19.5 C
Karnataka
Wednesday, February 4, 2026
spot_img

“ಹರ್ಷಕಲಾ”ರಾಷ್ಟ್ರೀಯ ಕೈಮಗ್ಗ ಮೇಳ – 2024

ಬೆಂಗಳೂರು, ಜನವರಿ 10 (ಕರ್ನಾಟಕ ವಾರ್ತೆ):
  ಕೈಮಗ್ಗ ಉತ್ಪನ್ನಗಳ ಮಾರಾಟವನ್ನು ಪೆÇ್ರೀತ್ಸಾಹಿಸಲು ಮಾರುಕಟ್ಟೆ ವೇದಿಕೆಯನ್ನು ಕಲ್ಪಿಸಲು ಭಾರತ ಸರ್ಕಾರದ ಜವಳಿ ಮಂತ್ರಾಲಯ, ಕರ್ನಾಟಕ ಸರ್ಕಾರದ ಕೈಮಗ್ಗ ಮತ್ತು ಜವಳಿ ಇಲಾಖೆ, ಹಾಗೂ ಕಾವೇರಿ ಹ್ಯಾಂಡ್‍ಲೂಮ್ಸ್ ಮಹಾಮಂಡಳದ ಸಂಯುಕ್ತ ಆಶ್ರಯದಲ್ಲಿ ರಾಷ್ಟ್ರೀಯ ಕೈಮಗ್ಗ ಅಭಿವೃದ್ಧಿ (ಎನ್‍ಹೆಚ್‍ಡಿಪಿ) ಯೋಜನೆಯಡಿ “ಹರ್ಷಕಲಾ” ರಾಷ್ಟ್ರೀಯ ಕೈಮಗ್ಗ ಮೇಳ – 2024 ನ್ನು ಜನವರಿ 11 ರಿಂದ 24 ರವರೆಗೆ ಬೆಂಗಳೂರಿನ ವಿಜಯನಗರ ಮಾಗಡಿ ಮುಖ್ಯರಸ್ತೆಯ ಕಾಸಿಯಾ ಭವನದಲ್ಲಿ ಆಯೋಜಿಸಲಾಗಿದೆ.

ಜನವರಿ 11 ರಂದು ಬೆಳಿಗ್ಗೆ 10 ಗಂಟೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮೇಳವನ್ನು ಉದ್ಘಾಟಿಸಲಿದ್ದಾರೆ. ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ಶಾಸಕರಾದ ಪ್ರಿಯಾಕೃಷ್ಣ ಅವರು ವಹಿಸಲಿದ್ದಾರೆ. ಕೈಮಗ್ಗ ಮತ್ತು ಜವಳಿ, ಸಕ್ಕರೆ ಹಾಗೂ ಕಬ್ಬು ಅಭಿವೃದ್ಧಿ ಸಚಿವರಾದ ಶಿವಾನಂದ ಎಸ್ ಪಾಟೀಲ್ ಅವರು ಮೇಳದಲ್ಲಿ ಭಾಗವಹಿಸಿ ಥೀಮ್ ಪೆವಿಲಿಯನ್ ಉದ್ಘಾಟನೆ ನೆರವೇರಿಸಲಿದ್ದಾರೆ.

ಮೇಳದ ಉದ್ಘಾಟನಾ ಸಮಾರಂಭದಲ್ಲಿ ಸಚಿವರು, ಸಂಸದರು, ವಿಧಾನ ಸಭಾ/ವಿಧಾನ ಪರಿಷತ್ ಸದಸ್ಯರು, ನಾಮ ನಿರ್ದೇಶಿತ ಶಾಸಕರು, ಕರ್ನಾಟಕ ಕೈಮಗ್ಗ ಅಭಿವೃದ್ಧಿ ನಿಗಮ, ಕರ್ನಾಟಕ ರಾಜ್ಯ ಜವಳಿ ಮೂಲ ಸೌಲಭ್ಯ ಅಭಿವೃದ್ಧಿ ನಿಗಮ ಹಾಗೂ ಕರ್ನಾಟಕ ರಾಜ್ಯ ಸಹಕಾರ ಕೈಮಗ್ಗ ನೇಕಾರರ ಮಹಾಮಂಡಳ ನಿ., (ಕಾವೇರಿ ಹ್ಯಾಂಡ್‍ಲೂಮ್ಸ್) ಈ ಸಂಸ್ಥೆಗಳ ಅಧ್ಯಕ್ಷರು, ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಯ ಕಾರ್ಯದರ್ಶಿಗಳು, ಕೈಮಗ್ಗ ಮತ್ತು ಜವಳಿ ಇಲಾಖೆಯ ಆಯುಕ್ತರು ಹಾಗೂ ಅಧಿಕಾರಿಗಳು ಭಾಗವಹಿಸಲಿದ್ದಾರೆ.

