ಹುಬ್ಬಳ್ಳಿ . ನಗರದ ಗೋಕುಲ್ ರಸ್ತೆ , ಶ್ರೇಯಾ ಪಾರ್ಕನಲ್ಲಿ ಶ್ರೀರಾಮ್ ಉತ್ಸವವನ್ನು ಸಂಭ್ರಮದಿಂದ ಆಚರಿಸಲಾಯಿತು.
ಕಾಲೋನಿಯ ಸುತ್ತಲೂ ರಸ್ತೆಗಳಿಗೆ ಮಹಿಳೆಯರು ರಸ್ತೆಗಳಲ್ಲಿ ರಂಗೋಲಿ ಚಿತ್ತಾರ ಬಿಡಿಸಿ, ತಳಿರು ತೋರಣಗಳನ್ನು ಕಟ್ಟಿ ಹಬ್ಬದ ವಾತಾವರಣ ನಿರ್ಮಿಸಿ ಸಂಭ್ರಮಿಸಿದರು. ಶ್ರೀರಾಮದೇವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಶ್ರೀರಾಮ ದೇವರಿಗೆ ಜೈಕಾರಗಳನ್ನು ಹಾಕಿದರು.
ನಂತರ ನಡೆದ ಸಭೆಯಲ್ಲಿ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಮಹಾಪೌರರಾದ ಶ್ರೀಮತಿ ವೀಣಾ ಚೇತನ್ ಬರದ್ವಾಡ , ಮಾಜಿ ಕಾರ್ಪೊರೇಟರ್ ಮಹೇಶ್ ಬುರ್ಲಿ, ವೀರೇಶ ಸಂಗಳದ , ಶ್ರೇಯಾ ಪಾರ್ಕ್ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಲಿಂಗರಾಜ ಧಾರವಾಡ್ ಶೆಟ್ಟರ್, ಕಾರ್ಯದರ್ಶಿ ಮುಕುಂದ ರಾಯಬಾಗಿ, ಹಾಲಸ್ವಾಮಿ ಕಂಪ್ಲಿಮಠ, ಮೋಹನ್ ರಂಗ್ರೇಜ, ರಮೇಶ್ ರಂಗರೇಜ, ಸುನಿಲ್ ಸೋಳಂಕೆ, ಖೋಡೆ, ವಿನೋದ ದಲ್ಬಂಜನ್, ವಿಷ್ಣು ದಲ್ಬಂಜನ್, ಅಶೋಕ್ ಬಡಿಗೇರ್, ಅಶೋಕ ಕಬಾಡೆ, ಜಾಧವ್, ಗೂಳಪ್ಪ ಕೆಂಭಾವಿ, ಬದ್ಧಿ, ಅಭಿಜಿತ್ ಮಾಂಡವಕರ್, ಸುನಿಲ್ ನಿರಂಜನ್ ವಿನೋದ್ ನಿರಂಜನ್, , ಮಠದ, ಬಂಕಾಪುರ್, ಡಿಜಿ ಕುಲಕರ್ಣಿ, ವಿಠ್ಠಲ್ ಕುಲಕರ್ಣಿ, ವಿಶ್ವರೂಪ, ಅಶೋಕ್ ಬೀಳಗಿ, ಉಚಗಾಂಕರ್ ಮತ್ತು ಮುಂತಾದವರು ಉಪಸ್ಥಿತರಿದ್ದರು.
ಕಾಲೋನಿಯ ಎಲ್ಲಾ ಮಹಿಳಾ ಸದಸ್ಯರು ಶ್ರೇಯ ಪಾರ್ಕಿನಿಂದ ಮೆರವಣಿಗೆ ಮುಖಾಂತರ ಶ್ರೀ ಗಣೇಶ ದೇವಸ್ಥಾನದವರೆಗೆ ಶ್ರೀ ರಾಮನ ಜೈಕಾರ ಹಾಕುತ್ತಾ ಶ್ರೀ ಗಣೇಶ ದೇವರ ಆಶೀರ್ವಾದ ಪಡೆದು ಉತ್ಸಾಹದಿಂದ ಭಾಗವಹಿಸಿದ್ದರು, ಎಂದು ಶ್ರೇಯಾ ಪಾರ್ಕ್ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಲಿಂಗರಾಜ ಧಾರವಾಡ್ ಶೆಟ್ಟರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
