Site icon MOODANA Web Edition

ಟಿಬಿ ಮುಕ್ತ ಭಾರತ ಅಭಿಯಾನದ ಪ್ರಗತಿ ಪರಿಶೀಲನೆ ಸಭೆ ನಡೆಸಿದ ರಾಜ್ಯಪಾಲರು

ಬೆಂಗಳೂರು, ಜನವರಿ 09 (ಕರ್ನಾಟಕ ವಾರ್ತೆ):
  ಕರ್ನಾಟಕದ ಗೌರವಾನ್ವಿತ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ಅವರು ರಾಜಭವನದಲ್ಲಿ ಪ್ರಧಾನ ಮಂತ್ರಿ ಟಿಬಿ ಮುಕ್ತ ಭಾರತ ಅಭಿಯಾನದ ಪ್ರಗತಿ ಪರಿಶೀಲನೆ ಸಭೆ ನಡೆಸಿದರು.

ಈ ವೇಳೆ ಅನಿಲ್ ಟಿ.ಕೆ ಪ್ರಧಾನ ಕಾರ್ಯದರ್ಶಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ, ಡಾ.ನವೀನ್ ಭಟ್-ಮಿಷನ್ ನಿರ್ದೇಶಕ ಎನ್‍ಎಚ್‍ಎಂ, ಡಾ.ಶಿವಯೋಗಪ್ಪ.ಯು – ಜಂಟಿ ನಿರ್ದೇಶಕ ಎನ್‍ಟಿಇಪಿ, ಡಾ.ಅನಿಲ್.ಎಸ್ – ಉಪನಿರ್ದೇಶಕ ಎನ್‍ಇಟಿಪಿ, ಡಾ.ಕಿರಣ್.ಕೆ -ಡಬ್ಲ್ಯುಎಚ್‍ಒ ಸಲಹೆಗಾರ ಎನ್‍ಟಿಇಪಿ ಉಪಸ್ಥಿತರಿದ್ದರು.

Exit mobile version