ರಾಷ್ಟ್ರೀಯ ಕೈಮಗ್ಗ ಮೇಳವು ಕೇಂದ್ರ ಸರ್ಕಾರದ ಮಹತ್ತರವಾದ ಕಾರ್ಯಕ್ರಮವಾಗಿದ್ದು, ಜಾಗತಿಕ ಮಾರುಕಟ್ಟೆಯಲ್ಲಿ ಕೈಮಗ್ಗ ಉತ್ಪನ್ನಗಳು ಯಾಂತ್ರೀಕೃತ ಗಿರಣಿಗಳ ಉತ್ಪನ್ನಗಳೊಂದಿಗೆ ಸ್ಪರ್ಧಿಸಿ ಮಾರುಕಟ್ಟೆಯನ್ನು ಉತ್ತಮ ಪಡಿಸಿಕೊಳ್ಳಲು ಸಹಕಾರಿಯಾಗಿರುತ್ತದೆ. ಮೇಳದಲ್ಲಿ ದೇಶದ ವಿವಿಧ ರಾಜ್ಯಗಳ ಹಾಗೂ ಕರ್ನಾಟಕ ರಾಜ್ಯದ ವಿವಿಧ ಜಿಲ್ಲೆಗಳ ಕೈಮಗ್ಗ ಸಂಘ ಸಂಸ್ಥೆಗಳು ಉತ್ಪಾದಿಸುವ ವಿವಿಧ ಪಾರಂಪರಿಕ ಉತ್ಪನ್ನಗಳನ್ನು ಪ್ರದರ್ಶನ ಮತ್ತು ಮಾರಾಟಕ್ಕೆ ಇಡಲಾಗಿರುತ್ತದೆ.

ಮೇಳದಲ್ಲಿ ಪಾರಂಪರಿಕ ಹಾಗೂ ಜಿ1 ನೊಂದಾಯಿತ ಮೊಳಕಾಲ್ಮೂರು ಸೀರೆಗಳು, ಇಲಕಲ್ ಸೀರೆಗಳು, ಉಡುಪಿ ಸೀರೆಗಳು, ಗುಳೇದಗುಡ್ಡ ಖಣ ಅಲ್ಲದೆ, ಕಲ್ಲೂರು ರೇμÉ್ಮ ಸೀರೆಗಳು, ನವಲಗುಂದ ಜಮಖಾನಗಳು, ಅಪ್ಪಟ ಉಣ್ಣೆ ಕಂಬಳಿಗಳು, ಹತ್ತಿ ಟವಲ್ ಮತ್ತು ಬೆಡ್ ಶೀಟ್‍ಗಳು, ಉತ್ತರ ರಾಜ್ಯಗಳ ವೈವಿಧ್ಯಮಯ ಸೀರೆಗಳು, ಕ್ವಿಲ್ಟ್‍ಗಳು ಇನ್ನಿತರ ವಿಶೇಷ ಉತ್ಪನ್ನಗಳು ಗ್ರಾಹಕರಿಗೆ ಲಭ್ಯವಿರುತ್ತವೆ.

ಮೇಳದಲ್ಲಿ ಭಾಗವಹಿಸುವ ಸಂಘ ಸಂಸ್ಥೆಗಳು ತಮ್ಮ ವೈವಿಧ್ಯಮಯ ಅಪ್ಪಟ ಹತ್ತಿ, ಉಣ್ಣೆ ಮತ್ತು ರೇμÉ್ಮ ಕೈಮಗ್ಗದ ಉತ್ಪನ್ನಗಳನ್ನು ನೇರವಾಗಿ ಗ್ರಾಹಕರಿಗೆ ಮಾರಾಟ ಮಾಡುವುದರಿಂದ ಗ್ರಾಹಕರಿಗೆ ಸ್ಪರ್ಧಾತ್ಮಕ ದರದಲ್ಲಿ ಉತ್ತಮ ಕೈಮಗ್ಗ ಉತ್ಪನ್ನಗಳು ದೊರೆಯಲಿದ್ದು, ಕೈಮಗ್ಗ ನೇಕಾರರಿಗೆ ನೇರ ಮಾರುಕಟ್ಟೆ ಒದಗಿಸಿ ಅವರಿಗೆ ನಿರಂತರ ಉದ್ಯೋಗ ಒದಗಿಸಲು ಸಹಕಾರಿಯಾಗುತ್ತದೆ.

