ಬೆಂಗಳೂರು: ಪೀಪಲ್ಸ್ ಫೋರಂ ಫಾರ್ ಕರ್ನಾಟಕ ಎಜುಕೇಷನ್ ನಿಯೋಗ ರಾಷ್ಟ್ರೀಯ ಶಿಕ್ಷಣ ನೀತಿ (NEP)-2020 ನ್ನು ಕರ್ನಾಟಕದಲ್ಲಿ ಮುಂದುವರೆಸುವಂತೆ ರಾಜ್ಯದಂತ ಸಹಿ ಸಂಗ್ರಹ ಅಭಿಯಾನ ನಡೆದಿದ್ದು, ಈ ಜನಾಭಿಪ್ರಾಯದ ವರದಿಯನ್ನು ದಿನಾಂಕ 24/1/2024 ಬುಧವಾರ ಬೆಳಗ್ಗೆ 11.00 ಗಂಟೆಗೆ ರಾಜಭವನ ಬೆಂಗಳೂರಿನಲ್ಲಿ ಗೌರವಾನ್ವಿತ ರಾಜ್ಯಪಾಲರನ್ನು ಬೇಟಿಯಾಗಿ ಚರ್ಚಿಸಲಾಯಿತು. ಕರ್ನಾಟಕದ 34 ಶೈಕ್ಷಣಿಕ ಜಿಲ್ಲೆಗಳ 168 ತಾಲ್ಲೂಕುಗಳಲ್ಲಿ ಶಿಕ್ಷಕರು, ವಿದ್ಯಾರ್ಥಿಗಳು, ಪೋಷಕರು ಮತ್ತು ವಿದ್ಯಾರ್ಥಿಗಳಿಂದ NEP ಪರವಾಗಿ ಒಟ್ಟು 10,16,080 ಸಹಿ ಆಗಿದ್ದು, ಇದರ ವಿಸ್ತೃತ ವರದಿಯನ್ನು ಘನವೆತ್ತ ರಾಜ್ಯಪಾಲರಿಗೆ ಸಲ್ಲಿಸಲಾಯಿತು. ಈ ನಿಯೋಗದಲ್ಲಿ ಶಿಕ್ಷಣ ತಜ್ಞರಾದ ಪ್ರೊ. ಮಲ್ಲೇಪುರಂ ಜಿ ವೆಂಕಟೇಶ, ಪ್ರೊ. ರವೀಂದ್ರ ರೇಶ್ಮಿ, ಬಿ ಸಿ ನಾಗೇಶ, ಅರುಣ ಶಹಾಪುರ, ಪ್ರೊ. ನಂದಿನಿ ಲಕ್ಷ್ಮೀಕಾಂತ, ಪ್ರೊ. ವೀರೇಶ ಬಾಳಿಕಾಯಿ, ಸಂದೀಪ ಬೂದಿಹಾಳ, ಡಾ ಗಿರೀಶ ತೆಗ್ಗಿನಮಠ, ಡಾ ಪುನೀತಕುಮಾರ ಬೆನಕನವಾರಿ ಭಾಗವಹಿಸಿದ್ದರು.