Site icon MOODANA Web Edition

ನಿಜಶರಣ ಶ್ರೀ ಅಂಬಿಗರ ಚೌಡಯ್ಯ ಜಯಂತಿ ಪೂರ್ವಭಾವಿ ಸಭೆ

ಹುಬ್ಬಳ್ಳಿ (ಕರ್ನಾಟಕ ವಾರ್ತೆ) ಜ 12: ಪ್ರತಿ ವರ್ಷದಂತೆ ಈ ವರ್ಷವು ಜನೇವರಿ 21 ರಂದು ತಹಶೀಲ್ದಾರ್ ಕಾರ್ಯಾಲಯದಲ್ಲಿ ನಿಜಶರಣ ಶ್ರೀ ಅಂಬಿಗರ ಚೌಡಯ್ಯ ಜಯಂತಿಯನ್ನು ಸಾಂಕೇತಿಕವಾಗಿ ಆಚರಿಸಲಾಗುತ್ತದೆ ಎಂದು ಹುಬ್ಬಳ್ಳಿ ಗ್ರಾಮೀಣ ತಹಶೀಲ್ದಾರರಾದ ಪ್ರಕಾಶ ನಾಶಿ ಹೇಳಿದರು.
ಇಂದು ತಹಶೀಲ್ದಾರ್ ಕಾರ್ಯಾಲಯದಲ್ಲಿ ನಡೆದ ಜಯಂತಿ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.
ಅಂದು ಬೆಳಿಗ್ಗೆ 10 ಗಂಟೆಗೆ ನಿಜಶರಣ ಶ್ರೀ ಅಂಬಿಗರ ಚೌಡಯ್ಯ ಜಯಂತಿಯನ್ನು ಅವರ ಭಾವ ಚಿತ್ರಕ್ಕೆ ಮಾಲಾರ್ಪಣೆ ಮಾಡುವ ಮೂಲಕ ನೆರವೇರಿಸಲಾಗುವುದು. ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಗುತ್ತದೆ. ಉಪನ್ಯಾಸ ಕಾರ್ಯಕ್ರಮದ ಮುಖಾಂತರ ಮಕ್ಕಳಿಗೆ ನಿಜಶರಣ ಶ್ರೀ ಅಂಬಿಗರ ಚೌಡಯ್ಯ ಅವರ ಬಗ್ಗೆ ತಿಳಿವಳಿಕೆ ನೀಡಲಾಗುವುದು ಎಂದರು.
ಸಭೆಯಲ್ಲಿ ಸಮಾಜದ ಮುಖಂಡರಾದ ಅಶೋಕಕುಮಾರ ಬೆಸ್ತ, ಮಂಜುನಾಥ ಬೈರಣ್ಣವರ, ಗುರಪ್ಪ ಜಿಡ್ಡಿಯವರ, ರಾಮಣ್ಣ ಗುಗ್ಗರಿ, ಗುರಪ್ಪ ಕರಬಣ್ಣನವರ, ಯಲ್ಲಪ್ಪ ಬಾರಕೇರ, ಯಲ್ಲಪ್ಪ ಅಳಗವಾಡಿ, ಬಸವರಾಜ ದಾಸನಾಯ್ಕ, ಸುರೇಶ ಹೆಬ್ಬಳ್ಳಿ, ರವಿ ಹಡಗಲಿ, ಮಂಜುನಾಥ, ಉಳವಪ್ಪ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಸಿಬ್ಬಂದಿ ಇತರರು ಉಪಸ್ಥಿತರಿದ್ದರು.

Exit mobile version