ಮೇಳದಲ್ಲಿ 100 ಮಾರಾಟ ಮಳಿಗೆಗಳಿರಲಿದ್ದು, ಹೊರ ರಾಜ್ಯಗಳಾದ ಉತ್ತರ ಪ್ರದೇಶ, ಪಶ್ಚಿಮ ಬಂಗಾಳ, ಛತ್ತೀಸ್‍ಗಢÀ, ಆಂಧ್ರಪ್ರದೇಶ, ತೆಲಂಗಾಣ, ಬಿಹಾರ, ಮಹಾರಾಷ್ಟ್ರ, ರಾಜಸ್ಥಾನ, ಜಮ್ಮುಕಾಶ್ಮೀರ ರಾಜ್ಯಗಳಿಂದ 60 ಮಳಿಗೆಗಳಲ್ಲಿ ಮತ್ತು ರಾಜ್ಯದ ವಿವಿಧ ಜಿಲ್ಲೆಗಳಿಂದ 40 ಮಳಿಗೆಗಳಲ್ಲಿ ವೈವಿಧ್ಯಮಯ ಕೈಮಗ್ಗ ಉತ್ಪನ್ನಗಳನ್ನು ಪ್ರದರ್ಶನ ಮತ್ತು ಮಾರಾಟಕ್ಕೆ ವ್ಯವಸ್ಥೆ ಮಾಡಲಾಗಿರುತ್ತದೆ.

ಈ ರಾಷ್ಟ್ರೀಯ ಕೈಮಗ್ಗ ಮೇಳವೂ ಸೇರಿದಂತೆ ರಾಜ್ಯ ಮಟ್ಟದ ಹಾಗೂ ಜಿಲ್ಲಾ ಮಟ್ಟದ ಕೈಮಗ್ಗ ಮೇಳಗಳನ್ನು ಆಯೋಜಿಸಲು ಕಾವೇರಿ ಹ್ಯಾಂಡ್‍ಲೂಮ್ಸ್ ಮಹಾಮಂಡಳವನ್ನು ಕೇಂದ್ರ ಸರ್ಕಾರವು ಅನುμÁ್ಠನ ಏಜೆನ್ಸಿಯಾಗಿ ನೇಮಿಸಿದ್ದು, ಮಹಾಮಂಡಳದ ಸಹಯೋಗದಲ್ಲಿ ಮೇಳಗಳನ್ನು ಯಶಸ್ವಿಯಾಗಿ ಆಯೋಜಿಸಲಾಗುತ್ತಿದೆ. ಇದರಿಂದ ಕೈಮಗ್ಗ ಉತ್ಪನ್ನಗಳ ಮಾರುಕಟ್ಟೆಗೆ ಸೂಕ್ತ ವೇದಿಕೆಯನ್ನು ಕೇಂದ್ರ ಸರ್ಕಾರವು ಸೃಷ್ಟಿಸಿರುತ್ತದೆ.

ರಾಜ್ಯದ ಕೈಮಗ್ಗ ಮತ್ತು ಜವಳಿ ವಲಯದ ಸಮಗ್ರ ಅಭಿವೃದ್ಧಿಗಾಗಿ ಸರ್ಕಾರದಿಂದ ಘೋಷಿಸಿರುವ ಹಾಗೂ ಅನುμÁ್ಠನಗೊಳಿಸಿರುವ ಯೋಜನೆಗಳು:
ಎಲ್ಲಾ ನೇಕಾರರ ಗಣತಿ ಕಾರ್ಯ ಪೂರ್ಣಗೊಂಡಿದ್ದು 1,14,108 ನೇಕಾರರಿಗೆ ಗುರುತಿನ ಕಾರ್ಡ್ ವಿತರಣೆ ಮಾಡಲಾಗುತ್ತಿದೆ. ನೇಕಾರ ಸಮ್ಮಾನ್ ಯೋಜನೆಯಡಿ 42,968 ಕೈಮಗ್ಗ ನೇಕಾರರಿಗೆ ತಲಾ ರೂ.5000/- ಗಳಂತೆ ಒಟ್ಟು ರೂ.21.48 ಕೋಟಿಗಳು ವಾರ್ಷಿಕ ಆರ್ಥಿಕ ನೆರವನ್ನು ನೇರ ನಗದು ವರ್ಗಾವಣೆ (ಡಿಬಿಟಿ) ಮೂಲಕ ಬಿಡುಗಡೆ ಮಾಡಲಾಗಿದೆ.

ಉತ್ಕøಷ್ಟ ಕೈಮಗ್ಗ ನೇಕಾರನ್ನು ಗುರುತಿಸಿ ರಾಜ್ಯ ಮಟ್ಟದ ಪ್ರಶಸ್ತಿ ನೀಡಿ ಗೌರವ ಸಮರ್ಪಣೆ ಮಾಡಿದೆ. 3873 ನೇಕಾರರ ಮಕ್ಕಳಿಗೆ ಉನ್ನತ ಶಿಕ್ಷಣಕ್ಕಾಗಿ ವಿದ್ಯಾನಿಧಿ ಜಾರಿ ಮಾಡಲಾಗಿದೆ. ನೇಕಾರರ ಸಾಮಾಜಿಕ ಭದ್ರತೆಗೆ ಕಚ್ಚಾಮಾಲಿನ ಸಹಾಯ ಧನ, ಜೀವವಿಮೆ, ಮೃತ ನೇಕಾರರಿಗೆ ಅಂತ್ಯ ಸಂಸ್ಕಾರ ವೆಚ್ಚ ಮರುಪಾವತಿ, ಶೇ.20 ರ ರಿಬೇಟ್ ಸಹಾಯಧನ ಸೌಲಭ್ಯ ಮಂಜೂರು ಮಾಡಲಾಗಿದೆ.

