Site icon MOODANA Web Edition

ಡಾ. ಶಾಲಿನಿ ರಜನೀಶ್ ಅವರನ್ನು ಭೇಟಿ ಮಾಡಿದ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಸೌರಭ್ ಕುಮಾರ್

ಬೆಂಗಳೂರು, ಜನವರಿ 12 (ಕರ್ನಾಟಕ ವಾರ್ತೆ):

ವಿದೇಶಾಂಗ ವ್ಯವಹಾರಗಳ ಸಚಿವಾಲಯದ (ಯುರೋಪಿಯನ್ ಒಕ್ಕೂಟ, ಬೆಲ್ಜಿಯಂ ಮತ್ತು ಲಕ್ಸೆಂಬರ್ಗ್ ಭಾರತದ ನಿಯೋಜಿತ ರಾಯಭಾರಿ)  ಕಾರ್ಯದರ್ಶಿ ಸೌರಭ್ ಕುಮಾರ್, ಐಎಫ್‍ಎಸ್ ಅವರು ಇಂದು ಬೆಳಗ್ಗೆ 10.00 ಗಂಟೆಗೆ  ವಿಧಾನಸೌಧದಲ್ಲಿ ಅಪರ ಮುಖ್ಯ ಕಾರ್ಯದರ್ಶಿ ಹಾಗೂ ಅಭಿವೃದ್ಧಿ ಆಯುಕ್ತರಾದ ಡಾ. ಶಾಲಿನಿ ರಜನೀಶ್ ಅವರನ್ನು ಸೌಹಾರ್ದಯುತವಾಗಿ ಭೇಟಿ ಮಾಡಿ ಯುರೋಪಿಯನ್ ನಡುವಿನ ವ್ಯಾಪಾರ ಸಂಬಂಧಗಳನ್ನು ಹೆಚ್ಚಿಸುವ ಕುರಿತು ಚರ್ಚಿಸಿದರು

ಭಾರತವು 8.38 ಶತಕೋಟಿ ಯು.ಎಸ್ ಡಾಲರ್ ಮೌಲ್ಯದ ರಫ್ತುಗಳನ್ನು ಹೊಂದಿದೆ. ಅದರಲ್ಲಿ ಕರ್ನಾಟಕವು ಶೇಕಡ 5.8% (510 ಮಿಲಿಯನ್ ಯು.ಎಸ್. ಡಾಲರ್) ಪಾಲನ್ನು ಹೊಂದಿದೆ. ಕರ್ನಾಟಕವು ಭಾರತದ ರಫ್ತಿನ 100% ರಫ್ತುಗಳನ್ನು ಬೆಲ್ಜಿಯಂಗೆ ಗೋಡಂಬಿ ಕಾಯಿ ಚಿಪ್ಪಿನ ದ್ರವ ಮತ್ತು ಮೊಲಾಸಸ್ ರಫ್ತು ಮಾಡುತ್ತದೆ ಮತ್ತು ಶೇಕಡ 89% ಕಾಫಿಯನ್ನು ರಫ್ತು ಮಾಡುತ್ತದೆ. ಮಾಹಿತಿ ತಂತ್ರಜ್ಞಾನದಲ್ಲಿ ಪ್ರಮುಖ ರಫ್ತುದಾರರಾಗಿರುವ ಕರ್ನಾಟಕವು ಪ್ರಮುಖ ಪಾತ್ರವನ್ನು ವಹಿಸಿದೆ.

ಕರ್ನಾಟಕದಿಂದ ಯುರೋಪಿಯನ್ ಒಕ್ಕೂಟಕ್ಕೆ ವಜ್ರ, ಆಹಾರ ಸಂಸ್ಕರಣೆ ಮತ್ತು ಕಠಿಣಚರ್ಮಿಗಳ ರಪ್ತಿನ ಬಗ್ಗಯೂ ಸಹ ಚರ್ಚಿಸಲಾಯಿತು. ಈ ಸಂದರ್ಭದಲ್ಲಿ  ಹಿರಿಯ ಐಎಎಸ್ ಅಧಿಕಾರಿಗಳಾದ ಜಾವೇದ್ ಅಕ್ತರ್, ಗೌರವ್ ಗುಪ್ತಾ, ನಿಲಯ್ ಮಿತಾಶ್, ಶ್ರೀಕರ್ ಮತ್ತು ಇತರರು ಉಪಸ್ಥಿತರಿದ್ದರು

Exit mobile version