ಹುಬ್ಬಳ್ಳಿ. 13 – ದಿ ನಗರಕರ ಲೈಬ್ರರಿ ಆರ್ಟಿಸ್ಟ್ ಫೋರಮ್ ವತಿಯಿಂದ ಪ್ರತಿ ತಿಂಗಳು ದಿ ನಗರಕರ ಲೈಬ್ರರಿಯ ಸಭಾಂಗಣದಲ್ಲಿ ನಡೆಯುವ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ಕಾರ್ಯಕ್ರಮದಲ್ಲಿ ದಿ.ಡಾ.ಸುಲಭಾ ದತ್ತ ನೀರಲಗಿ ಅವರ ಸ್ಮರಣಾರ್ಥ ಸ್ವರ ಶ್ರದ್ಧಾಂಜಲಿ ಹಾಗೂ146ನೇ ಕಾರ್ಯಕ್ರಮದ ಈ ತಿಂಗಳು 13-01-2024ರ ಶನಿವಾರ ಹುಬ್ಬಳ್ಳಿಯ ಹಿರಿಯ ಗಾಯಕರು ಆರ್ಟಿಸ್ಟ್ ಫೋರಮ್ ನ ಕಾರ್ಯದರ್ಶಿ ಪಂಡಿತ ಅಶೋಕ ನಾಡಿಗೇರ ಅವರು ಶುದ್ಧ ಕಲ್ಯಾಣ ರಾಗದಲ್ಲಿ ಮಂಗಲ ಗಾವೋ ಎಂಬ ಬಢಾ ಖಯಾಲ ಹಾಗೂ ಅಭಂಗ ಮತ್ತು ಅನೇಕ ಭಕ್ತಿ ಗೀತೆಗಳನ್ನು ಪ್ರಸ್ತುತಪಡಿಸಿದರು. ಇವರೊಂದಿಗೆ ಅತ್ಯಂತ ಸಮರ್ಥವಾಗಿ ಕೃಷ್ಣಕುಮಾರ ಕುಲಕರ್ಣಿ ತಬಲಾ, ಬಸು ಹಿರೇಮಠ ಹಾರ್ಮೋನಿಯಂ ಪರುಶುರಾಮ ಭಜಂತ್ರಿ, ವಾಸುದೇವ ಕಾರೇಕರ ತಾನಪೂರ ಸಾಥ್ ನೀಡಿದರು , ಶ್ರೀಮತಿ ಮಾನಸಾ ಶಾಸ್ತ್ರೀ ಅವರ ಗಾಯನ ಕಾರ್ಯಕ್ರಮ ಕೂಡ ನಡೆಯಿತು, ಕಾರ್ಯಕ್ರಮದಲ್ಲಿ ವಿಜಯ ಬಿಜ್ಜೂರ್, ನಾಗಪ್ರಸಾದ ಕುಂದಾಪುರ, ಡಾ.ನಾಗಲಿಂಗ ಮುರಗಿ, ಶ್ರೀಮತಿ ವೀಣಾ ಹಾನಗಲ್, ದತ್ತ ನೀರಲಗಿ , ಡಾ.ಸುಲಭಾ ದತ್ತ ನೀರಲಗಿ ಸಹೋದರ ಡಂಬಳ ಸೇರಿದಂತೆ ಅನೇಕ ಸಂಗೀತ ಪ್ರೇಮಿಗಳು ಉಪಸ್ಥಿತರಿದ್ದರು. ಶಿವಸ್ವಾಮಿ ಹಿರೇಮಠ ನಿರೂಪಿಸಿದರು ಎಮ್. ಆರ್. ರಾಮನಗೌಡ್ರ ವಂದಿಸಿದರು.