10 ಎಚ್.ಪಿ. ವರೆಗಿನ ವಿದ್ಯುತ್ ಸಂಪರ್ಕ ಪಡೆದ ವಿದ್ಯುತ್ ಮಗ್ಗ ಹಾಗೂ ಮಗ್ಗ ಪೂರ್ವ ಘಟಕಗಳಿಗೆ ವಿದ್ಯುತ್ ಬಿಲ್ ಶೂನ್ಯ ದರದಲ್ಲಿ 29,919 ಘಟಕಗಳಿಗೆ ವರದಾನವಾಗಿರುತ್ತದೆ. 20 ಹೆಚ್.ಪಿ. ವರೆಗಿನ ವಿದ್ಯುತ್ ಸಂಪರ್ಕ ಪಡೆದ ವಿದ್ಯುತ್ ಮಗ್ಗ ಹಾಗೂ ಮಗ್ಗ ಪೂರ್ವ ಘಟಕಗಳಿಗೆ ರೂ.37.55 ಕೋಟಿಗಳ ಸಹಾಯಧನವನ್ನು ಎಸ್ಕಾಂಗಳಿಗೆ ಬಿಡುಗಡೆ ಮಾಡಲಾಗಿದೆ.

ಜವಳಿ ನೀತಿಯಡಿ 05 ಎಮ್.ಎಸ್.ಎಮ್.ಇ. ಘಟಕಗಳನ್ನು ಸ್ಥಾಪಿಸಿ 1000 ಕ್ಕಿಂತ ಹೆಚ್ಚು ಉದ್ಯೋಗ ಸೃಷ್ಟಿಸಲಾಗಿದೆ. 1,00000 ಕ್ಕಿಂತ ಹೆಚ್ಚಿನ ಉದ್ಯೋಗ ಸೃಜನೆಗಾಗಿ ಕಲಬುರ್ಗಿಯಲ್ಲಿ ಪಿ.ಎಮ್. ಮಿತ್ರ ಮೆಗಾ ಜವಳಿ ಪಾರ್ಕ್ ಸ್ಥಾಪನೆಗೆ ಸಚಿವ ಸಂಪುಟ ಅನುಮೋದನೆ ನೀಡಿದೆ.

ಪರಿಶಿಷ್ಟ ಜಾತಿ ವಿಶೇಷ ಘಟಕ ಯೋಜನೆ ಹಾಗೂ ಗಿರಿಜನ ಉಪ ಯೋಜನೆಯಡಿ 32 ಎಸ್.ಎಂ.ಇ. ಘಟಕಗಳಿಗೆ ರೂ.13.44 ಕೋಟಿಗಳ ಸಹಾಯಧನವನ್ನು ಬಿಡುಗಡೆ ಮಾಡಲಾಗಿದೆ. ಈ ಘಟಕಗಳಿಂದ 3289 ಉದ್ಯೋಗಾವಕಾಶ ಕಲ್ಪಿಸಲಾಗಿದೆ. ಕೈಮಗ್ಗ ಅಭಿವೃದ್ಧಿ ನಿಗಮದ ನೇಕಾರರಿಗೆ ನಿರಂತರ ಕಚ್ಚಾಮಾಲು ಸರಬರಾಜು ಮತ್ತು ಕೈಮಗ್ಗ ಅಭಿವೃದ್ಧಿ ನಿಗಮದ ಪುನಃಶ್ಚೇತನಕ್ಕೆ ಒತ್ತು ನೀಡಲಾಗಿದೆ ಎಂದು  ಕಾವೇರಿ ಹ್ಯಾಂಡ್ ಲೂಮ್ಸ್ ವ್ಯವಸ್ಥಾಪಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Don’t miss your news!

We don’t spam! Read our privacy policy for more info.

Don’t miss your news!

We don’t spam! Read our privacy policy for more info.

Don’t miss your news!

We don’t spam! Read our privacy policy for more info.

Don’t miss your news!

We don’t spam! Read our privacy policy for more info.

Related Articles

Stay Connected

0FansLike
3,912FollowersFollow
0SubscribersSubscribe
- Advertisement -spot_img

Latest Articles

error: Content is protected !!