28.6 C
Karnataka
Thursday, February 6, 2025
spot_img

ಹುಬ್ಬಳ್ಳಿ : ಕಲ್ಯಾಣನಗರದಲ್ಲಿ ಶ್ರೀ ರಾಮನ ಪೂಜೆ ಹಾಗೂ ದೀಪೋತ್ಸವ

ಹುಬ್ಬಳ್ಳಿ . 24 – ಅಯೋಧ್ಯೆಯಲ್ಲಿ ಶ್ರೀ ರಾಮನ ಜನ್ಮ ಭೂಮಿಯಲ್ಲಿ ಹೊಸದಾಗಿ ನಿರ್ಮಿಸಲಾದ ಭವ್ಯವಾದ ಶ್ರೀ ರಾಮ ಮಂದಿರದಲ್ಲಿ “ಬಾಲರಾಮನ ಪ್ರಾಣ ಪ್ರತಿಷ್ಠಾನದ” ನಿಮಿತ್ತ ಇಲ್ಲಿನ “ಕಲ್ಯಾಣ ನಗರ ನಿವಾಸಿಗಳ ಸಂಘ”ದವರು ಪ್ರಧಾನಿ ಮೋದಿಯವರ ಕರೆಗೆ ಓಗೊಟ್ಟು ರಂಗಮಂದಿರದಲ್ಲಿ ಇತ್ತೀಚೆಗೆ ಶ್ರೀ ರಾಮನ ಪೂಜೆ ಹಾಗೂ ದೀಪೋತ್ಸವವನ್ನು ಹಮ್ಮಿಕೊಡಿದ್ದರು.

ದೀಪೋತ್ಸವದ ಉದ್ಘಾಟಕರಾಗಿ ಆಗಮಿಸಿದ್ದ ಶಾಸಕರಾದ ಮಹೇಶ ಟೆಂಗಿನಕಾಯಿಯವರು ಮಾತನಾಡಿ, ನಮ್ಮೆಲ್ಲರ ನೆಚ್ಚಿನ ಪ್ರಧಾನಿ ನರೇಂದ್ರ ಮೋದಿಯವರು 500 ವರ್ಷಗಳ ಐತಿಹಾಸಿಕ ಹೋರಾಟದ ಫಲವಾಗಿ ಶ್ರೀ ರಾಮನ ಜನ್ಮ ಭೂಮಿಯಲ್ಲಿ ಭವ್ಯವಾದ ಶ್ರೀ ರಾಮ ಮಂದಿರವನ್ನು ನಿರ್ಮಿಸಿ ಅದರಲ್ಲಿ ಸ್ವತ: ಪೂಜಾ ಅನುಷ್ಠಾನವನ್ನು ಕೈಗೊಂಡು “ಬಾಲರಾಮನ ಪ್ರಾಣ ಪ್ರತಿಷ್ಠಾಪನಾ ಪೂಜೆ”ಯಲ್ಲಿ ಭಾಗವಹಿಸಿ ಪೂಜೆಯನ್ನು ಸಾಂಗವಾಗಿ ನೆರವೇರಿಸಿದ್ದಕ್ಕೆ ಪ್ರಧಾನಿ ನರೇಂದ್ರ ಮೋದಿಯವರಿಗೆ ಅಭಿನಂದನೆಗಳನ್ನು ಸಲ್ಲಿಸಿದರು.

ನಂತರ ಮಾತನಾಡುತ್ತ, ದೀಪಾವಳಿಯ ಮಾದರಿಯಲ್ಲಿ ದೀಪೋತ್ಸವವನ್ನು ಆಚರಿಸಿದ್ದು ಸಂತಸ ತಂದಿದೆ ಎಂದು ಸಂಘದವರನ್ನು ಅಭಿನಂದಿಸಿದರು.

ಇನ್ನೊಬ್ಬ ಉದ್ಘಾಟಕರಾಗಿ ಆಗಮಿಸಿದ್ದ ಕಾರ್ಪೋರೇಟರ್ ಉಮೇಶಗೌಡ ಕೌಜಗೇರಿಯವರು ಮಾತನಾಡಿ ನಮ್ಮೆಲ್ಲರ ನೆಚ್ಚಿನ ಶಾಸಕರಾದ ಮಹೇಶ ಟೆಂಗಿನಕಾಯಿಯವರು ಸುಮಾರು 15 ತಾಸುಗಳಿಂದ ಅವಿರತವಾಗಿ ದಣಿವರಿಯದೇ ಇಂಥ 135 ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದು ತುಂಬಾ ಸಂತೋಷ ತಂದಿದೆ ಎಂದು ಬಣ್ಣಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಲ್ಯಾಣನಗರ ನಿವಾಸಿಗಳ ಸಂಘದ ಅಧ್ಯಕ್ಷರಾದ ಕೆ.ಆರ್. ಬಳ್ಳಾರಿಯವರು ವಹಿಸಿದ್ದರು.

ಸಂಘದ ಉಪಾಧ್ಯಕ್ಷರಾದ ವಿಶ್ವೇಶ್ವರಯ್ಯ ಹಿರೇಮಠ ಇವರು ಈ ಕಾರ್ಯಕ್ರಮದ ನಿರೂಪಣೆ ಮಾಡಿದರು.

ಕಲ್ಯಾಣನಗರ ನಿವಾಸಿಗಳ ಸಂಘದ ಎಲ್ಲ ಪದಾಧಿಕಾರಿಗಳು, ಎಲ್ಲ ಸದಸ್ಯರು ಹಾಗೂ ಕಲ್ಯಾಣಿ ಮಹಿಳಾ ಮಂಡಳದ ಎಲ್ಲ ಪದಾಧಿಕಾರಿಗಳು, ಎಲ್ಲ ಸದಸ್ಯೆಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

Don’t miss your news!

We don’t spam! Read our privacy policy for more info.

Don’t miss your news!

We don’t spam! Read our privacy policy for more info.

Don’t miss your news!

We don’t spam! Read our privacy policy for more info.

Don’t miss your news!

We don’t spam! Read our privacy policy for more info.

Related Articles

Stay Connected

0FansLike
3,912FollowersFollow
0SubscribersSubscribe
- Advertisement -spot_img

Latest Articles

error: Content is protected !!