Site icon MOODANA Web Edition

ಕರಾಮುವಿ: 2023-24ನೇ ಶೈಕ್ಷಣಿಕ ಸಾಲಿನ ಜನವರಿ ಆವೃತ್ತಿ ಪ್ರವೇಶಾತಿ ಪ್ರಾರಂಭ

ಬೆಂಗಳೂರು, ಜನವರಿ 12 (ಕರ್ನಾಟಕ ವಾರ್ತೆ):

ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯವು 2023-24ನೇ ಶೈಕ್ಷಣಿಕ ಸಾಲಿನ ಜನವರಿ ಆವೃತ್ತಿಯ ಸ್ನಾತಕ/ಸ್ನಾತಕೋತ್ತರ ಕೋರ್ಸ್‍ಗಳಾದ ಬಿ.ಎ., ಬಿ.ಕಾಂ., ಬಿ.ಎಸ್.ಡಬ್ಲ್ಯೂ, ಬಿ.ಎಸ್ಸಿ, ಬಿ.ಬಿ.ಎ, ಬಿ.ಲಿಬ್. ಐ.ಎಸ್ಸಿ, ಮತ್ತು ಎಂ.ಎ., ಎಂ.ಕಾಂ., ಎಂ.ಎಸ್ಸಿ., ಎಂ.ಬಿ.ಎ, ಎಂ.ಎಸ್.ಡಬ್ಲ್ಯೂ., ಎಂ.ಸಿ.ಎ, ಎಂ.ಸಿ.ಜೆ, ಎಂ.ಲಿಬ್.ಐ.ಎಸ್ಸಿ ಹಾಗೂ ಪಿ.ಜಿ. ಡಿಪ್ಲೋಮಾ / ಸರ್ಟಿಫಿಕೇಟ್ ಪ್ರೋಗ್ರಾಮ್ಸ್ ಗಳಿಗೆ ಪ್ರವೇಶಾತಿಯು ಜನವರಿ 10 ರಿಂದ ಪ್ರಾರಂಭವಾಗಿದ್ದು www.ksoumysuru.ac.in ನಲ್ಲಿ ಆನ್‍ಲೈನ್ ಮುಖಾಂತರ ksouportal.com ನಲ್ಲಿ ಪ್ರವೇಶಾತಿ ಅರ್ಜಿಯನ್ನು ಭರ್ತಿ ಮಾಡಿದ ನಂತರ ಅರ್ಜಿಯನ್ನು ಪ್ರಾದೇಶಿಕ ಕೇಂದ್ರದಲ್ಲಿ ಮೂಲ ದಾಖಲಾತಿಗಳ ಪರಿಶೀಲನೆಗೆ ವಿದ್ಯಾರ್ಥಿಗಳು ಹಾಜರಾಗಿ ಶುಲ್ಕ ಪಾವತಿಸಿ ಪ್ರವೇಶಾತಿ ಪಡೆಯಬಹುದು.

ಹೆಚ್ಚಿನ ಮಾಹಿತಿಗಾಗಿ ರೋಹಿತ್.ಹೆಚ್.ಎಸ್. ಪ್ರಾದೇಶಿಕ ನಿರ್ದೇಶಕರು, ಕರಾಮುವಿ ಪ್ರಾದೇಶಿಕ ಕೇಂದ್ರ- 03 (ಯಲಹಂಕ) ಆದಿತ್ಯ ಸಮೂಹ ಶಿಕ್ಷಣ ಸಂಸ್ಥೆಗಳು, ನಂ.12. ಕೋಗಿಲು ಮುಖ್ಯ ರಸ್ತೆ, ಅನ್ನಪೂರ್ಣೇಶ್ವರಿ ದೇವಸ್ಥಾನ ಹಿಂಭಾಗ ಮಾರುತಿನಗರ, ಯಲಹಂಕ, ಬೆಂಗಳೂರು-560064. ದೂರವಾಣಿ ಸಂಖ್ಯೆ : 9880526439, 9019526439, 7337718249 ಮತ್ತು  8217292319 ನ್ನು ಸಂಪರ್ಕಿಸಬಹುದು ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ.

Exit mobile version