Site icon MOODANA Web Edition

ಜನವರಿ 25 ರಿಂದ 28 ರವರೆಗೆ ಇಂಡಿಯಾ – ಜಾರ್ಜಿಯಾ ಸಾಂಸ್ಕೃತಿಕ ವಿನಿಮಯ ಉತ್ಸವ

ಬೆಂಗಳೂರು, ಜನವರಿ 24 (ಕರ್ನಾಟಕ ವಾರ್ತೆ):

ಜನವರಿ 25 ರಿಂದ 28 ರವರೆಗೆ ಇಂಡಿಯಾ – ಜಾರ್ಜಿಯಾ ಸಾಂಸ್ಕೃತಿಕ ವಿನಿಮಯ ಉತ್ಸವವನ್ನು ಹಮ್ಮಿಕೊಳ್ಳಲಾಗಿದೆ ಎಂದು ಆಂಧ್ರಪ್ರದೇಶದ ಸತ್ಯಸಾಯಿ ಜಿಲ್ಲೆಯ ಬಿಇಎಸ್‍ಟಿ ಇನ್ನೋವೇಶನ್ ವಿಶ್ವವಿದ್ಯಾಲಯದ ಅಧ್ಯಕ್ಷರಾದ ಭರತ್ ಲಾಲ್ ಮೀನಾ ತಿಳಿಸಿದರು.

ಇಂದು ಖಾಸಗಿ ಹೋಟೆಲ್‍ನಲ್ಲಿ ಹಮ್ಮಿಕೊಳ್ಳಲಾದ ಪತ್ರಿಕಾಗೋಷ್ಠಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಭಾರತೀಯ ಇಂಜಿನಿಯರಿಂಗ್ ವಿಜ್ಞಾನ ಮತ್ತು ತಂತ್ರಜ್ಞಾನ ಇನ್ನೋವೇಷನ್ ವಿಶ್ವವಿದ್ಯಾಲಯ, ಸತ್ಯಸಾಯಿ ಜಿಲ್ಲೆ, ಆಂಧ್ರಪ್ರದೇಶ, ಇಂಡಿಯಾ ಫೌಂಡೇಷನ್, ವಲ್ರ್ಡ್ ಫೋರಮ್ ಫಾರ್ ಎಜುಕೇಷನ್, ಜಾರ್ಜಿಯಾ ಸಾಂಸ್ಕೃತಿಕ ಸ್ವಯಂಸೇವಾ ಸಂಸ್ಥೆ ಇವರ ಸಂಯುಕ್ತಾಶ್ರಯಲ್ಲಿ ಇಂಡಿಯಾ ಜಾರ್ಜಿಯಾ ಸಾಂಸ್ಕೃತಿಕ ಉತ್ಸವವನ್ನು ಹಮ್ಮಿಕೊಳ್ಳಲಾಗಿದೆ.

ಜನವರಿ 25 ರಿಂದ ಹೋಟೆಲ್ ಲಲಿತ್ ಅಶೋಕದಲ್ಲಿ ಉದ್ಘಾಟನಾ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಮುಖ್ಯ ಅತಿಥಿಗಳಾಗಿ ಇಂಡಿಯಾ ಫೌಂಡೇಶನ್‍ನ ಅಧ್ಯಕ್ಷರಾದ  ಡಾ. ರಾಮ್ ಮಾಧವ್, ಐಸಿಸಿಆರ್‍ನ ಡಿಡಿಜಿ ಅಂಜು ರಂಜನ್ ಹಾಗೂ ಇನ್ನಿತರ ಗಣ್ಯರು ಭಾಗವಹಿಸಲಿದ್ದಾರೆ. ಜಾರ್ಜಿಯಾದಿಂದ ಸುಮಾರು 40 ಕಲಾವಿದರು ಕಾರ್ಯಕ್ರಮದಲ್ಲಿ ಈ ಉತ್ಸವದಲ್ಲಿ ಪಾಲ್ಗೊಳ್ಳಲಿದ್ದಾರೆ. ನಂತರ ವಿವಿಧ ಗಣ್ಯರ ಉಪನ್ಯಾಸ ಕಾರ್ಯಕ್ರಮವಿರುತ್ತದೆ. ಸಂಜೆ 4-30ಕ್ಕೆ ಜಾರ್ಜಿಯಾ ಕಲಾವಿದರಿಂದ ಸಾಂಸ್ಕೃತಿಕ ಕಾರ್ಯಕ್ರಮವಿರುತ್ತದೆ ಎಂದರು.

