ಹುಬ್ಬಳ್ಳಿ – 30. ಸನ್ 2023-24 ನೇ ಸಾಲಿನ ಧಾರವಾಡ ಜಿಲ್ಲಾಮಟ್ಟದ ಫಲಪುಷ್ಪ ಪ್ರದರ್ಶನ ಕಾರ್ಯಕ್ರಮವನ್ನು ಧಾರವಾಡ ಜಿಲ್ಲಾ ತೋಟಗಾರಿಕೆ, ಕೃಷಿ ಇಲಾಖೆ, ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಹಾಗೂ ವಿವಿಧ ಇಲಾಖೆಗಳ ಸಹಯೋಗದೊಂದಿಗೆ ದಿನಾಂಕ: 26-01-2024 ರಿಂದ 28-01-2024 ರವರೆಗೆ ಏರ್ಪಡಿಸಿದ್ದು ಇರುತ್ತದೆ. ಸದರಿ ಕಾರ್ಯಕ್ರಮದ ಅಂಗವಾಗಿ ದಿನಾಂಕ: 03-10-2023 ರಿಂದ 05-10-2023 ರವರೆಗೆ ಅವಳಿ ನಗರಗಳಲ್ಲಿ ಇರುವ ಉದ್ಯಾನವನಗಳ ಸ್ಪರ್ದೆಯನ್ನು ಏರ್ಪಡಿಸಲಾಗಿರುತ್ತದೆ. ಅದರನ್ವಯ ಮಹಾನಗರ ಪಾಲಿಕೆಯ ಹುಬ್ಬಳ್ಳಿ ಮತ್ತು ಧಾರವಾಡ ವ್ಯಾಪ್ತಿಯಲ್ಲಿ 42 ಉದ್ಯಾನವನಗಳನ್ನು ಸ್ಪರ್ದೆಗೆ ನೀಡಲಾಗಿದ್ದು ಇರುತ್ತದೆ. ಸದರಿ ಸ್ಪರ್ದೆಯಲ್ಲಿ 03 ಚಾಂಪಿಯನ್ (ಆಯುಕ್ತರ ಕಚೇರಿ ಧಾರವಾಡ ಉದ್ಯಾನವನ, ಮೃತ್ಯುಂಜಯ ಉದ್ಯಾನವನ ಧಾರವಾಡ, ಆಝಾದ ಪಾರ್ಕ ಉದ್ಯಾನವನ ಧಾರವಾಡ) 09 ಪ್ರಥಮ (ನವನಗರ ಮುಖ್ಯ ಉದ್ಯಾನವನ ಹುಬ್ಬಳ್ಳಿ, ಅಧ್ಯಾಪಕನಗರ ಉದ್ಯಾನವನ ಹುಬ್ಬಳ್ಳಿ, ಲಿಂಗರಾಜನಗರ ಉದ್ಯಾನವನ ಹುಬ್ಬಳ್ಳಿ, ರಜತಗಿರಿ ಉದ್ಯಾನವನ ಧಾರವಾಡ, ಶ್ರೀನಿವಾಸನಗರ ಉದ್ಯಾನವನ ಹುಬ್ಬಳ್ಳಿ, ಆಯುಕ್ತರ ಮುಖ್ಯ ಕಚೇರಿ ಮುಂಭಾಗದ ಉದ್ಯಾನವನ ಹುಬ್ಬಳ್ಳಿ, ಆಯುಕ್ತರ ಬಂಗಲೆ ಉದ್ಯಾನವನ ಹುಬ್ಬಳ್ಳಿ, ಕೊಪ್ಪದಕೇರಿ ಶಿವಾಲಯ ಉದ್ಯಾನವನ ಧಾರವಾಡ, ಚಿಕ್ಕವೀರಯ್ಯನ ಪ್ಲಾಟ್ (ಗುರುದತ್ತ ಭವನ ಎದುರು) ಉದ್ಯಾನವನ ಹುಬ್ಬಳ್ಳಿ,
11 ದ್ವಿತೀಯ (ಬೃಂದಾವನ ಕಾಲನಿ(ವಿಶ್ವೇಶ್ವರನಗರ ಹತ್ತಿರ) ಉದ್ಯಾನವನ ಹುಬ್ಬಳ್ಳಿ, ಮಹಾವೀರ ಕಾಲನಿ ಉದ್ಯಾನವನ ಹುಬ್ಬಳ್ಳಿ, ಶೆಟ್ಟರ ಲೇಔಟ್ ಉದ್ಯಾನವನ ಹುಬ್ಬಳ್ಳಿ, ಬನಶಂಕರಿ ಬಡಾವಣೆ ಉದ್ಯಾನವನ ಹುಬ್ಬಳ್ಳಿ, ಕುಮಾರ ಪಾರ್ಕ ಉದ್ಯಾನವನ ಹುಬ್ಬಳ್ಳಿ, ರೇಣುಕಾನಗರ ಉದ್ಯಾನವನ ಹುಬ್ಬಳ್ಳಿ, ಶ್ರೀರಾಮ ಕಾಲನಿ ಉದ್ಯಾನವನ ಹುಬ್ಬಳ್ಳಿ, ಬಾಲಭವನ ಉದ್ಯಾನವನ ಹುಬ್ಬಳ್ಳಿ, ಶಿರೂರು ಪಾರ್ಕ 1ನೇ ಹಂತದ ಉದ್ಯಾನವನ ಹುಬ್ಬಳ್ಳಿ, ನಾಡಗೌಡ ಬಡಾವಣೆ ಉದ್ಯಾನವನ ಹುಬ್ಬಳ್ಳಿ) ಒಟ್ಟಾರೆಯಾಗಿ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಗೆ ಉದ್ಯಾನವನಗಳ ವಿಭಾಗಕ್ಕೆ 01 ಜನರಲ್ ಚಾಂಪಿಯನ್ ಪ್ರಶಸ್ತಿ ದೊರೆತಿದೆ. ಹಾಗೂ ಫಲ ಪುಷ್ಪ ಪ್ರದರ್ಶನದ ಅಂಗವಾಗಿ ಹೂ-ಕುಂಡಗಳ ವಿಭಾಗದಲ್ಲಿ 17 ಪ್ರಥಮ, 09 ದ್ವಿತೀಯ ಹಾಗೂ ಪಾಲಿಕೆಗೆ ಫಲ ಪುಷ್ಪ ಪ್ರದರ್ಶನದಲ್ಲಿ ರನ್‍ರ್ ಅಪ್ ಪ್ರಶಸ್ತಿ ದೊರೆತಿರುತ್ತದೆ ಎಂದು ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ತೋಟಗಾರಿಕಾ ವಿಭಾಗದ ಕಾರ್ಯನಿರ್ವಾಹಕ ಅಭಿಯಂತರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.