Site icon MOODANA Web Edition

ಮುಂಬಡ್ತಿ ಹೊಂದಿದ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಸಿಬ್ಬಂದಿಗಳಿಗೆ ಸನ್ಮಾನ

ಹುಬ್ಬಳ್ಳಿ (ಕರ್ನಾಟಕ ವಾರ್ತೆ) ಜ.09 :ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಹುಬ್ಬಳ್ಳಿ ತಾಲೂಕಿನಲ್ಲಿ ಕಿರಿಯ ನಿಲಯ ಮೇಲ್ವಿಚಾರಕರಾಗಿ ನಿರತರಾಗಿರುವ ಲಕ್ಷ್ಮೀಬಾಯಿ ಮೊರಬ ಹಾಗೂ ಸಿದ್ದಪ್ಪ ಎಸ್. ಮಾರಿಹಾಳ ಅವರಿಗೆ ನಿಲಯ ಮೇಲ್ವಿಚಾರಕರ ಹುದ್ದೆಗೆ ಮುಂಬಡ್ತಿ ಹುದ್ದೆಗೆ ಹೊಂದಿರುವುದರಿಂದ ಅವರನ್ನು ಇಂದು ತಾಲೂಕಾ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಹುಬ್ಬಳ್ಳಿಯಲ್ಲಿ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ತಾಲೂಕಾ ಕಲ್ಯಾಣಾಧಿಕಾರಿಗಳಾದ ಸಿ.ವ್ಹಿ.ಕರವೀರಮಠ ಅವರು ಲಕ್ಷ್ಮೀಬಾಯಿ ಮೊರಬ ಹಾಗೂ ಸಿದ್ದಪ್ಪ ಎಸ್. ಮಾರಿಹಾಳ ಅವರಿಗೆ ಮುಂಬಡ್ತಿ ಹೊಂದಿರುವುದಕ್ಕೆ ಅಭಿನಂಧನೆ ಸಲ್ಲಿಸಿ ಮಾತನಾಡಿ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಲ್ಲಿ ನಿಮ್ಮ ಸೇವೆ ಅಪಾರವಾದದ್ದಾಗಿದೆ. ಮುಂದಿನ ದಿನಗಳಲ್ಲಿ ನೀವು ಮುಂಬಡ್ತಿ ಹೊಂದಿ ನಿಲಯ ಮೇಲ್ವಿಚಾರಕರ ಹುದ್ದೆಗೆ ಅಲಂಕರಿಸಲಿದ್ದು, ಜವಾಬ್ದಾರಿಯುತ ಪ್ರಾಮಾಣಿಕ ಸೇವೆ ಸಲ್ಲಿಸಬೇಕೆಂದು ಶುಭ ಹಾರೈಸಿದರು.
ತಾಲೂಕು ಹಿಂದುಳಿದ ವರ್ಗಗಳ ವಿಸ್ತರಣಾಧಿಕಾರಿ ಎಸ್,ವೈ. ಗುರಣ್ಣನವರ, ಪ್ರಲ್ಹಾದ ಗೆಜ್ಜಿ, ಎಮ್.ವೈ. ಮುಜಾವರ, ರಾಮಯ್ಯ ಪೂಜಾರ, ಗುರುನಾಥ ಕಾಂಬಳೆ, ಶೋಭಾ ಚಾಕಲಬ್ಬಿ, ಪ್ರಸಾದ ಕಾಂಬಳೆ, ಅನಿತಾ ಬೆಕ್ಕಿನಕಣ್ಣನವರ, ಸಿದ್ದಪ್ಪ ಯಮಕನಮರ್ಡಿ,ಕರಿಯಪ್ಪ ಕನಕೂರ ಇತರರು ಉಪಸ್ಥಿತರಿದ್ದರು.

Exit mobile version