ಬೆಂಗಳೂರು, ಜನವರಿ 26, (ಕರ್ನಾಟಕ ವಾರ್ತೆ) :
ಸರ್ವರಿಗೂ ಸಮಪಾಲು ಧ್ಯೇಯದೊಂದಿಗೆ ಎಲ್ಲರ ಏಳ್ಗೆಗೆ ಬುನಾದಿಯಾಗಿರುವ ನಮ್ಮ ಸಂವಿಧಾನವನ್ನು ನಾವು ಗೌರವಿಸಬೇಕು ಎಂದು ಕರ್ನಾಟಕ ಉಚ್ಚನ್ಯಾಯಾಲಯದ ಹಂಗಾಮಿ ಮುಖ್ಯ ನ್ಯಾಯಮೂರ್ತಿ ಪಿ.ಎಸ್.ದಿನೇಶ್ ಕುಮಾರ್ ತಿಳಿಸಿದರು.
ಅವರು ಇಂದು ಕರ್ನಾಟಕ ಉಚ್ಚನ್ಯಾಯಲಯದಲ್ಲಿ ಹಮ್ಮಿಕೊಳ್ಳಲಾದ 75ನೇ ಗಣರಾಜ್ಯೋತ್ಸವ ಕಾರ್ಯಕ್ರಮದ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.
ಸಂವಿಧಾನ ಶಿಲ್ಪಿ ಡಾ.ಬಾಬಾ ಸಾಹೇಬ ಅಂಬೇಡ್ಕರ್ ಅವರನ್ನು ನಾವು ಈ ಸಂದರ್ಭದಲ್ಲಿ ನೆನಯಬೇಕು. ನಮ್ಮ ದೇಶ ಸ್ವಾತಂತ್ರö್ಯ ಚಳುವಳಿಗಳಲ್ಲಿ ಸಾವಿರಾರು ಜನ ತಮ್ಮ ಪ್ರಾಣತ್ಯಾಗ ಮಾಡಿದ್ದಾರೆ. ಭಾರತ ಈ ದಿನ ಪ್ರಜಾಪ್ರಭುತ್ವ, ಸ್ವಾತಂತ್ರö್ಯ ದೇಶವಾಗಲು ಹಲವು ವರ್ಷ ಬೇಕಾಯಿತು. ನಮ್ಮ ಸಂವಿಧಾನ ಪ್ರಜಾಪ್ರಭುತ್ವ, ಸಮಾಜವಾದ, ಜಾತ್ಯಾತೀತ ಮತ್ತು ರಾಷ್ಟ್ರೀಯ ಸಮಗ್ರತೆಯನ್ನು ಸಾರುತ್ತದೆ. ಮೂಲಭೂತ ಹಕ್ಕುಗಳನ್ನು ಸಂವಿಧಾನದ ಮೂಲ ಅಡಿಪಾಯವೆಂದು ಹೇಳಬಹುದು.
ಕರ್ನಾಟಕ ಉಚ್ಚನ್ಯಾಯಾಲಯ ದೇಶದಲ್ಲಿಯೇ ಅತ್ಯಂತ ಹೆಸರುವಾಸಿ ನ್ಯಾಯಾಲಯಗಳಲ್ಲಿ ಒಂದಾಗಿದೆ. ಸರ್ವರಿಗೂ ನ್ಯಾಯ ಕೊಡುವುದು ಇದರ ಮೂಲ ಆಶಯ. ಲೋಕ್ ಅದಾಲತ್ ಜನತಾ ನ್ಯಾಯಾಲಗಳ ಮೂಲಕ ಜನರಿಗೆ ತ್ವರಿತಗತಿಯಲ್ಲಿ ನ್ಯಾಯ ಕೊಡುವಲ್ಲಿ ಶ್ರಮಿಸುತ್ತದೆ. ಎಲ್ಲರಿಗೂ ಮತ್ತೊಮ್ಮೆ ಗಣರಾಜ್ಯೋತ್ಸವ ಶುಭಾಶಯಗಳನ್ನು ಹಂಗಾಮಿ ಮುಖ್ಯ ನ್ಯಾಯಮೂರ್ತಿಗಳು ಕೋರಿದರು.
ಈ ಸಂದರ್ಭದಲ್ಲಿ ಕರ್ನಾಟಕ ಉಚ್ಚನ್ಯಾಯಾಲಯದ ಹಿರಿಯ ನ್ಯಾಯಾಧೀಶರು ವಕೀಲರು ಉಪಸ್ಥಿತರಿದ್ದರು.