Site icon MOODANA Web Edition

ಹುಬ್ಬಳ್ಳಿ ಫೋಟೋ ಹಾಗೂ ವೀಡಿಯೋಗ್ರಾಫರ್ ಸಂಘದ ಕಚೇರಿಯಲ್ಲಿ ರಾಮೋತ್ಸವ

ಹುಬ್ಬಳ್ಳಿ – 24. ಹುಬ್ಬಳ್ಳಿ ಫೋಟೋ ಹಾಗು ವೀಡಿಯೋಗ್ರಾಫರ್ ಸಂಘದ ಕಚೇರಿಯಲ್ಲಿ ರಾಮೋತ್ಸವ ವನ್ನು ರಾಮನಿಗೆ ಪೂಜೆ ಸಲ್ಲಿಸುವ ಮುಖಾಂತರ ಆಚರಿಸಲಾಯಿತು. ಸಮಾರಂಭದಲ್ಲಿ ವಿಶೇಷ ಅತಿಥಿಗಳಾಗಿ ವಾಣಿಜ್ಯ ತೆರಿಗೆ ಸಹ ಆಯುಕ್ತರಾದ ಷಣ್ಮುಖ ಕೋಳೂರು ಹಾಗೂ ಆಧ್ಯಾತ್ಮಿಕ ಚಿಂತನೆಗಳುಳ್ಳ ಸುಧೀಂದ್ರ ಕಸಲ್ ಇವರು ಆಗಮಿಸಿದ್ದರು.
 ಷಣ್ಮುಖ ಕೋಳೂರ ಇವರು ಮಾತನಾಡುತ್ತಾ ಐದುನೂರು ವರ್ಷದ ನಂತರ ಶ್ರೀರಾಮ ಅಯೋಧ್ಯೆಗೆ ಮರಳಿದ್ದಾನೆ ನಮ್ಮೆಲ್ಲರ ಜೀವಿತಕಾಲದಲ್ಲಿ ಅಯೋಧ್ಯೆಯಲ್ಲಿ ಭವ್ಯವಾದ ಶ್ರೀರಾಮ ಮಂದಿರ ಲೋಕಾರ್ಪಣೆಗೊಂದಿದೆ ನಾವೆಲ್ಲರೂ ಭಾಗ್ಯವಂತರು ಎಂದು ಹೇಳಿದರು
  ಇನ್ನೊಬ್ಬ ಅತಿಥಿಯಾದ ಸುಧೀಂದ್ರ ಕಸಲ್ ಇವರು ಮಾತನಾಡುತ್ತಾ ರಾಮನ ಆದರ್ಶವನ್ನು ಗುಣಗಾನ ಮಾಡಿದರು ಅಲ್ಲದೆ ರಾಮಾಯಣವನ್ನು ಸಂಕ್ಷಿಪ್ತದಲ್ಲಿ ಸಂಪೂರ್ಣವಾಗಿ ವ್ಯಕ್ತಪಡಿಸಿದರು.
  ಸಂಘದ ಮಾಜಿ ಅಧ್ಯಕ್ಷರಾದ ಇಂದೂಧರ್ ಸಾಲಿ ಇವರು ಮಾತನಾಡುತ್ತಾ ಸಂಘದಲ್ಲಿ ಯಾವತ್ತೂ ಕೇವಲ ಫೋಟೋಗ್ರಾಫಿ ಸಂಬಂಧ ಕಾರ್ಯಕ್ರಮಗಳನ್ನ ಆಯೋಜಿಸುತ್ತಿದ್ದರು ಇದೇ ಮೊದಲ ಬಾರಿ ವಿಶೇಷವಾಗಿ ರಾಮೋತ್ಸವವನ್ನು ಆಚರಿಸುತ್ತಿದ್ದು ನನಗೆಲ್ಲ ಬಹಳ ಖುಷಿ ತಂದಿತು ಎಂದು ಹೇಳಿದರು.
ಸಂಘದ ಅಧ್ಯಕ್ಷರಾದ ಕಿರಣ ಬಾಕಳೆ ಇವರು ಮಾತನಾಡುತ್ತಾ ಈ ಕಾರ್ಯಕ್ರಮವನ್ನು ಆಯೋಜಿಸಲು ಸಂಘದ ಸದಸ್ಯರೇ ಕಾರಣೀಕರ್ತರು ಅವರ ಉತ್ಸಾಹವನ್ನು ವ್ಯಕ್ತಪಡಿಸಿದ್ದರಿಂದ ನಾವು ರಾಮೋತ್ಸವವನ್ನು ಆಚರಿಸಿದ್ದು ಸದಸ್ಯರಿಗೆ ಧನ್ಯವಾದ ಹೇಳಿದರು.
ರಾಮೋತ್ಸವ ಕಾರ್ಯಕ್ರಮದಲ್ಲಿ ಸಂಘದ ಉಪಾಧ್ಯಕ್ಷರಾದ ದಿನೇಶ್ ದಾಬಡೆ, ಕಾರ್ಯದರ್ಶಿಯಾದ ರವೀಂದ್ರ ಕಾಟಿಗರ್ ಖಜಾಂಚಿಯಾದ ಅನಿಲ್ ತುರಮರಿ ಹಾಗೂ ಸಂಘದ ಪದಾಧಿಕಾರಿಗಳಾದ ಆನಂದ್ ಮೆಹರ್ವಾಡೆ ರಾಕೇಶ್ ಪವಾರ್ ವಿಜಯ್ ಮೆಹರ್ವಾಡೆ ಆನಂದ ರಾಜೋಳ್ಳಿ ವಜಿರ್ ಅಹಮದ್ ಸುಜಾತಾ ಪೋದ್ದಾರ್ ಪ್ರಕಾಶ್ ಬಸವಾ ಅಲ್ಲಾಭಕ್ಷ ಅಧೋನಿ ರಶೀದ್ ಹಾಗೂ ಸಂಘದ ಸದಸ್ಯರು ಪಾಲ್ಗೊಂಡಿದ್ದರು ಕಾರ್ಯಕ್ರಮದ ನಂತರ ಮಹಾಪ್ರಸಾದವನ್ನು ಸಾರ್ವಜನಿಕರಿಗೆ ವಿತರಿಸಲಾಯಿತು

Exit mobile version