ಜನವರಿ 26ರಂದು ಗಣರಾಜ್ಯೋತ್ಸವ ಕಾರ್ಯಕ್ರಮವನ್ನು ಆಂಧ್ರಪ್ರದೇಶದ ಸತ್ಯಸಾಯಿ ಜಿಲ್ಲೆಯ ಬಿ.ಇ.ಎಸ್.ಟಿ ವಸತಿ ಇನ್ನೋವೇಷನ್ ವಿಶ್ವವಿದ್ಯಾಲಯದಲ್ಲಿ ಆಯೋಜಿಸಲಾಗಿದ್ದು, ಇಲ್ಲಿ ಜಾರ್ಜಿಯಾ ಹಾಗೂ ಆಂಧ್ರಪ್ರದೇಶದ ಕಲಾ ತಂಡಗಳು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿಕೊಡಲಿರುವರು. ಅಲ್ಲದೆ ಜನವರಿ 27 ಹಾಗೂ 28 ರಂದು ಜಾರ್ಜಿಯಾ ಕಲಾವಿದರಿಂದ ಬೆಂಗಳೂರು ಮತ್ತು ಮೈಸೂರಿನಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.

ಈ ಕಾರ್ಯಕ್ರಮದ ಮುಖ್ಯ ಉದ್ದೇಶವೆಂದರೆ ಭಾರತ – ಜಾರ್ಜಿಯಾ ಸಾಂಸ್ಕøತಿಕ ಸಂಬಂಧವನ್ನು ಭದ್ರಗೊಳಿಸುವುದು, ಸಾಂಸ್ಕøತಿಕ ವಿನಿಮಯದಿಂದ ಐತಿಹಾಸಿಕ ಕೊಂಡಿಯನ್ನು ಭದ್ರಗೊಳಿಸಿ ಉಭಯ ದೇಶಗಳ ಸಂಸ್ಕøತಿ ಮತ್ತು ಪರಂಪರೆಯನ್ನು ಕಾಪಾಡುವುದು ಆಗಿದೆ. ಸಾಂಸ್ಕøತಿಕವಾಗಿ ಅಷ್ಟೇ ಅಲ್ಲದೇ ಶೈಕ್ಷಣಿಕ ಪ್ರಸ್ತಾವನೆಯನ್ನು ಸಹ ಈ ಸಮಾವೇಶ ಮಾಡುತ್ತಿದೆ. ಈ ದೇಶಗಳ ಇತಿಹಾಸ, ಸಾಹಿತ್ಯ, ಜೀವನ ಶೈಲಿ, ಶಿಕ್ಷಣ, ಕಲಾಪ್ರಕಾರ, ಸಂಸ್ಕøತಿ ಇತ್ಯಾದಿಗಳನ್ನು ಹಂಚಿಕೊಳ್ಳುವುದು ಸಹ ಕಾರ್ಯಕ್ರಮದ ಮುಖ್ಯ ಭಾಗವಾಗಿದೆ. ಈ ಎರಡು ದೇಶಗಳ ಪ್ರವಾಸೋದ್ಯಮಕ್ಕೆ ಮೆರಗು ಬರುವುದಲ್ಲದೆ, ಸಾರ್ವಜನಿಕರಿಗೆ ಇವುಗಳ ಸಂಸ್ಕøತಿಯ ಅರಿವು ಉಂಟಾಗುತ್ತದೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಆಂಧ್ರ ಪ್ರದೇಶದ ಸತ್ಯಸಾಯಿ ಜಿಲ್ಲೆಯ ಬಿ.ಇ.ಎಸ್.ಟಿ ವಸತಿ ಇನ್ನೋವೇಷನ್ ವಿಶ್ವವಿದ್ಯಾಲಯದ ಕುಲಪತಿಗಳಾದ  ಡಾ. ರೂಪ ವಾಸುದೇವನ್ ಉಪಸ್ಥಿತರಿದ್ದರು.

Exit mobile version