆಗೆ ಶುಲ್ಕ ಪಾವತಿಸಲಾಗಿದೆ.


ಮ್ಯಾನುಯಲ್ ಸ್ಕ್ಯಾವೆಂಜರ್ಸ್ / ಸಫಾಯಿ ಕರ್ಮಚಾರಿಗಳ 04 ಸಂಘಗಳಿಗೆ ರೂ. 1.35 ಕೋಟಿ ಅನುದಾನದಲ್ಲಿ ಸಕ್ಕಿಂಗ್ ಜಟ್ಟಿಂಗ್ ಯಂತ್ರಗಳನ್ನು ಶೇಕಡ 75 ರಷ್ಟು ಸಹಾಯಧನದಲ್ಲಿ ವಿತರಿಸಲಾಗಿದೆ.
ರಾಜ್ಯದ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಉತ್ತಮ ಕಾರ್ಯ ನಿರ್ವಹಿಸಿ ಆಯ್ಕೆಯಾದ 131 ಪೌರ ಕಾರ್ಮಿಕರುಗಳಿಗೆ ಅಂಬೇಡ್ಕರ್ ಜನ್ಮದಿನಾಚರಣೆಯಂದು ಅತ್ಯುತ್ತಮ ಪೌರ ಕಾರ್ಮಿಕ ಪ್ರಶಸ್ತಿ ಹಾಗೂ ರೂ. 50,000/- ನಗದು ಪುರಸ್ಕಾರ ನೀಡಿ ಸನ್ಮಾನ ಮಾಡಲಾಯಿತು.
ಕರ್ನಾಟಕ ರಾಜ್ಯ ಸಫಾಯಿ ಕರ್ಮಚಾರಿ ಅಭಿವೃದ್ಧಿ ನಿಗಮದಿಂದ ಸಫಾಯಿ ಕರ್ಮಚಾರಿ/ಮ್ಯಾನ್ಯುಯಲ್ ಸ್ಕ್ಯಾವೆಂಜರ್ಸ್‍ಗಳÀ 6 ರಿಂದ 6 ವರ್ಷಗಳ ಮಕ್ಕಳ ಪಾಲನೆ- ಪೆÇೀಷಣೆಗಾಗಿ ಬೆಂಗಳೂರು ನಗರ ವ್ಯಾಪ್ತಿಯಲ್ಲಿ 05 ಶಿಶುಪಾಲನಾ ಘಟಕ ಸ್ಥಾಪಿಸಿ ನಿರ್ವಹಣೆ ಮಾಡಲಾಗುತ್ತಿದೆ ಹಾಗೂ ರೂ.9.05 ಲಕ್ಷಗಳನ್ನು ಬಿಡುಗಡೆ ಮಾಡಲಾಗಿರುತ್ತದೆ.


ಸ್ವಚ್ಛತಾ ಕಾರ್ಯನಿರ್ವಹಿಸುತ್ತಿರುವ ಸಫಾಯಿ ಕರ್ಮಚಾರಿ/ಮ್ಯಾನ್ಯುಯಲ್ ಸ್ಯಾವೆಂಜಸ್ರ್ಟಳಿಗೆ 358 ದ್ವಿಚಕ್ರ ವಾಹನಗಳನ್ನು ನೀಡಲು ಜಿಲ್ಲಾ ಕಚೇರಿಗಳಿಗೆ ರೂ. 250.60 ಲಕ್ಷಗಳ ಅನುದಾನ ಬಿಡುಗಡೆ ಮಾಡಲಾಗಿದೆ.
ಸÀಫಾಯಿ ಕರ್ಮಚಾರಿ/ಮ್ಯಾನ್ಯುಯಲ್ ಸ್ಕ್ಯಾವೆಂಜರ್ಸ್‍ಗಳÀ ಪದವಿ ಮತ್ತು ಸ್ನಾತಕೋತ್ತರ ಪದವಿ ವ್ಯಾಸಂಗ ಮಾಡುತ್ತಿರುವ ಮಕ್ಕಳಿಗೆ 175 ಲ್ಯಾಪ್ ಟಾಪ್‍ಗಳನ್ನು ನೀಡಲಾಗಿದೆ.


11 ಮಹಾನಗರ ಪಾಲಿಕೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ 300 ಸಫಾಯಿ ಕರ್ಮಚಾರಿಗಳಿಗೆ 03 ದಿನಗಳ ಸ್ವಚ್ಛತಾ ಅಧ್ಯಯನಕ್ಕಾಗಿ ಸಿಂಗಪೂರ್ ಪ್ರವಾಸ ಆಯೋಜಿಸಲಾಗಿದೆ, ಪ್ರವಾಸ ಕೈಗೊಳ್ಳಲು  ರೂ. 4.98 ಕೋಟಿ ಅನುದಾನ ಎಂಎಸ್‍ಐಎಲ್‍ಗೆ ಬಿಡುಗಡೆ ಮಾಡಿದೆ.

Don’t miss your news!

We don’t spam! Read our privacy policy for more info.

Don’t miss your news!

We don’t spam! Read our privacy policy for more info.

Don’t miss your news!

We don’t spam! Read our privacy policy for more info.

Don’t miss your news!

We don’t spam! Read our privacy policy for more info.

Related Articles

Stay Connected

0FansLike
3,912FollowersFollow
0SubscribersSubscribe
- Advertisement -spot_img

Latest Articles

error: Content is protected !!